ಖಾತೆ ಖ್ಯಾತೆ : ಒಡೆದ ಮನೆಯಾದ ಡಿಕೆ ಸರ್ಕಾರ

ಬೆಂಗಳೂರು: ಸಿಎಂ ಡಿ.ಕೆ.ಶಿವಕುಮಾರ್ ನೇತೃತ್ವದ ಸಚಿವ ಸಂಪುಟದಲ್ಲಿ ಬಿಕ್ಕಟ್ಟು ಏರ್ಪಟ್ಟಿರುವ ಸಂಬAಧ ರಾಜ್ಯ ಬಿಜೆಪಿ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿಪಕ್ಷ ನಾಯಕ ಆರ್.ಅಶೋಕ್ ಮಾತನಾಡಿ, ಕಾಂಗ್ರೆಸ್ ಒಡೆದ ಮನೆ, ಮುಂದೆ ಸರ್ಕಾರದಲ್ಲಿ ಜ್ವಾಲಾಮುಖಿ ಏಳುತ್ತೆ. ಸಿಎಂ ಡಿಕೆಶಿ ಅವರ ಹಳೇ ಸಿನಿಮಾ ಹೊಸ ಪೋಸ್ಟರ್ ರಿಲೀಸ್ ಆಗೋ ಮುನ್ನ ದಂಗೆ ಶುರು. ಪ್ರಮಾಣ ವಚನ ಆದ ಮೂರೇ ದಿನದಲ್ಲಿ ಮೂರು ಪಾಡಾಗಿದೆ. ಸಿಎಂ ಆಗೋವರೆಗೂ ಸುಮ್ಮನಿದ್ದು ಈಗ ರಾಮಲಿಂಗಾರೆಡ್ಡಿ ಅವರಿಗೆ ಡಿಕೆಶಿ ಕೈಕೊಟ್ಟಿದ್ದಾರೆ. ರಾಮಲಿಂಗಾರೆಡ್ಡಿ ಹಿರಿಯರು, ಅವರು ಬೆಂಗಳೂರು ಖಾತೆ ಕೇಳೋದ್ರಲ್ಲಿ ತಪ್ಪಿಲ್ಲ ಎಂದರು.

ಮೂರೇ ದಿನದಲ್ಲಿ ಡಿಕೆಶಿ ಮಾತು ತಪ್ಪಿದ್ದಾರೆ. ಇನ್ಯಾರ್ಯಾರಿಗೆ ಏನೇನು ಮಾತು ಕೊಟ್ಟು ತಪ್ಪಿದ್ದಾರೋ?. ಸರ್ಕಾರದಲ್ಲಿ ವಿಪಕ್ಷಗಳಿಗೆ ಉತ್ತರ ಕೊಡಲು ಯಾರೂ ಗತಿ ಇಲ್ಲ. ವಿಪಕ್ಷಗಳ ಜತೆ ಚರ್ಚೆ ಮಾಡಲು ಯಾರೂ ಇಲ್ಲ. ಡಿಕೆಶಿಗೆ ಸರ್ಕಾರದ ಮೇಲೆ ಹಿಡಿತ ಹೋಗಿದೆ. ರೌಡಿ ನಿಗ್ರಹ ದಳ ಮಾಡ್ತಾರಂತೆ. ಇದನ್ನು ಕೇಳಿ ರಾಜ್ಯಾದ್ಯಂತ ಜನ ನಗ್ತಿದ್ದಾರೆ. ಅದೂ ಯಾರಿಂದ, ಡಿಕೆಶಿ, ಹರಿಪ್ರಸಾದ್ ಅವರಿಂದ ಅಂತೆ. ಇದೆಲ್ಲ ಸಾಕಾರ ಆಗಲ್ಲ. ರಾಹುಲ್ ಗಾಂಧಿ ವಸೂಲಿಗೆ ಬಂದಿದ್ದಾರೆ ಅಷೇ. ಅವರು ವಸೂಲಿ ಮಾಡಿ ಹೋಗ್ತಾರೆ ಎಂದು ದೂರಿದರು.

ಮಧ್ಯಂತರ ಚುನಾವಣೆ ಯಾವಾಗ ಬೇಕಾದರೂ ಬರಬಹುದು

ಬೆಂಗಳೂರಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಮಾತನಾಡಿ, ಮೊದಲು ಸಿಎಂ ಖುರ್ಚಿಗಾಗಿ ಕಿತ್ತಾಡುತ್ತಿದ್ದರು, ಈಗ ಸಚಿವ ಸ್ಥಾನಕ್ಕಾಗಿ, ಖಾತೆಗಾಗಿ ಕಿತ್ತಾಡುತ್ತಿದ್ದಾರೆ. ಭ್ರಷ್ಟಾಚಾರ ಅಧಿಕಾರ ಲಾಲಸೆ ಹಾಗೂ ಲಾಭದಾಯಕ ಹುದ್ದೆಗಳಿಗಾಗಿ ಕಿತ್ತಾಡುತ್ತಿರುವ ಕಾಂಗ್ರೆಸ್ ಸರ್ಕಾರ ಅತಿ ಶೀಘ್ರದಲ್ಲಿ ಪತನಗೊಳ್ಳಲಿದೆ ಎಂಬ ಬಿಜೆಪಿ ನಿರೀಕ್ಷೆ ನಿಜವಾಗುತ್ತಿದೆ. ಬೆಂಗಳೂರು ಅಭಿವೃದ್ಧಿ ಖಾತೆಗಾಗಿ ಪಟ್ಟು ಹಿಡಿದು ಹಿರಿಯ ಸಚಿವ ರಾಜೀನಾಮೆ ನೀಡಿರುವುದು ಇದಕ್ಕೆ ಸಾಕ್ಷಿ. ರಾಜ್ಯದಲ್ಲಿ ಮಧ್ಯಂತರ ಚುನಾವಣೆ ನಡೆಯಲಿದೆ ಎಂಬುದಕ್ಕೆ ಇದು ಸಾಕ್ಷಿಯಾಗಿದೆ. ಮುಂಗಾರು ಹಂಗಾಮು ಆರಂಭವಾಗುತ್ತಿರುವ ಈ ಸಂದರ್ಭದಲ್ಲಿ ರೈತರಿಗೆ ಬೀಜ ರಸಗೊಬ್ಬರ ಮುಂತಾದ ನೆರವು ನೀಡಬೇಕಾದ ರಾಜ್ಯ ಸರ್ಕಾರ.. ಅಧಿಕಾರದ ಕಿತ್ತಾಟದಲ್ಲಿ ತೊಡಗಿರುವುದು ಕರ್ನಾಟಕದ ದುರಂತವೇ ಸರಿ ಎಂದು ವಾಗ್ದಾಳಿ ನಡೆಸಿದ್ದಾರೆ.

ವೈಯಕ್ತಿಕ ಕಾಳಜಿಯೇ ಹೆಚ್ಚು:

ಸಚಿವ ಸ್ಥಾನಕ್ಕೆ ರಾಮಲಿಂಗಾ ರೆಡ್ಡಿ ರಾಜೀನಾಮೆ ವಿಚಾರವಾಗಿ ಪ್ರತಿಕ್ರಿಯಿಸಿರುವ ಸುನಿಲ್ ಕುಮಾರ್, ಹಿಂದಿನ ಸಿದ್ದರಾಮಯ್ಯ ಸರ್ಕಾರ ಮೂರು ವರ್ಷಗಳ ಕಾಲ ಆಡಳಿತದ ಮೇಲೆ ಹಿಡಿತ ಕಳೆದುಕೊಂಡು ಜನವಿರೋಧಿಯಾಗಿತ್ತು. ಡಿ.ಕೆ.ಶಿವಕುಮಾರ್ ಸರ್ಕಾರ ಮೂರೇ ದಿನಗಳಲ್ಲಿ ಆಡಳಿತದ ಮೇಲಿನ ಹಿಡಿತ ಕಳೆದುಕೊಂಡು ಜನವಿರೋಧಿಯಾಗುವತ್ತ ಹೆಜ್ಜೆ ಇಟ್ಟಿದೆ. ಈ ಸರ್ಕಾರದ ಸಚಿವರಿಗೆ ಜನ ಹಿತಕ್ಕಿಂತ ವೈಯಕ್ತಿಕ ಹಿತಾಸಕ್ತಿಯೇ ಹೆಚ್ಚಾಗಿದೆ. ರಾಜ್ಯದ ಮೇಲಿನ ಕಾಳಜಿಗಿಂತ ವೈಯಕ್ತಿಕ ಕಾಳಜಿಯೇ ಹೆಚ್ಚು ಎಂದು ಟೀಕಿಸಿದರು.

ಚುನಾವಣೆ ಎದುರಿಸಲು ಬಿವೈವಿ ಸಿಎಂಗೆ ಸವಾಲ್

ಬೆಂಗಳೂರಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಮಾತನಾಡಿ, ಡಿಕೆಶಿ ಸಿಎಂ, ಸಿದ್ದರಾಮಯ್ಯ ಅವರ ಸಚಿವ ಸಂಪುಟ. ಮೊದಲ ವಿಕೆಟ್ ಪತನ ಆಗಿದೆ. ರಾಮಲಿಂಗಾರೆಡ್ಡಿ ಅವರು ಹಿರಿಯರು ಅವರ ಬಗ್ಗೆ ಮಾತಾಡಲ್ಲ. ವಾಸ್ತವ ಅಂದರೆ ರಾಜ್ಯದ ಬಗ್ಗೆ ಕಾಂಗ್ರೆಸ್??ಗೆ ಕಾಳಜಿಯಿಲ್ಲ. ಮೂರು ವರ್ಷದಿಂದ ಹಗ್ಗಜಗ್ಗಾಟ ನಡೀತಿದೆ. ಈಗಲೂ ಮುಂದುವರಿದಿದೆ. ಯಾವ ಖಾತೆ, ಯಾವ ಸ್ಥಾನಮಾನ ಅನ್ನೋ ಕಿತ್ತಾಟದಲ್ಲಿ ರಾಮಲಿಂಗಾರೆಡ್ಡಿ ರಾಜೀನಾಮೆ ಕೊಟ್ಟಿದ್ದಾರೆ. ಸರ್ಕಾರದ ರೀತಿ ನೋಡಿದ್ರೆ ಮಧ್ಯಂತರ ಚುನಾವಣೆ ಯಾವಾಗ ಬೇಕಾದರೂ ಬರಬಹುದು. ಮಧ್ಯಂತರ ಚುನಾವಣೆ ಯಾವಾಗ ಬಂದರೂ ನಾವು ಸಿದ್ಧ ಇದ್ದೇವೆ ಎಂದು ತಿಳಿಸಿದರು.

Recent Articles

spot_img

Related Stories

Share via
Copy link