ಹಾನಗಲ್ಲ:
ತಾಲ್ಲೂಕಿನ ಉಪಚುನಾವಣೆಯ ಪ್ರಚಾರಾರ್ಥವಾಗಿ ಸೋಮವಾರ ಬೊಮ್ಮನಹಳ್ಳಿ, ತಿಳವಳ್ಳಿ, ಹಾಗೂ ಹಿರೂರ ಜಿಲ್ಲಾ ಪಂಚಾಯತಿ ವ್ಯಾಪ್ತಿಯಲ್ಲಿ ಸಂಸದ ಶಿವಕುಮಾರ ಉದಾಸಿ, ಸಾರಿಗೆ ಸಚಿವ ಶ್ರೀರಾಮುಲು, ಕೃಷಿ ಸಚಿವ ಬಿ.ಸಿ. ಪಾಟೀಲ ಪ್ರತ್ಯೆಕವಾಗಿ ಬಿಜೆಪಿ ಅಭ್ಯರ್ಥಿ ಶಿವರಾಜ ಸಜ್ಜನರ ಪರ ಪ್ರಚಾರ ಕೈಗೊಂಡರು.
ಈ ಸಂಧರ್ಭದಲ್ಲಿ ಮಾತನಾಡಿದ ಸಂಸದ ಶಿವಕುಮಾರ ಉದಾಸಿ, ಜನರ ಉತ್ಸಾಹ ಮತ್ತು ಸ್ಪಂದನೆಯನ್ನು ನೋಡಿ ನಮ್ಮ ಗೆಲುವು ನಿಶ್ಚಿತ ಹಾನಗಲ್ಲ ತಾಲ್ಲೂಕಿನ ಮತದಾರರು ತುಂಬಾ ಪ್ರಬುದ್ದರಿದ್ದಾರೆ. ಅಭಿವೃಧಿ ಪರಮತಚಲಾಯಿಸಿದ್ದಾರೆ ಇದಕ್ಕೆ ಸಾಕ್ಷಿ ದಿ. ಸಿ ಎಮ್ ಉದಾಸಿಯವರು. 6 ಬಾರಿ ಗೆದ್ದರು ಕ್ಷೇತ್ರದ ಅಭಿವೃದ್ದಿಗೆ ಶ್ರಮಿಸಿದವರು, ಅವರು ಹೇಳುವಂತೆ ನಾವು ಮಾತನಾಡುವ ಮೊದಲು ನಮ್ಮ ಕೆಲಸಗಳು ಮಾತನಾಡುವಂತೆ ತಾಲೂಕಿನಲ್ಲಿ ಅವರ ಅಭಿವೃದ್ದಿ ಕೆಲಸಗಳು ನಮ್ಮ ಅಭ್ಯರ್ಥಿಗೆ ಶ್ರೀರಕ್ಷೆಯಾಗಲಿದೆ ಎಂದರು.
ಬಿಜೆಪಿ ಅಭ್ಯರ್ಥಿಶಿವರಾಜ ಸಜ್ಜನರ ಮಾತನಾಡಿ ನನ್ನ ವಿರುದ್ದ ಅಪಪ್ರಚಾರ ಮಾಡುತ್ತಿರುವ ಕಾಂಗೇಸ್ ನಾಯಕರಿಗೆ ನನ್ನ ಗೆಲುವಿನ ಮುಖಾಂತರ ನಿಮ್ಮಗೆ ಉತ್ತರ ಕೋಡುತ್ತೇನೆ. ನಿಮ್ಮ ಹಗರಣ ರಾಜ್ಯದ ಜನತೆಗೆ ಈಗಾಗಲೆ ತಿಳಿದಿದೆ ಎಚ್ಚರದಿಂದ ಆರೋಪ ಮಾಡಿ. ಸುಳ್ಳು ಮಾಹಿತಿ ನೀಡಿ ಜನರಿಗೆ ಗೊಂದಲ ವಾತಾವರಣ ಸೃಷ್ಟಿಸಬೇಡಿ ಹಾನಗಲ್ಲ ಮತದಾರರಿಗೆ ಗೊತ್ತು,ನಾನಾಗಲಿ ದಿ.ಸಿ.ಎಂ.ಉದಾಸಿಯವರಾಗಲಿ ರೈತರ ಪರ ಕೆಲಸ ಮಾಡಿದವರು ತಾಲೂಕಿನಲ್ಲಿಯೇ ಅತಿ ಹೆಚ್ಚು ಬೆಳೆವಿಮೆ ಕೊಡಿಸಿದಂತ ನಾಯಕರು ಉದಾಸಿಯವರು ಎಂದರು.
ಹಿರೂರ ಕ್ಷೇತ್ರದಲ್ಲಿ ಕೃಷಿ ಸಚಿವ ಬಿ,ಸಿ. ಪಾಟೀಲ ಅಭ್ಯಥಿ ಪರ ಮತಯಾಚಿಸಿದರು ಮಾತನಾಡಿ, ಹಾನಗಲ್ಲ ಕ್ಷೇತ್ರದ ರೈತರಿಗೆ ಮುಂದಿನ ದಿನಮಾನಗಳಲ್ಲಿ ರೈತ ಪರ ಯೋಜನೆಗಳು ಸಮಗ್ರ ಅಭಿವೃದ್ದಿ ಸದಾ ನಿಮ್ಮ ಜೊತೆಗಿದ್ದೆನೆಈ ಬಾರಿ ನಮ್ಮ ಅಭ್ಯರ್ಥಿ ಶಿವರಾಜ ಸಜ್ಜನವರಿಗೆ ಮತದಾನ ಮಾಡಿ ಕ್ಷೇತಗ್ರದ ಹಾಗೂ ಜಿಲ್ಲೆಯ ಹೆಮ್ಮೆಯ ನಾಯಕರಾದ ಬಸವರಾಜ ಬೊಮ್ಮಾಯಿಯವರ ಕೈ ಬಲ ಪಡಿಸುವ ಮೂಲಕ ಮತೊಮ್ಮ ಬಿಜೆಪಿ ಗೆಲ್ಲಿಸಿ ಕ್ಷೇತ್ರದ ಅಭಿವೃದ್ದಿಗೆ ಶ್ರಮಿಸಿ ಎಂದರು.
ಚಿಕ್ಕೆರಿಹೊಸಳ್ಳಿ, ಆರೇಗೋಪ್ಪ ಹುಣಶಟ್ಟಿಕೋಪ್ಪ, ಮಂತಗಿ, ಹಿರೇಕಣಗಿ, ಬಿದುರಕೋಪ್ಪ, ಗೋಟಗೋಡಿ, ಹಂದಿಹಾಳ,ಲಕ್ಷ್ಮಿಪುರ, ಶಿವಪುರ ಈ ಗ್ರಾಮಗಳು ಸೇರಿದಂತೆ ಒಟ್ಟು 10 ಗ್ರಾಮಗಳಲ್ಲಿ ರೋಡ್ ಶೋ ಮೂಲಕ ಮತಯಾಚಿಸಿದರು. ಹಾನಗಲ್ಲ ಬಿಜೆಪಿ ಅಭ್ಯರ್ಥಿ ಶಿವರಾಜ ಸಜ್ಜನವರ ಪರ ಬೊಮ್ಮನಹಳ್ಳಿ, ತಿಳವಳ್ಳಿ, ಹಾಗೂ ಹಿರೂರ ಜಿಲ್ಲಾ ಪಂಚಾಯತಿ ವ್ಯಾಪ್ತಿಯಲ್ಲಿ ಸಂಸದ ಶಿವಕುಮಾರ ಉದಾಸಿ, ಸಾರಿಗೆ ಸಚಿವ ಶ್ರೀರಾಮುಲು, ಕೃಷಿ ಸಚಿವ ಬಿ.ಸಿ. ಪಾಟೀಲ ಮತಯಾಚಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ