ಧ್ವನಿಯ ಜಾದುಗಾರ್ತಿ ಎಸ್.ಜಾನಕಿ ಇನ್ನಿಲ್ಲ

ಮೈಸೂರು : ಭಾರತೀಯ ಚಿತ್ರರಂಗದ ಅದ್ಭುತ ಧ್ವನಿ, ತಮ್ಮ ಕೋಗಿಲೆ ಕಂಠದ ಮೂಲಕ ಕೋಟ್ಯಂತರ ಅಭಿಮಾನಿಗಳನ್ನು ರಂಜಿಸಿದ್ದ ಹಿರಿಯ ಗಾಯಕಿ ಎಸ್. ಜಾನಕಿ (88) ಅವರು ಗುರುವಾರ ನಿಧನರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಮೈಸೂರಿನ ಅಪೋಲೋ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದು, ಇವರ ಅಗಲಿಕೆಯಿಂದ ಸಂಗೀತ ಲೋಕದ ಶಖೆಯೊಂದು ಅಂತ್ಯವಾದAತಾಗಿದೆ. 20ಕ್ಕೂ ಹೆಚ್ಚು ಭಾಷೆಗಳಲ್ಲಿ 48 ಸಾವಿರಕ್ಕೂ ಹೆಚ್ಚು ಗೀತೆಗಳನ್ನು ಅವರು ಹಾಡಿದ್ದರು. ಹಲವು ಪ್ರಶಸ್ತಿಗಳಿಗೆ ಮುಡಿಗೇರಿಸಿಕೊಂಡಿದ್ದ ಇವರಿಗೆ 4 ರಾಷ್ಟಿçÃಯ ಚಲನಚಿತ್ರ ಪ್ರಶಸ್ತಿ ದೊರಕಿತದತು. 33 ವಿವಿಧ ರಾಜ್ಯ ಚಲನಚಿತ್ರ ಪ್ರಶಸ್ತಿ ಲಭಿಸಿವೆ. ಇವ ಅಗಲಿಕೆ ಅಪಾರ ನಷ್ಟವನ್ನುಂಟು ಮಾಡಿದೆ. ಗಾಯಕಿಯ ನಿಧನಕ್ಕೆ ಚಿತ್ರರಂಗದ ಅನೇಕ ಗಣ್ಯರು, ಸಿಎಂ, ಡಿಸಿಎಂ ಸೇರಿ ಹಲವರು ತೀವ್ರ ಕಂಬನಿ ಮಿಡಿದಿದ್ದಾರೆ.

ಪುತ್ರನ ಅಗಲಿಕೆಯಿಂದ ಕಂಗೆಟ್ಟಿದ್ದ ಜಾನಕಮ್ಮ: ಇದೇ ವರ್ಷದ ಜನವರಿಯಲ್ಲಿ ಜಾನಕಿ ಅವರ ಪುತ್ರ ಮುರಳಿ ಕೃಷ್ಣ ಅವರು ನಿಧನ ಹೊಂದಿದ್ದರು. ಮುಪ್ಪಿನ ವಯಸ್ಸಿನಲ್ಲಿ ಪುತ್ರನ ಸಾವು ಜಾನಕಿಯವರನ್ನು ತೀವ್ರವಾಗಿ ಕಾಡಿತ್ತು. ಪುತ್ರ ಶೋಕದಿಂದಾಗಿ ಅವರ ಆರೋಗ್ಯ ದಿನೇ ದಿನೇ ಹದಗೆಟ್ಟಿತ್ತು. ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಇಂದು ಇಹಲೋಕ ತ್ಯಜಿಸಿದ್ದಾರೆ.

ಕನ್ನಡದೊಡನೆ ಅವಿನಾಭಾವ ನಂಟು: ಮೂಲತಃ ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯವರಾದ ಎಸ್. ಜಾನಕಿ ಅವರು ಹೆಚ್ಚು ಪ್ರಸಿದ್ಧಿ ಪಡೆದಿದ್ದು ಮತ್ತು ಕನ್ನಡಿಗರ ಮನೆಮನಗಳಿಗೆ ಹತ್ತಿರವಾದದ್ದು ಕನ್ನಡ ಗೀತೆಗಳ ಮೂಲಕ. ಅಚ್ಚಕನ್ನಡಿಗರೇ ಬೆರಗಾಗುವಂತೆ ಅತ್ಯಂತ ಸ್ಪಷ್ಟವಾಗಿ ಕನ್ನಡ ಪದಗಳನ್ನು ಉಚ್ಚರಿಸುತ್ತಾ, ಸಾವಿರಾರು ಸೂಪರ್ ಹಿಟ್ ಹಾಡುಗಳನ್ನು ಕನ್ನಡ ಚಿತ್ರರಂಗಕ್ಕೆ ನೀಡಿದ್ದಾರೆ.

ಕನ್ನಡ ಚಿತ್ರರಂಗದಲ್ಲಿ ‘ಗೋಲ್ಡನ್ ಎರಾ’ : 70-80ರ ದಶಕದಲ್ಲಿ ವರನಟ ಡಾ. ರಾಜ್‌ಕುಮಾರ್ ಹಾಗೂ ಎಸ್. ಜಾನಕಿ ಅವರ ಕಾಂಬಿನೇಷನ್ ಕನ್ನಡ ಚಿತ್ರರಂಗದ ‘ಸುವರ್ಣ ಯುಗ’ ಎಂದೇ ಖ್ಯಾತವಾಗಿತ್ತು. “ಎಲ್ಲೆಲ್ಲಿ ನೋಡಲಿ ನಿನ್ನನ್ನೇ ಕಾಣುವೆ” ಮುಂತಾದ ನೂರಾರು ಸದಾಹಸಿರು ಯುಗಳ ಗೀತೆಗಳನ್ನು ಈ ಜೋಡಿ ನೀಡಿದೆ. ಅದೇ ರೀತಿ, ಗಾನಗಂಧರ್ವ ಎಸ್‌ಪಿ ಬಾಲಸುಬ್ರಹ್ಮಣ್ಯಂ ಮತ್ತು ಎಸ್. ಜಾನಕಿ ಅವರ ಧ್ವನಿಯಲ್ಲಿ ಮೂಡಿಬಂದ ರೋಮ್ಯಾಂಟಿಕ್ ಹಾಡುಗಳು ಇಂದಿನ ಯುವಪೀಳಿಗೆಗೂ ಅಚ್ಚುಮೆಚ್ಚು.

ವಿಸ್ಮಯ ಮೂಡಿಸುತ್ತಿದ್ದ ಧ್ವನಿ ಬದಲಾವಣೆಯ ಮೋಡಿ: ಎಸ್. ಜಾನಕಿ ಅವರಿಗೆ ಇದ್ದ ಅತಿ ದೊಡ್ಡ ವಿಶಿಷ್ಟ ಶಕ್ತಿಯೆಂದರೆ ಅದು ‘ಧ್ವನಿ ಬದಲಾವಣೆ’. ಸಣ್ಣ ಮಗುವಿನ ತೊದಲು ನುಡಿಯ ಧ್ವನಿಯಿಂದ ಹಿಡಿದು ಪ್ರೌಢ ಮಹಿಳೆಯ ಧ್ವನಿಯವರೆಗೆ, ಕೇವಲ ಗಾಯನದ ಮೂಲಕವೇ ನಟನೆಯ ಎಲ್ಲ ಭಾವನೆಗಳನ್ನು ಮೂಡಿಸುತ್ತಿದ್ದ ಅದ್ಭುತ ಕಲಾವಿದೆ ಅವರು.

Recent Articles

spot_img

Related Stories

Share via
Copy link