ಕಾಂಗ್ರೆಸ್‌ ನಾಯಕರಿಗೆ ತಿರುಗೇಟು ನೀಡಿದ ಬಿಜೆಪಿ ಸಂಸದ…..!

ಬೆಂಗಳೂರು

     ರಾಜ್ಯ ವಿಧಾನಸಭಾ ಚುನಾವಣಾ ಫಲಿತಾಂಶ ಪ್ರಕಟವಾಗಿ ಬರೋಬ್ಬರಿ 5 ತಿಂಗಳು ಪೂರ್ಣಗೊಂಡರು ಸಹ ವಿಪಕ್ಷ ನಾಯಕನ ಆಯ್ಕೆ ವಿಳಂಬವಾಗುತ್ತಿರುವ ಕುರಿತು ರಾಜ್ಯ ಕಾಂಗ್ರೆಸ್‌ ನಾಯಕರು ಬಿಜೆಪಿ ವಿರುದ್ದ ಟೀಕಾ ಮಾಡಿದ್ದು, ಇದರಿಂದ ಬಿಜೆಪಿ ಭಾರೀ ಮುಜುಗರಕ್ಕೊಳಗಾಗಿದೆ.

    ಇನ್ನೂ ಬಿಜೆಪಿಯಲ್ಲಿ ವಿರೋಧ ಪಕ್ಷದ ನಾಯಕರಾಗಲು ಸಮರ್ಥರು ಯಾರೂ ಇಲ್ಲವೇ? ಬಸವರಾಜ ಬೊಮ್ಮಾಯಿ, ಆರ್. ಅಶೋಕ, ಅಶ್ವತ್‌ನಾರಾಯಣ, ಸುನಿಲ್ ಕುಮಾರ್, ಯತ್ನಾಳ ಅವರೆಲ್ಲ ಅಸಮರ್ಥರೇ ಎಂದು ಪ್ರಶ್ನೆ ಮಾಡಿದ್ದ ಸಚಿವ ಎಂ.ಬಿ. ಪಾಟೀಲ್ ಅವರಿಗೆ ಬಿಜೆಪಿ ಸಂಸದ ಲೆಹರ್ ಸಿಂಗ್ ತಿರುಗೇಟು ಕೊಟ್ಟಿದ್ದಾರೆ.

     ಈ ಕುರಿತು ಸಂಸದ ಲೆಹರ್‌ ಸಿಂಗ್‌ ಟ್ವೀಟ್‌ ಮಾಡಿದ್ದು, ಕಾಂಗ್ರೆಸ್‌ನಲ್ಲಿ ಸಮರ್ಥ ನಾಯಕರು ಇರಲಿಲ್ಲವೇ? ಜೆಡಿಎಸ್ ನಿಂದ ಸಿದ್ದರಾಮಯ್ಯನವರನ್ನು ಆಮದು ಮಾಡಿಕೊಂಡು ಮುಖ್ಯಮಂತ್ರಿ ಮಾಡಲು ಕಾರಣವೇನು? ಎಂದು ಲಹರ್ ಸಿಂಗ್ ಪ್ರಶ್ನೆ ಮಾಡಿದ್ದಾರೆ.

    ಬಿಜೆಪಿಯಲ್ಲಿ ವಿಪಕ್ಷ ನಾಯಕರಾಗಲು ಸಮರ್ಥರಿಲ್ಲವೇ, ಜೆಡಿಎಸ್ ನಾಯಕ ಹೆಚ್.ಡಿ.ಕುಮಾರಸ್ವಾಮಿ ಮುಂದಾಳತ್ವ ವಹಿಸಲು ಬಿಜೆಪಿಯವರು ಏಕೆ ಕೇಳುತ್ತಿದ್ದಾರೆ ಎಂದು ಕರ್ನಾಟಕ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಪ್ರಶ್ನಿಸಿದ್ದಾರೆ. ಆದರೆ, ಮೊದಲು ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿಯಾಗಲು ಸಮರ್ಥ ನಾಯಕರಿರಲಿಲ್ಲವೇ ಎಂಬ ಪ್ರಶ್ನಿಸಿದ್ದಾರೆ.

    ಜೆಡಿಎಸ್ ನಾಯಕ ಸಿದ್ದರಾಮಯ್ಯನವರನ್ನು ಕಾಂಗ್ರೆಸ್ ಆಮದು ಮಾಡಿಕೊಂಡಿದ್ದು ಏಕೆ? ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್, ಡಿ.ಕೆ.ಶಿವಕುಮಾರ್, ಎಚ್.ಕೆ.ಪಾಟೀಲ್ ಅಥವಾ ಎಂ.ಬಿ.ಪಾಟೀಲ್ ಅವರನ್ನೇ ಏಕೆ ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಲಿಲ್ಲ? ಎಂದು ಪ್ರಶ್ನಿಸಿದ್ದಾರೆ.

   ವಿಪಕ್ಷ ನಾಯಕನ ಆಯ್ಕೆ ವಿಳಂಬವಾಗುತ್ತಿರುವ ಕುರಿತು ಸಾಕಷ್ಟು ಟೀಕೆ ಟಿಪ್ಪಣಿಗಳು ಜೋರಾಗಿವೆ. ಈ ನಡುವೆ ಸಚಿವ ಎಂ ಬಿ ಪಾಟೀಲ್‌ ಮಾತನಾಡಿ, ವಿರೋಧ ಪಕ್ಷದ ನಾಯಕರಾಗಲು ಬಿಜೆಪಿಯಲ್ಲಿ ಸಮರ್ಥರು ಯಾರೂ ಇಲ್ಲವೇ? ಬಸವರಾಜ ಬೊಮ್ಮಾಯಿ, ಆರ್. ಅಶೋಕ, ಅಶ್ವತ್‌ನಾರಾಯಣ, ಸುನಿಲ್ ಕುಮಾರ್, ಬಸವನಗೌಡ ಪಾಟೀಲ್‌ ಯತ್ನಾಳ ಅವರೆಲ್ಲ ಅಸಮರ್ಥರೇ ಎಂದು ಪ್ರಶ್ನಿಸಿದ್ದರು. ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್‌ ನಾಯಕ ಹೆಚ್​ಡಿ ಕುಮಾರಸ್ವಾಮಿ ವಿರೋಧ ಪಕ್ಷದ ನಾಯಕ ಎನ್ನುತ್ತಿದ್ದಾರೆ. ಬಿಜೆಪಿಯವರಿಗೆ ಬರಗಾಲ ಬಂದಿದೆ ಎಂದು ವ್ಯಂಗ್ಯವಾಡಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap