ಸಿದ್ದು, ಡಿಕೆಶಿ, ಎಚ್ಡಿಕೆ ನಿರುದ್ಯೋಗಿಗಳು

ತುಮಕೂರು:

 ಸಚಿವ ಮಾಧುಸ್ವಾಮಿ ಹಾಗೂ ಬಿಜೆಪಿ ಶಾಸಕರು,ಮಾಜಿ ಶಾಸಕರೊಂದಿಗೆ ನಾಮಪತ್ರ ಸಲ್ಲಿಸಿ ಹೊರಬಂದ ಬಿಜೆಪಿ ಅಭ್ಯರ್ಥಿ. ಎನ್.ಲೋಕೇಶ್‍ಗೌಡ.

ಊಟ ಸೇರದ ಕಾರಣ ದಿನಕ್ಕೊಂದು ಆರೋಪ: ಬಿಜೆಪಿ

ವಿಪಕ್ಷನಾಯಕರಾದ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ಎಚ್.ಡಿ.ಕುಮಾರಸ್ವಾಮಿ ಅವರುಗಳು ನಿರುದ್ಯೋಗಿಗಳಾಗಿದ್ದು, ಊಟ ಸೇರದ ಕಾರಣ ದಿನಕ್ಕೊಂದು ಆರೋಪ ಮಾಡುತ್ತಿದ್ದಾರೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಎಂಎಲ್ಸಿ ಎನ್.ರವಿಕುಮಾರ್ ಲೇವಡಿ ಮಾಡಿದರು.

ವಿಧಾನಪರಿಷತ್ ತುಮಕೂರು ಸ್ಥಳೀಯ ಸಂಸ್ಥೆಗಳಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿಎನ್.ಲೋಕೇಶ್‍ಗೌಡ ನಾಮಪತ್ರ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಬಿಜೆಪಿ ವಿರುದ್ಧ ಆರೋಪಿಸುತ್ತಿರುವ ಕಾಂಗ್ರೆಸ್ ಸರಕಾರದ ಅವಧಿಯಲ್ಲೇ 30 ರಿಂದ 40 ಪರ್ಸೆಂಟೇಜ್ ಲಂಚವನ್ನು ಕೇಳಲಾಗುತ್ತಿತ್ತು. ಸಿದ್ದರಾಮಯ್ಯ ಅವರ ಮೇಲೆಯೇ 37 ಪ್ರಕರಣಗಳಿವೆ ಎಂದು ತಿರುಗೇಟು ನೀಡಿದರು.
ಚುನಾವಣೆಗೆ ಮುಂಚೆಯೇ ಕಾಂಗ್ರೆಸ್ ಸೋಲೋಪ್ಪಿಕೊಂಡಿದೆ:ಬಿಜೆಪಿ-ಜೆಡಿಎಸ್ ಒಳ ಒಪ್ಪಂದ ಮಾಡಿಕೊಂಡಿದೆ ಎಂದು ಡಾ.ಜಿ. ಪರಮೇಶ್ವರ ಅವರ ಆರೋಪಕ್ಕೆ ಪ್ರತಿಕ್ರಿಯಿಸಿದ ರವಿಕುಮಾರ್ ಅವರು ಇವರು ಆರೋಪ ಚುನಾವಣೆ ನಡೆಯುವುದಕ್ಕಿಂತ ಮುಂಚೆಯೇ ಕಾಂಗ್ರೆಸ್ ಸೋಲೊಪ್ಪಿಕೊಂಡಂತಾಗಿದೆ.

ಒಳ ಒಪ್ಪಂದ ಮಾಡಿಕೊಂಡಿದ್ದರೆ ಜೆಡಿಎಸ್ ಅಭ್ಯರ್ಥಿಯನ್ನು ಏಕೆ ಹಾಕುತ್ತಿತ್ತು. ಕೇವಲ 6 ಕಡೆ ಜೆಡಿಎಸ್ ಅಭ್ಯರ್ಥಿ ಹಾಕಿರುವುದರಿಂದ ಹಿಂದೆ ಉಳಿದೆಡೆ ಅವರಿಗೆ ಅಭ್ಯರ್ಥಿ ಸಿಕ್ಕಿಲ್ಲ. ನಮಗೆ ಯಾರೊಂದಿಗೊ ಒಪ್ಪಂದದ ಅವಶ್ಯಕತೆ ಇಲ್ಲ. ಪ್ರತೀ ಕ್ಷೇತ್ರದಲ್ಲಿ ಐದಾರು ಆಕಾಂಕ್ಷಿಗಳಿದ್ದಾರೆ. ಬಿಜೆಪಿ ಒಪ್ಪಂದಗಳಿಂದ ಬೆಳೆದು ಬಂದ ಪಾರ್ಟಿಯಲ್ಲ. ಕಾರ್ಯಕರ್ತರ ಶ್ರಮ ಜನರ ಕೆಲಸ ಮಾಡುವ ಮೂಲಕ ಬೆಳೆದು ಬಂದ ಪಾರ್ಟಿ. ಇದನ್ನು ಕಾಂಗ್ರೆಸ್‍ನವರು ಅರ್ಥ ಮಾಡ್ಕೊಳಬೇಕು. ಟೀಕೆಗೋಸ್ಕರ ಟೀಕೆ ಮಾಡಬಾರದು ಎಂದರು.

ಚುನಾವಣೆ ಮುಗಿದ ಬಳಿಕ ಪಕ್ಷದ ಜಿಲ್ಲಾಧ್ಯಕ್ಷರ ನೇಮಕ ಆಗಲಿದೆ ಎಂದ ವಿಧಾನಪರಿಷತ್ ಸದಸ್ಯರು ರಾಷ್ಟ್ರಧ್ವಜಕ್ಕೆ ಕಾಂಗ್ರೆಸ್ ವಾರಸುದಾರರು ಎಂದಿರುವ ಕೆಪಿಸಿಸಿ ಅಧ್ಯಕ್ಷರ ಹೇಳಿಕೆ ಮೂರ್ಖತನದಿಂದ ಕೂಡಿದೆ. ಮಾಜಿ ಸಚಿವ ಶಿವಣ್ಣ ಅವರು ಸ್ವಪಕ್ಷೀಯ ವಿರುದ್ಧ ಮಾಡಿರುವ ಬಹಿರಂಗ ಭ್ರಷ್ಟಾಚಾರದ ಬಗ್ಗೆ ಅವರೊಂದಿಗೆ ಮಾತನಾಡುವೆ ಎಂದರು.

ಬಿಜೆಪಿ ರಾಜ್ಯ ಉಪಾಧ್ಯಕ್ಷ ಎಂ.ಬಿ.ನಂದೀಶ್, ಮಾಜಿ ಶಾಸಕರಾದ ಬಿ.ಸುರೇಶ್‍ಗೌಡ, ಕಿರಣ್‍ಕುಮಾರ್, ಡಾ.ಎಂ.ಆರ್.ಹುಲಿನಾಯ್ಕರ್ ಜಿಲ್ಲಾ ಪ್ರಧಾನಕಾರ್ಯದರ್ಶಿ ಹೆಬ್ಬಾಕರವಿ, ನಿಗಮಮಂಡಳಿ ಅಧ್ಯಕ್ಷರಾದ ಮಂಜುನಾಥ್, ಎಸ್.ಆರ್.ಗೌಡ, ಉಪಾಧ್ಯಕ್ಷ ಚಂದ್ರಶೇಖರ್, ಬೆಟ್ಟಸ್ವಾಮಿ, ದಿಲೀಪ್, ಸಂಪಿಗೆಶ್ರೀಧರ್, ಕೊಪ್ಪಲ್‍ನಾಗರಾಜ್ ಮತ್ತಿತರ ಪಕ್ಷದ ಪ್ರಮುಖರು ಈ ವೇಳೆಹಾಜರಿದ್ದರು.

ನಾನು ಜಿಲ್ಲೆಯವನೇ ಹೊರಗಿನವನಲ್ಲ: ಬಿಜೆಪಿ ಪಕ್ಷಸಾಮಾನ್ಯ ಕಾರ್ಯಕರ್ತನಾಗಿದ್ದ ನನ್ನನ್ನು ಬಿಬಿಎಂಪಿ ಸದಸ್ಯನಾಗಿಸಿ ವಿಧಾನಪರಿಷತ್ ಸ್ಪರ್ಧಿಯಾಗುವಂತೆ ಮಾಡಿದೆ. ಜಿಲ್ಲೆ ನಮಗೆ ಹೊಸದಲ್ಲ, ನಮ್ಮ ತಂದೆ ಕೊರಟಗೆರೆ ತಾಲೂಕು ವಡ್ಡಗೆರೆ ಮೂಲದವರು. ಸಚಿವರಾದ ಮಾಧುಸ್ವಾಮಿ, ಬಿ.ಸಿ.ನಾಗೇಶ್, ಎಂಎಲ್ಸಿ ಎನ್.ರವಿಕುಮಾರ್, ಶಾಸಕರಾz Àಜಿ.ಬಿ.ಜ್ಯೋತಿಗಣೇಶ್, ರಾಜೇಶ್‍ಗೌಡ, ಚಿದಾನಂದ ಗೌಡ, ಸಂಸದ ಜಿ.ಎಸ್.ಬಸವರಾಜ್ ಇತರೆ ಪಕ್ಷದ ನಾಯಕರÀ ಆಶೀರ್ವಾದ ಬೆಂಬಲದೊಂದಿಗೆ ಉಮೇದುವಾರಿಕೆ ಸಲ್ಲಿಸಿದ್ದು, ಗೆಲುವಿನ ವಿಶ್ವಾಸವಿದೆ ಎಂದು ಬಿಜೆಪಿ ಅಭ್ಯರ್ಥಿ ಎನ್.ಲೋಕೇಶ್‍ಗೌಡ ತಿಳಿಸಿದರು.

ಮಳೆ ಹಾನಿ ಪ್ರದೇಶಕ್ಕೆ ಎಚ್ಡಿಕೆ ಏಕೆ ಭೇಟಿಕೊಟ್ಟಿಲ್ಲ?

ಮಳೆಹಾನಿ ಪ್ರದೇಶಗಳಿಗೆ ಸಿಎಂ ಭೇಟಿ ನೀಡಿ ಪರಿಹಾರಕ್ರಮಕ್ಕೆ ಡಿಸಿ, ಸಿಇಓಗಳಿಗೆ ಸೂಚಿಸಿದ್ದರು,ಕುಮಾರಸ್ವಾಮಿ ಅವರು ಬಿಜೆಪಿ ಸರಕಾರ ಏನು ಮಾಡುತ್ತಿಲ್ಲ. ಶಂಕಜಾಗಟೆ ಬಾರಿಸುತ್ತಿದೆ ಎಂದು ಟೀಕಿಸಿದ್ದಾರೆ. ನೆರೆ ಬಂದು ಪೂರ್ಣ ಮನೆ ಕಳೆದುಕೊಂಡವರಿಗೆ 1 ಲಕ್ಷದಿಂದ 5 ಲಕ್ಷಕ್ಕೆ ಪರಿಹಾರ ಹೆಚ್ಚಿಸಿ ಕೊಟ್ಟವರು ಸಿಎಂ. ಯಡಿಯೂರಪ್ಪ ಅವರು. ಇದ್ಯಾವುದರ ಅರಿವಿಲ್ಲದೆ ಕುಮಾರಸ್ವಾಮಿ ಮಾತಾಡುತ್ತಿದ್ದು, ಅವರೇಕೆ ನೆರೆ, ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡದೆ ಮನೆಯಲ್ಲಿದ್ದಾರೆ ಎಂದು ರವಿಕುಮಾರ್ ಪ್ರಶ್ನಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap