ಬಿಜೆಪಿ ಬಣ ಸಂಘರ್ಷಕ್ಕೆ ವೇದಿಕೆಯಾದ ವಕ್ಫ್ ಹೋರಾಟ….!

ಬಾಗಲಕೋಟೆ:

   ವಕ್ಫ್ ವಿಚಾರ ಇಟ್ಟುಕೊಂಡು ನಮ್ಮ ಭೂಮಿ, ನಮ್ಮ ಹಕ್ಕು ಹೋರಾಟಕ್ಕೆ ಮುಂದಾಗಿರುವ ಬಿಜೆಪಿಗೆ ಬಣ ಸಂಘರ್ಷದ ವಿಘ್ನ ಎದುರಾಗಿದೆ.

   ನಿಗದಿಯಂತೆ ನವನಗರದ ಜಿಲ್ಲಾ ಬಿಜೆಪಿ ಕಚೇರಿಯಿಂದ ಮೆರವಣಿಗೆ ಜಿಲ್ಲಾಡಳಿತ ಭವನದವರೆಗೆ ಮೆರವಣಿಗೆ ನಡಯಬೇಕಿತ್ತು ಆದರೆ ವಿಧಾನ ಪರಿಷತ್ ಸದಸ್ಯ ಪಿ.ಎಚ್.ಪೂಜಾರ ಹಾಗೂ ಮಾಜಿ ಶಾಸಕ ವೀರಣ್ಣ ಚರಂತಿಮಠ ನಡುವೆ ಸಂಘರ್ಷ ಏರ್ಪಟ್ಟಿರುವುದರಿಂದ ಬಿಜೆಪಿ ಕಚೇರಿಯಲ್ಲಿ ಆತಂಕದ ವಾತಾವರಣ ಮನೆ ಮಾಡಿದೆ.

    ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ವಿರೋಧಿ ಚಟುಚಟಿಕೆಯಲ್ಲಿ ಕಾಣಿಸಿಕೊಂಡವರು ಪಕ್ಷದ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುತ್ತಿರುವುದಕ್ಕೆ ಮಾಜಿ ಶಾಸಕ ವೀರಣ್ಣ ಚರಂತಿಮಠ ಹಾಗೂ ಬಿಜೆಪಿ ಪದಾಧಿಕಾರಿಗಳು ಆಕ್ಷೇಪಿಸಿ ಕಾರ್ಯಕ್ರಮಗಳಲ್ಲಿ ಭಾಗಿಯಾಗದಂತೆ ಪತ್ರಿಕಾ ಪ್ರಕಟಣೆಯನ್ನೂ ನೀಡಿದ್ದರು.

     ಅದಾದ ನಂತರವೂ ಕೆಲವರು ಕಾಣಿಸಿಕೊಂಡಿರುವುದು ವೀರಣ್ಣ ಚರಂತಿಮಠ ಅವರ ಆಕ್ಷೇಪಕ್ಕೆ ಕಾರಣವಾಯಿತು. ಪಕ್ಷದ ಕಚೇರಿಗೆ ಆಗಮಿಸಿದ ಚರಂತಿಮಠ ಅವರು ಪಿ.ಎಚ್.ಪೂಜಾರ ಬೆಂಬಲಿಗರನ್ನು ತರಾಟೆಗೆ ತೆಗೆದುಕೊಂಡರು.ನಂತರ ಪಕ್ಷದ ನಾಯಕರು ವೀರಣ್ಣ ಚರಂತಿಮಠ ಅವರನ್ನು ಸಮಾಧಾನಾ ಪಡುಸಿ ಅವರ ಹಾಗೈ ಪಿ.ಎಚ್.ಪೂಜಾರ ಅವರ ನಡುವೆ ಸಂಧಾನ ಸಭೆ ನಡೆಸಿದರು.

Recent Articles

spot_img

Related Stories

Share via
Copy link