ಹಾನಗಲ್:
ಪ್ರಜಾಪ್ರಭುತ್ವದಲ್ಲಿ ಮತದಾರ ಮಾಲೀಕ. ಸರ್ಕಾರದಲ್ಲಿ ಇದ್ದವರು ತಮ್ಮ ಮತದಾರ ಸಂಕಷ್ಟಕ್ಕೆ ಸ್ಪಂದಿಸಬೇಕು. ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಹೇಳಿದರು.ಸೋಮವಾರ ಹಾನಗಲ್ಲ ತಾಲೂಕಿನ ಕೆಲವರಕೊಪ್ಪ, ಶಿರಗೋಡ, ಕೊಂಡೋಜಿ ಹಾಗೂ ಅರಳೇಶ್ವರ ಗ್ರಾಮಗಳಲ್ಲಿ ಕಾಂಗ್ರೇಸ್ ಅಭ್ಯರ್ಥಿ ಶ್ರೀನಿವಾಸ ಮಾನೆಯವರ ಪರ ನಡೆದ ಚುನಾವಣಾ ಪ್ರಚಾರದಲ್ಲಿ ಮಾತನಾಡಿದ ಅವರು,ಕೊರೊನಾ ಸಂದರ್ಭದಲ್ಲಿ ಯಾವುದೇ ಸರ್ಕಾರ ಸ್ಪಂದಿಸದಿದ್ದಾಗ ನಮ್ಮ ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ ಮಾನೆ ಪ್ರತಿ ಮನೆಗೆ ಹೋಗಿ 2ಸಾವಿರ ರೂಪಾಯಿ ಚೆಕ್ ನೀಡಿದ್ದಾರೆ.
ಅಲ್ಲದೇ ಕಷ್ಟದಲ್ಲಿ ಇದ್ದ ಪ್ರತಿಯೊಬ್ಬರಿಗೂ ಆಹಾರ ಕಿಟ್ ವಿತರಿಸಿದ್ದಾರೆ. ಆದರೆ ಬಿಜೆಪಿ ಸರ್ಕಾರ ಕೊರೊನಾ ಸಂಧರ್ಭದಲ್ಲಿ 25 ಸಾವಿರ ಕಿಟ್ ಹಂಚಿದ್ದೇವೆ ಎಂದು ಹೇಳುತ್ತಿದೆ ಅದು ಯಾರು ಕೊಟ್ಟಿದ್ದು? ಸರ್ಕಾರ ಕೊಟ್ಟಿದ್ದು. ನೀವೂ ಸ್ವಂತ ಕೊಟ್ಟಿದ್ದಲ್ಲ ಬೊಮ್ಮಾಯಿಯವರೇ ಎಂದು ಪ್ರಶ್ನಿಸಿದರು
ಈಗಿನ ಬೊಮ್ಮಾಯಿಯವರ ಸರ್ಕಾರ ಹಾಗೂ ಮಾಜಿ ಸಿಎಂ ಯಡಿಯೂರಪ್ಪನವರ ಸಾಧನೆ ಶೂನ್ಯ,ಸುಳ್ಳು ಹೇಳುವ ಯಾವುದಾದರೂ ಪಕ್ಷಗಳಿದ್ದರೆ ಇದ್ದರೆ ಅದು ರಾಜ್ಯ ಹಾಗೂ ಕೇಂದ್ರದ ಬಿಜೆಪಿ ಮಾತ್ರ. ಅಚ್ಛೆ ದಿನ ಬರುತ್ತೇ ಎಂದು ಹೇಳಿದ್ದರು ಬಂದಿದಿಯಾ? ಇಲ್ಲಾ ಇಲ್ಲಿಂದ 25ಜನ ಸಂಸದರಾಗಿದ್ದಾರೆ. ಆದರೆ ಒಬ್ಬರು ರಾಜ್ಯದ ಪರ ಧ್ವನಿ ಎತ್ತಿಲ್ಲ. ಇಲ್ಲಿಗೆ ಬರಬೇಕಾದ ಯಾವುದೇ ಪರಿಹಾರ ತಂದಿಲ್ಲ. ಇದರಿಂದ ರಾಜ್ಯದ ಜನ ಈ ಸರ್ಕಾರದ ವಿರುದ್ಧ ಬೇಸತ್ತು ಹೋಗಿದ್ದಾರೆ ಎಂದ ಡಿಕೆಶಿ.ಪ್ರಧಾನಿ ನರೇಂದ್ರ ಮೋದಿ ಹಾಗೂ ನಮ್ಮ ರಾಜ್ಯದಿಂದಲೇ ಆಯ್ಕೆ ಆಗಿ ಹೋದ ನಿರ್ಮಲಾ ಸೀತಾರಾಮ ಅವರು ಈಗ ಕೇಂದ್ರದಲ್ಲಿ ಆರ್ಥಿಕ ಸಚಿವರಾಗಿದ್ದಾರೆ.
ಇವರು ಜನರಿಗೆ ನಿಮ್ಮ ಖಾತೆಗೆ ದುಡ್ಡು ಹಾಕುತ್ತೇವೆ ಎಂದು ಭರವಸೆ ಹುಟ್ಟಿಸಿದ್ದಾರೆ ಆದರೆ ಯಾರೋಬ್ಬ ಖಾತೆಗೂ ಒಂದು ಪೈಸೆ ಹಣ ಬಂದಿಲ್ಲ ಎಂದರು.ಮಾಜಿ ಕೇಂದ್ರ ಸಚಿವ ಕೆ.ಎಚ್.ಮುನಿಯಪ್ಪ ಮಾತನಾಡಿ,ಶ್ರೀನಿವಾಸ ಮಾನೆ ಅವರು ಸೋತರೂ ನಿರಂತರವಾಗಿ ಪ್ರಾಮಾಣಿಕವಾಗಿ ಕ್ಷೇತ್ರದ ಅಭಿವೃದ್ಧಿಗೆ ಕೆಲಸ ಮಾಡಿದ್ದಾರೆ. ಶ್ರೀನಿವಾಸ್ ಮಾನೆ ಕ್ಷೇತ್ರದಲ್ಲೆ ಉಳಿದು ನಿರಂತರ ಮೂರು ವರ್ಷಗಳ ಕಾಲ ಜನರ ನೋವಿಗೆ ಸ್ಪಂಧಿಸಿ ಜನಪರ ಕೆಲಸ ಮಾಡಿದ್ದಾರೆ. ಶ್ರೀನಿವಾಸ್ ಮಾನೆ ಮನೆ ಮಗನಾಗಿದ್ದಾರೆ.
ಬಿಜೆಪಿಗೆ ಏಕೆ ಮತ ಹಾಕಬೇಕು ಎಂದು ಜನರೇ ಕೇಳುತ್ತಿದ್ದಾರೆ. ಬಿಜೆಪಿ ನಾಯಕರು ಸುಳ್ಳು ಹೇಳಿ ಕಾಲ ಕಳೆಯುತ್ತಿದ್ದಾರೆ. ಕಪ್ಪುಹಣ ತರುವುದಾಗಿ ಬಡಾಯಿ ಕೊಚ್ಚಿಕೊಂಡು ಮೌನಕ್ಕೆ ಜಾರಿದ್ದಾರೆ. ಜನ ಬಿಜೆಪಿ ಬಗೆಗೆ ಭ್ರಮನಿರಸಗೊಂಡಿದ್ದು, ಆಕ್ರೋಶಯಾತ್ರೆ ಮಾಡಲಿದ್ದಾರೆ ಎಂದರಲ್ಲದೇ ಐತಿಹಾಸಿಕ ಪುಣ್ಯಭೂಮಿ ಎನಿಸಿರುವ ಹಾನಗಲ್ ಕ್ಷೇತ್ರದ ಜನರ ಸೇವೆ ಮಾಡಲು ಮಾನೆ ಅವರಿಗೆ ಸದಾವಕಾಶ ಒದಗಿಸಿಕೊಡಿ ಎಂದು ಮನವಿ ಮಾಡಿದರು.
ಕಾಂಗ್ರೇಸ್ ಅಭ್ಯರ್ಥಿ ಶ್ರೀನಿವಾಸ ಮಾನೆ ಮಾತನಾಡಿ,ಇಷ್ಟು ವರ್ಷಗಳ ರಾಜಕೀಯ ಪಯಣದಲ್ಲಿ ಎಂದಿಗೂ ನಾನು ಜಾತಿ, ಧರ್ಮಗಳ ಆಧಾರದಲ್ಲಿ ಭೇದಭಾವ ಮಾಡಿಲ್ಲ, ಶ್ರೀಮಂತ-ಬಡವ ಎಂದು ಎಣಿಸಿಲ್ಲ. ಎಲ್ಲರೂ ಒಂದೇ, ಕ್ಷೇತ್ರದ ಅಭಿವೃದ್ಧಿಯೊಂದೇ ನನ್ನ ಗುರಿ ಇದೆ ಎಂದು ಹೇಳಿದರು.ಇ ಸಂಧರ್ಭದಲ್ಲಿ ಕೆಪಿಸಿಸಿ ಕಾಯಾದ್ಯಕ್ಷ ಸಲಿಂ ಅಹಮ್ಮದ್, ಮಾಜಿ ಸಚಿವ ಎಚ್.ಕೆ.ಪಾಟೀಲ,ಮಾಜಿ ಸಚಿವ ಮನೋಹರ ತಹಶಿಲ್ದಾರ, ಮಾಜಿ ಶಾಸಕ ಅಲ್ಲಮ ಫ್ರಭು,ಕೆಪಿಸಿಸಿ ಮುಖಂಡ ಪ್ರಕಾಶಗೌಡ ಪಾಟೀಲ, ಕೆಪಿಸಿಸಿ ಮಿನುಗಾರರ ವಿಭಾಗದ ರಾಜ್ಯಾದ್ಯಕ್ಷ ಮಂಜುನಾಥ ಸುಣಗಾರ ಮತ್ತಿತರರಿದ್ದರು.
ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ ಹಾನಗಲ್ಲ ತಾಲೂಕಿನ ವಿವಿಧ ಗ್ರಾಮಗಳಿಗೆ ಕಾಂಗ್ರೇಸ್ ಆಭ್ಯರ್ಥಿ ಶ್ರೀನಿವಾಸ ಮಾನೆ ಪರ ಪ್ರಚಾರ ಕೈಗೊಂಡರು