5,8,9 ನೇ ತರಗತಿ ಬೋರ್ಡ್‌ ಪರೀಕ್ಷೆ : ದಿನಾಂಕ ನಿಗದಿ ಮಾಡಿದ ಸರ್ಕಾರ

ಬೆಂಗಳೂರು:

   5, 8ಮತ್ತು 9ನೇ ತರಗತಿಯ ವಿದ್ಯಾರ್ಥಿಗಳಿಗೆ ಬೋರ್ಡ್ ಪರೀಕ್ಷೆ ನಡೆಸುವ ರಾಜ್ಯ ಸರ್ಕಾರದ ನಿರ್ಧಾರವನ್ನು ಎತ್ತಿಹಿಡಿದ ಕರ್ನಾಟಕ ಹೈಕೋರ್ಟ್‌ನ ವಿಭಾಗೀಯ ಪೀಠವು ಪರೀಕ್ಷಾ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಶುಕ್ರವಾರ ಅನುಮತಿ ನೀಡಿದೆ. 

   ಮಾರ್ಚ್ 25 ರಿಂದ ರಾಜ್ಯಾದ್ಯಂತ ಎಸ್‌ ಎಸ್‌ ಎಲ್‌ ಸಿ ಪರೀಕ್ಷೆ ಆರಂಭವಾಗಲಿದೆ. 5,8 ಮತ್ತು 9ನೇ ತರಗತಿ ಪಬ್ಲಿಕ್‌ ಪರೀಕ್ಷೆಗೆ ಕುರಿತು ಹಲವು ಸುತ್ತಿನ ಕಾನೂನು ಸಮರದ ಬಳಿಕ ಪಬ್ಲಿಕ್‌ ಪರೀಕ್ಷೆ ಮುಂದುವರಿಸಲು ರಾಜ್ಯ ಹೈಕೋರ್ಟ್‌ ಶುಕ್ರವಾರ ಬೆಳಗ್ಗೆ ಗ್ರೀನ್‌ ಸಿಗ್ನಲ್‌ ನೀಡಿತ್ತು. ಸೋಮವಾರದಿಂದ ಪರೀಕ್ಷೆ ಮುಂದುವರಿಸಲು ಸರ್ಕಾರದ ಶಿಕ್ಷಣ ಇಲಾಖೆ ನಿರ್ಧರಿಸಿ ವೇಳಾಪಟ್ಟಿ ಪ್ರಕಟಿಸಿದೆ.

   ಮಾರ್ಚ್ 25 ರಿಂದ ಪರೀಕ್ಷೆ ನಡೆಯಲಿದ್ದು, 28ಕ್ಕೆ ಕೊನೆಯ ಪರೀಕ್ಷೆ ಇರುತ್ತದೆ ಎಂದು ಶಾಲಾ ಶಿಕ್ಷಣ ಇಲಾಖೆ ಆಯುಕ್ತರ ಆದೇಶ ತಿಳಿಸಿದೆ. ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಯುವ ದಿನ ಮಧ್ಯಾಹ್ನ 2.30ಕ್ಕೆ ಪರೀಕ್ಷೆ ನಡೆಯಲಿದ್ದು, ಎಸ್‌ಎಸ್‌ಎಲ್‌ಸಿ ಪರೀಕ್ಷೆ ಇಲ್ಲದ ದಿನ ಬೆಳ್ಳಗೆ 10ಗಂಟೆಗೆ ಪರೀಕ್ಷೆ ನಡೆಯಲಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

   ಮುಂಬರುವ ಶೈಕ್ಷಣಿಕ ವರ್ಷಗಳಿಗೆ ಇದೇ ರೀತಿಯ ಮೌಲ್ಯಮಾಪನಗಳನ್ನು ಆದೇಶಿಸುವ ಮೊದಲು ಮಧ್ಯಸ್ಥಗಾರರನ್ನು ಸಂಪರ್ಕಿಸುವಂತೆ ವಿಭಾಗೀಯ ಪೀಠವು ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಕರ್ನಾಟಕದ ನೋಂದಾಯಿತ ಅನುದಾನರಹಿತ ಖಾಸಗಿ ಶಾಲೆಗಳ ನಿರ್ವಹಣಾ ಸಂಘ ಮತ್ತು ಅನುದಾನರಹಿತ ಮಾನ್ಯತೆ ಪಡೆದ ಶಾಲೆಗಳ ಸಂಘಟನೆಯನ್ನು ಪ್ರತಿನಿಧಿಸುವ ವಕೀಲ ಕೆ.ವಿ.ಧನಂಜಯ ಅವರು ಮಾರ್ಚ್ 6 ರಂದು ಏಕ ನ್ಯಾಯಾಧೀಶರು ನೀಡಿದ ಆದೇಶವನ್ನು ಸಮರ್ಥಿಸಿಕೊಂಡಿದ್ದರು.

   ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳನ್ನು ಪ್ರತಿನಿಧಿಸಿದ ವಕೀಲ ಪ್ರಿತ್ವೀಶ್ ಮಿರ್ಲೆ, ವಿದ್ಯಾರ್ಥಿಗಳು ಒಂದೇ ಪಠ್ಯಕ್ರಮವನ್ನು ಅಧ್ಯಯನ ಮಾಡುವಾಗ ಮತ್ತು ಶಾಲೆಗಳು ರಾಜ್ಯ ಮಂಡಳಿಗೆ ಸಂಯೋಜಿತವಾಗಿರುವಾಗ ಖಾಸಗಿ ಮತ್ತು ಸರ್ಕಾರಿ ಶಾಲೆಗಳಿಗೆ ವಿವಿಧ ಮೌಲ್ಯಮಾಪನಗಳು ಆರ್ಟಿಕಲ್ 14 ಅನ್ನು ಉಲ್ಲಂಘಿಸಿವೆ ಎಂದು ವಾದಿಸಿದರು.

Recent Articles

spot_img

Related Stories

Share via
Copy link
Powered by Social Snap