ಬಿಜೆಪಿ ನಾಯಕರು ಮಾನಸಿಕ ಮತ್ತು ರಾಜಕೀಯ ಸಮತೋಲನ ಕಳೆದುಕೊಂಡಿದ್ದಾರೆ : ಕಾಂಗ್ರೆಸ್

ಬೆಂಗಳೂರು

     ಕಾಂಗ್ರೆಸ್ ವರಿಷ್ಠೆ ಸೋನಿಯಾ ಗಾಂಧಿ ಅವರನ್ನು ‘ವಿಷಕನ್ಯೆ’ ಎಂದು ಟೀಕಿಸಿರುವ ಬಿಜೆಪಿ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಪಕ್ಷದಿಂದ ಉಚ್ಚಾಟಿಸುವಂತೆ ಕಾಂಗ್ರೆಸ್ ಒತ್ತಾಯಿಸಿದೆ.

     ಈ ಕುರಿತು ಟ್ವೀಟ್ ಮಾಡಿದ್ದು, ಬಿಜೆಪಿ ನಾಯಕರು ತಮ್ಮ ಮಾನಸಿಕ ಮತ್ತು ರಾಜಕೀಯ ಸಮತೋಲನ ಕಳೆದುಕೊಂಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಮಾರ್ಗದರ್ಶನದಲ್ಲಿ ಯತ್ನಾಳ್ ಗಾಂಧಿ ವಿರುದ್ಧದ ಅತ್ಯಂತ ಕೆಟ್ಟ ರೀತಿಯ ನಿಂದನಾತ್ಮಕ ಹೇಳಿಕೆ ನೀಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

     ವಿಧಾನಸಭಾ ಚುನಾವಣೆಯಲ್ಲಿ ಸೋಲುವ ಹತಾಶೆಯಿಂದ ಬಿಜೆಪಿ ನಾಯಕರು ಕೊಳಕು ಮನಸ್ಥಿತಿಯಿಂದ ಕಾಂಗ್ರೆಸ್ ನಾಯಕರನ್ನು ಅಪಮಾನಿಸುತ್ತಿದ್ದಾರೆ. ಬಿಜೆಪಿಯವರು ರಾಜಕೀಯ ಸಮತೋಲನ ಮತ್ತು ಸಭ್ಯತೆ ಕಳೆದುಕೊಂಡಿದ್ದು, ಅತ್ಯಂಕ ಕೆಳಮಟ್ಟಕ್ಕೆ ಇಳಿದಿದ್ದಾರೆ ಎಂದು ಟೀಕಿಸಿದೆ. ಯತ್ನಾಳ್ ಹೇಳಿಕೆ ದೇಶದ ಸಂಸ್ಕೃ ತಿಗೆ ಧಕ್ಕೆ ತರುವಂತಹದ್ದು, ಇದು ಸೋನಿಯಾಗಾಂಧಿ ಅವರೊಬ್ಬರ ಪ್ರಶ್ನೆಯಲ್ಲ, ಇಡೀ ಸ್ತ್ರೀ ಕುಲದ ಘನತೆಯ ಪ್ರಶ್ನೆಯಾಗಿದೆ ಎಂದು ವಾಗ್ದಾಳಿ ನಡೆಸಿದೆ.

    ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ವಿಷಪೂರಿತ ಹಾವಿಗೆ ಹೋಲಿಸಿದ ನಂತರ ಬಿಜಾಪುರ ಶಾಸಕ ಮತ್ತು ಮಾಜಿ ಸಚಿವ ಯತ್ನಾಳ್ ಅವರು ಚುನಾವಣಾ ಪ್ರಚಾರದಲ್ಲಿ ಸೋನಿಯಾ ಗಾಂಧಿ ವಿರುದ್ಧ ವಿಷಕನ್ಯೆ ಎಂದು ಟೀಕೆ ಮಾಡಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap