ಸಚಿವ ಸ್ಥಾನಕ್ಕೆ ರಾಮಲಿಂಗಾ ರೆಡ್ಡಿ ರಾಜಿನಾಮೆ : ಸರ್ಕಾರದಲ್ಲಿ ಸಂಚಲನ ಖಾತೆ ಜಟಾಪಟಿ: ಸಿಎಂ ಡಿಕೆಶಿಗೆ ಮೊದಲ ಸವಾಲು

ಬೆಂಗಳೂರು : ಮುಖ್ಯಮಂತ್ರಿ ಡಿಕೆ ಶಿವಕುಮಾರ್ ನೇತೃತ್ವದ ಸಂಪುಟದಲ್ಲಿ ಖಾತೆ ಹಂಚಿಕೆ ವಿಷಯದಲ್ಲಿ ಅಸಮಾಧಾನ ಭುಗಿಲೆದ್ದಿದೆ. ಸರ್ಕಾರ ರಚನೆ ಆದ ಮೂರೇ ದಿನದಲ್ಲಿ ಖಾತೆ ಹಂಚಿಕೆ ವಿಚಾರವಾಗಿ ರಾಮಲಿಂಗಾರೆಡ್ಡಿ ಅಸಮಾಧಾನಗೊಂಡಿದ್ದು ರಾಜೀನಾಮೆ ನೀಡಿದ್ದಾರೆ. ಇದರ ಬೆನ್ನಲ್ಲೇ ಕೆ.ಹೆಚ್. ಮುನಿಯಪ್ಪನವರು ಕೂಡ ಅಸಮಾಧಾನ ಹೊರಹಾಕಿದ್ದಾರೆ. ಇದು ಸದ್ಯ ಕರ್ನಾಟಕ ಕಾಂಗ್ರೆಸ್ ಸರ್ಕಾರದಲ್ಲಿ ಸಚಿವಸ್ಥಾನಕ್ಕಾಗಿ ಜಟಾಪಟಿ ನಡೆಯುತ್ತಿರುವ ವಿಚಾರ ಮೆಲ್ನೋಟಕ್ಕೆ ಕಂಡುಬರುತ್ತಿದೆ.

ನಗರಾಭಿವೃದ್ಧಿ ಖಾತೆ ತಪ್ಪಿದಕ್ಕೆ ಅಸಮಾಧಾನಗೊಂಡಿರುವ ಸಚಿವ ರಾಮಲಿಂಗಾ ರೆಡ್ಡಿ ರಾಜೀನಾಮೆ ಪತ್ರವನ್ನು ಸಿಎಂ ಡಿ.ಕೆ.ಶಿವಕುಮಾರ್‌ಗೆ ರವಾನಿಸಿದ್ದಾರೆ. ಆ ಮೂಲಕ ಸಿಎಂ ಡಿಕೆಶಿ ನೂತನ ಸರ್ಕಾರದಲ್ಲಿ ಬಿಕ್ಕಟ್ಟು ಉಂಟಾಗಿದೆ. ಈ ಸಂಬAಧ ತಮ್ಮ ಕೊರಮಂಗಲ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಈಗಿನ ಸಿಎಂ ಡಿಕೆ ಶಿವಕುಮಾರ್, ಡಿಕೆ ಸುರೇಶ್ ಅವರು ೨೦೨೩ರಲ್ಲಿ ನಮ್ಮ ಮನೆಗೆ ಬಂದಿದ್ದರು. ಮುಂದೆ ನಾನೇ ಸಿಎಂ ಆಗುತ್ತೇನೆ. ನಿಮಗೆ ಬೆಂಗಳೂರು ನಗರಾಭಿವೃದ್ಧಿ ಕೊಡ್ತೇನೆ ಎಂದಿದ್ದರು. ಪ್ರಮಾಣ ವಚನಕ್ಕೂ ಮುನ್ನ ಅವರನ್ನು ಭೇಟಿಯಾದಾಗಲೂ ಕೂಡಾ ಬೆಂಗಳೂರು ನಗರಾಭಿವೃದ್ಧಿ ನಿಮಗೆ ಕೊಡ್ತೇನೆ ಅಂದಿದ್ದರು. ಆದರೀಗ ಜಲಸಂಪನ್ಮೂಲ ಖಾತೆ ಕೊಟ್ಟಿದ್ದಾರೆ. ನಮ್ಮ ಆತ್ಮಸಾಕ್ಷಿಯಾಗಿ ಕೆಲಸ ಮಾಡಲು ಆಗಲ್ಲ. ಹೀಗಾಗಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ ಎಂದರು.

ನಾನು ೫೩ ವರ್ಷಗಳಿಂದ ಕಾಂಗ್ರೆಸ್ ಪಕ್ಷದಲ್ಲಿ ಕೆಲಸ ಮಾಡಿದ್ದೇನೆ. ಕಾಂಗ್ರೆಸ್ ಪಕ್ಷ ಸಾಕಷ್ಟು ಅವಕಾಶ ನೀಡಿದೆ. ೯ ಬಾರಿ ಶಾಸಕನಾಗಲು ಅವಕಾಶ ನೀಡಿದೆ. ವೀರಪ್ಪ ಮೊಯ್ಲಿ ಅವರೇ ಕರೆದು ನನಗೆ ಟಿಕೆಟ್ ನೀಡಿದ್ದರು. ವೀರಪ್ಪ ಮೊಯ್ಲಿ, ಎಸ್.ಎಂ.ಕೃಷ್ಣ, ಧರಂಸಿAಗ್, ಸಿದ್ದರಾಮಯ್ಯ ಸರ್ಕಾರಗಳಲ್ಲಿ ಸಚಿವನಾಗಿರುವೆ. ನಾನು ಯಾರಲ್ಲೂ ಸಚಿವ ಸ್ಥಾನ ಕೇಳಿರಲಿಲ್ಲ ಎಂದು ಹಳೆಯ ಘಟನೆಗಳನ್ನು ಸ್ಮರಿಸಿದರು.

೨೦೨೩ರಲ್ಲಿ ಸಿದ್ದರಾಮಯ್ಯ ಅವರು ಕಳೆದ ಬಾರಿ ಸಚಿವ ಸ್ಥಾನ ನೀಡಿದ್ದರು. ಆವತ್ತು ಬೈರತಿ ಸುರೇಶ್ ನನಗೆ ಕರೆ ಮಾಡಿ ಕರೆದು ಸಿದ್ದರಾಮಯ್ಯ ನಿಮ್ಮ ಜೊತೆ ಮಾತನಾಡಬೇಕು ಎಂದು ಕರೆಸಿ ಸಭೆ ಮಾಡಿದ್ದರು. ನಿಮಗೆ ಬೆಂಗಳೂರು ನಗರಾಭಿವೃದ್ಧಿ ಖಾತೆ ನೀಡ್ತೇವೆ ಎಂದು ಹೇಳಿದ್ದರು. ನಾನೇನು ಆ ಖಾತೆಯನ್ನು ಆವತ್ತು ಕೇಳಿರಲಿಲ್ಲ. ಆದರೆ, ಬಳಿಕ ಖಾತೆ ಹಂಚಿಕೆ ವೇಳೆ ಸಾರಿಗೆ ಇಲಾಖೆ ಕೊಟ್ಟಿದ್ರು. ಆಗ ಮತ್ತೆ ಬೈರತಿ ಸುರೇಶ್ ಕರೆ ಮಾಡಿ ಸ್ವಲ್ಪ ಬದಲಾವಣೆ ಆಯಿತು ಎಂದಿದ್ದರು ಎಂದು ವಿವರಿಸಿದ್ದಾರೆ.

ನಾನು ಶಾಸಕನಾಗಿ ಮುಂದುವರೆಯುತ್ತೇನೆ. ಕಾಂಗ್ರೆಸ್ ಪಕ್ಷದಲ್ಲೇ ಇರುತ್ತೇನೆ. ಕೈಯಲ್ಲಿ ಹೋಗಿ ರಾಜೀನಾಮೆ ಕೊಟ್ಟು ಬರಲು ನನಗೆ ಇಷ್ಟ ಇಲ್ಲ. ಸಿಎಂ ಕಾರ್ಯದರ್ಶಿ ತುಷಾರ್ ಗಿರಿನಾಥ್?ಗೆ ನಮ್ಮ ಕಚೇರಿ ಸಿಬ್ಬಂದಿ ರಾಜೀನಾಮೆ ಪತ್ರ ಕೊಟ್ಟು ಬರುತ್ತಾರೆ. ನಾನು ಖಾತೆಗಾಗಿ ರಾಜೀನಾಮೆ ಕೊಡುತ್ತಿಲ್ಲ. ಯಾಕೆ ರಾಜೀನಾಮೆ ಕೊಡುತ್ತಿದ್ದೇನೆ ಅಂತಾ ಮಾಧ್ಯಮದ ಮುಂದೆ ಬಂದು ಹೇಳುತ್ತಿರುವೆ. ಎಸ್.ಎಂ ಕೃಷ್ಣ ಅವರು ತಮ್ಮ ಸಂಪುಟದಲ್ಲಿ ಒಂದೇ ವರ್ಷ ಬೆಂಗಳೂರು ನಗರಾಭಿವೃದ್ಧಿ ಖಾತೆ ನೀಡಿದ್ದರು. ನಾನು ಎಲ್ಲಾ ಇಲಾಖೆಗಳಲ್ಲಿ ಚೆನ್ನಾಗಿ ಕೆಲಸ ಮಾಡಿದ್ದೇನೆ ಎಂದರು.

ಮುಖಂಡರಿAದ ಮನವೊಲಿಸಲು ಯತ್ನ:

ಇತ್ತ ರಾಮಲಿಂಗಾ ರೆಡ್ಡಿ ರಾಜೀನಾಮೆ ನೀಡುತ್ತಿರುವ ಸುದ್ದಿ ಕೇಳಿ ಕಾಂಗ್ರೆಸ್ ಮುಖಂಡರಾದ ಮನೋಹರ್ ಕೋರಮಂಗಲ ನಿವಾಸಕ್ಕೆ ಬಂದು ಮನವೊಲಿಸಲು ಯತ್ನಿಸಿದರು. ರಾಜೀನಾಮೆ ನೀಡಬೇಡಿ ಸರ್… ಕೆಪಿಸಿಸಿ ಅಧ್ಯಕ್ಷರೊಂದಿಗೆ ಮಾತನಾಡುತ್ತೇನೆ. ನೀವು ನಮಗೆ ಬೇಕು. ದಯವಿಟ್ಟು ರಾಜೀನಾಮೆ ನೀಡಬೇಡಿ ಎಂದು ಮನವಿ ಮಾಡಿದರು. ಈ ವೇಳೆ ರಾಮಲಿಂಗಾ ರೆಡ್ಡಿ, ನಾನು ಯಾರ ಮಾತು ಕೇಳುವುದಿಲ್ಲ. ಕೋಪ ಬರಿಸಬೇಡಿ ಎಂದು ಖಡಾಖಂಡಿತವಾಗಿ ಪ್ರತಿಕ್ರಿಯಿಸಿದರು. ಕಾಂಗ್ರೆಸ್ ಮುಖಂಡರು ಎಷ್ಟೇ ಮನವಿ ಮಾಡಿದರೂ ಅದಕ್ಕೆ ರಾಮಲಿಂಗಾ ರೆಡ್ಡಿ ಕಿವಿ ಕೊಡಲಿಲ್ಲ.

ರಾಜೀನಾಮೆ ಪತ್ರದಲ್ಲೇನಿದೆ? :

ನನಗೆ ತಮ್ಮ ಸಚಿವ ಸಂಪುಟದಲ್ಲಿ ಸಚಿವ ಸ್ಥಾನ ನೀಡಿದ್ದಕ್ಕೆ ತಮಗೂ ಹಾಗೂ ಕಾಂಗ್ರೆಸ್ ಪಕ್ಷಕ್ಕೆ ನನ್ನ ಧನ್ಯವಾದಗಳು. ನಾನು ನನ್ನ ಆತ್ಮಸಾಕ್ಷಿ ವಿರುದ್ದವಾಗಿ ಕಾರ್ಯನಿರ್ವಹಿಸಲು ಸಾದ್ಯವಾಗದ ಕಾರಣ ಈ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುತ್ತಿದ್ದೇನೆ. ನನ್ನ ರಾಜೀನಾಮೆಯನ್ನು ಅಂಗೀಕರಿಸಬೇಕೆAದು ಕೋರುತ್ತೇನೆ. ನಾನು ಶಾಸಕನಾಗಿ ಹಾಗೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತನಾಗಿ ಮುಂದುವರಿಯುತ್ತೇನೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ರೆಡ್ಡಿ ನನ್ನ ಸ್ನೇಹಿತ, ಸಮಸ್ಯೆ ಬಗೆಹರಿಸುವೆ : ಸಿಎಂ
ಸುದ್ದಿಗಾರರೊAದಿಗೆ ಮಾತನಾಡಿದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು, ರಾಮಲಿಂಗಾ ರೆಡ್ಡಿ ರಾಜೀನಾಮೆ ಘೋಷಣೆಗೆ ಪ್ರತಿಕ್ರಿಯಿಸಿ, ಅವರು ಗ್ರಾಮೀಣ ಪ್ರದೇಶದವರಲ್ಲ. ಅವರಿಗೆ ನಗರ ಪ್ರದೇಶದ ಜನರ ಕಲ್ಯಾಣಕ್ಕಾಗಿ ಕೆಲಸ ಮಾಡಲು ಇಚ್ಚಿಸಿದ್ದಾರೆ. ಅವರಿಗೆ ಜಲ ಸಂಪನ್ಮೂಲ ಇಲಾಖೆ ನೀಡಲಾಗಿದೆ. ಅವರು ನನ್ನ ಉತ್ತಮ ಸ್ನೇಹಿತರಾಗಿದ್ದು, ಪಕ್ಷದ ಪ್ರಮುಖ ನಾಯಕರಾಗಿದ್ದಾರೆ. ಅವರ ಬಳಿ ಮಾತನಾಡಿ, ಸಮಸ್ಯೆ ಬಗೆಹರಿಸುತ್ತೇನೆ. ಅದೇ ಸಮಯದಲ್ಲಿ ರಾಮಲಿಂಗಾ ರೆಡ್ಡಿ ಬೆಂಬಲಿಗರು ರಾಜೀನಾಮೆಗೆ ಮುಂದಾಗಿರುವ ಬಗ್ಗೆ ಪ್ರತಿಕ್ರಿಯಿಸಿ, ಶಿಸ್ತು ಬಹಳ ಮುಖ್ಯವಾಗಿದೆ ಎಂದರು.

ಮನಸ್ತಾಪ ಬಗೆಹರಿಸುತ್ತೇವೆ : ಬಿ.ಕೆ.ಹರಿಪ್ರಸಾದ್

ಸಚಿವ ರಾಮಲಿಂಗಾ ರೆಡ್ಡಿ ರಾಜೀನಾಮೆ ಘೋಷಣೆ ಬಗ್ಗೆ ಪ್ರತಿಕ್ರಿಯಿಸಿದ ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್, ರಾಮಲಿಂಗಾ ರೆಡ್ಡಿ ಅವರು ನಮ್ಮ ಪಕ್ಷದ ಹಿರಿಯ ನಾಯಕರು. ಅವರ ಜೊತೆ ಮಾತನಾಡುತ್ತೇವೆ. ಮನಸ್ತಾಪ ಇದ್ರೆ ಬಗೆ ಹರಿಸುತ್ತೇವೆ. ಪಕ್ಷಕ್ಕೆ ಹಾನಿಯಾಗುವ ಯಾವ ಕೆಲಸವನ್ನೂ ರಾಮಲಿಂಗಾ ರೆಡ್ಡಿಯವರು ಮಾಡುವುದಿಲ್ಲ ಎಂದರು.

ಖಾತೆ ಹಂಚಿಕೆಯಲ್ಲಿ ಹಿರಿತನ ಕಾಪಾಡಿಲ್ಲ : ಕೆಹೆಚ್‌ಎಂ
ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವ ಕೆ.ಹೆಚ್. ಮುನಿಯಪ್ಪ ಅವರು ಖಾತೆ ಹಂಚಿಕೆಯಲ್ಲಿ ಹಿರಿತನ ಕಾಪಾಡಿಲ್ಲ. ಹಿರಿಯರಿಗೆ ಸರಿಯಾದ ಖಾತೆ ನೀಡಿಲ್ಲ. ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನಖರ್ಗೆ ಅವರು ತಾಯಿ ಸ್ಥಾನದಲ್ಲಿದ್ದಾರೆ. ಅವರು ಎಲ್ಲ ಮಕ್ಕಳನ್ನು ಒಂದೇ ರೀತಿ ಕಾಣಬೇಕು. ಖಾತೆ ಹಂಚಿಕೆಯಲ್ಲಿ ಹಿರಿತನ ನೋಡಬೇಕಿತ್ತು. ನನಗೆ ಮತ್ತೆ ಆಹಾರ ಖಾತೆಯನ್ನೇ ನೀಡಿದ್ದಾರೆ. ನಾನು ಸಹ ರಾಮಲಿಂಗಾರೆಡ್ಡಿಯವರAತೆ ೮ ಬಾರಿ ಗೆದ್ದಿದ್ದೇನೆ. ಶಾಸನ ಸಭೆಯಲ್ಲಿ ಆರ್.ಬಿ. ದೇಶಪಾಂಡೆ ಬಿಟ್ಟರೆ ರಾಮಲಿಂಗಾರೆಡ್ಡಿ ಅವರೇ ಹಿರಿಯರು ಹಿರಿತನಕ್ಕೆ ಮನ್ನಣೆ ಸಿಗಬೇಕು. ಹಿರಿಯರಿಗೆ ಒಳ್ಳೆ ಖಾತೆಗಳನ್ನು ನೀಡಬೇಕು. ಖಾತೆ ಹಂಚಿಕೆಯಲ್ಲಿ ಆಗಿರುವ ಅಸಮಾತೋಲನದ ಬಗ್ಗೆ ನಾನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನಖರ್ಗೆ, ಪಕ್ಷದ ವರಿಷ್ಠರಾದ ರಾಹುಲ್‌ಗಾಂಧಿ, ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ರವರ ಗಮನಕ್ಕೆ ತಂದಿದ್ದೇನೆ. ನನಗೆ ಸಮಾಜ ಕಲ್ಯಾಣ ಅಥವಾ ಕೃಷಿ ಖಾತೆ ನೀಡಬೇಕು ಎಂದು ಮನವಿ ಮಾಡಿದರು.

ಸಂಬAಧ ಪಟ್ಟವರು ಗಮನ ಹರಿಸಿ : ಹೆಚ್.ಕೆ. ಪಾಟೀಲ್
ರಾಮಲಿಂಗ ರೆಡ್ಡಿ ಅವರ ರಾಜೀನಾಮೆ ವಿಚಾರಕ್ಕೆ ಪ್ರತಿಕ್ರಿಸಿದ ಸಚಿವ ಹೆಚ್.ಕೆ.ಪಾಟೀಲ್ ಅವರು ಮನವೋಲೆಸಲು ಸಾಕಷ್ಟು ಪ್ರಯತ್ನ ಪಟ್ಟೆಯಾದರು ಅದು ಫಲಿಸಲಿಲ್ಲ. ಜೊತೆಗೆ ಸಂಬAಧ ಪಟ್ಟ ನಾಯಕರು ಕೂಡ ತಮ್ಮ ನಿಲುವನ್ನು ಪುನರ್ ಪರಿಶೀಲನೆ ಮಾಡಿ ಸೂಕ್ತ ಸ್ತಾನಮಾನಗಳನ್ನು ನೀಡಬೇಕೆಂದು ಮನವಿ ಮಾಡಿದರು.

Recent Articles

spot_img

Related Stories

Share via
Copy link