ಪಾವಗಡ;-
ಸಮಾಜದಲ್ಲಿ ಉದ್ಬವಿಸುವ ಸಮಸ್ಯೆಗಳ ವಿರುದ್ದ ಹೋರಾಡುವ ಮನೋಬಾವನೆಯನ್ನು ಪ್ರತಿಯೊಬ್ಬರು ಬೆಳೆಸಿಕೊಳ್ಳಬೇಕೆಂದು ನಮ್ಮಹಕ್ಕು ಸಂಸ್ಥೆಯ ರಾಜ್ಯಾಧ್ಯಕ್ಷರಾದ ಪಿ.ರಜತ್‍ಗೌಡ ತಿಳಿಸಿದರು.
ಶುಕ್ರವಾರ ಪಾವಗಡ ಗ್ರಾಮಾಂತರ ಪಿ.ರೊಪ್ಪ ಗ್ರಾಮದ ಸರ್ಕಾರಿ ಹಿರಿಯ ಮಾದ್ಯಮಿಕ ಪಾಠಶಾಲಾ ವಿದ್ಯಾರ್ಥಿಗಳಿಗೆ ಕಲಿಕಾ ಸಾಮಾಗ್ರಿಗಳು, ಬಡ ವಿದ್ಯಾರ್ಥಿಗಳಿಗೆ ಬಟ್ಟೆ, ಹಾಗೂ ಹಿರಿಯ ವೃದ್ದರಿಗೆ ಹೊದಿಕೆಗಳನ್ನು ವಿತರಸಿ ಮಾತನಾಡಿದರು.ಬೆಂಗಳೂರಿನ ಪೋಲೀಸ್ ಸರ್ಕಲ್ ಇನ್ಸಪೆಕ್ಟರ್ ಹಾಗೂ ನಮ್ಮ ಹಕ್ಕು ಸಂಸ್ಥೆಯ ಮಾರ್ಗದರ್ಶಕರು ಆದ ಎಸ್. ಆರ್. ರಾಘವೇಂದ್ರ ಮಾತನಾಡಿ, ಇಂದಿನ ಯುವಕರು ದುಶ್ಚಟಗಳಿಗೆ ಬಲಿಯಾಗುತ್ತಿದ್ದು,ಸಮಾಜ ಸೇವೇಯಲ್ಲಿ ತೊಡಗಿಸಿಕೊಂಡು, ದೇಶದ ಪ್ರಗತಿಗೆ ಮುಂದಾಗಬೇಕೇಂದು ತಿಳಿಸಿದರು.
ಪಾವಗಡ ತಾಲ್ಲೂಕು ನಮ್ಮ ಹಕ್ಕು ಸಂಸ್ಥೆಯ ಅಧ್ಯಕ್ಷ ಗಿರಿಪ್ಯಾಶನ್ ಗೀರೀಶ್ ಮಾತನಾಡಿ , ತಾಲ್ಲೂಕಿನಲ್ಲಿ ಆರ್.ಟಿ.ಐ. ಯೋಜನೆಯನ್ನು ಸಮರ್ಪಕವಾಗಿ ಅನುಷ್ಟಾನಗೊಳಿಸುವಂತೆ, ಮನೆಗಳಿಗೆ ವಿತರಣೆಯಾಗುವ ಗ್ಯಾಸ್ ಸಿಲೆಂಡರ್ ಗೆ ಹೆಚ್ಚು ಶುಲ್ಕ ಪಡೆಯದಂತೆ, ಶಾಶ್ವತ ನೀರಾವರಿ ಯೋಜನೆ ಜಾರಿಗೆ ಒತ್ತಾಯಿಸಿ ಮತ್ತಿತರ ಸಮಸ್ಯೆಗಳ ವಿರುದ್ದ ನಮ್ಮಹಕ್ಕು ಸಂಸ್ಥೆ ಹೋರಾಟಗಳನ್ನು ಹಮ್ಮಿಕೊಳ್ಳುತ್ತಾ ಬಂದಿದ್ದು, ಸರ್ಕಾರಿ ಶಾಲೆಯಲ್ಲಿ ಕಲಿಯುವ ವಿದ್ಯಾರ್ಥಿಗಳ ಕಲಿಕಾ ಸಾಮಾಥ್ರ್ಯವನ್ನು ಹೆಚ್ಚಿಸುವ ಉದ್ದೇಶದಿಂದ ಕಲಿಕಾ ಸಾಮಾಗ್ರಿಗಳನ್ನು, ಮತ್ತು ಬಡ ಮಕ್ಕಳಿಗೆ ಬಟ್ಟೆ ಹಾಗೂ ಗ್ರಾಮದ ವಯೋವೃದ್ದರಿಗೆ ಹೊದಿಕೆಗಳನ್ನು ವಿತರಸಲಾಗುತ್ತಿದೆ ಎಂದು ತಿಳಿಸಿದರು.
ರೋಟರಿ ಅಧ್ಯಕ್ಷ ಮಹಮದ್ ಇಮ್ರಾನ್,ನಮ್ಮಹಕ್ಕು ಸಂಸ್ಥೆಯ ರಾಜ್ಯ ಗೌರವಾಧ್ಯಕ್ಷರಾದ ಶ್ರೀನಿವಾಸರೆಡ್ಡಿ, ರಾಜ್ಯ ಪ್ರದಾನ ಕಾರ್ಯದರ್ಶಿ ಹರಿನಾಥ್, ಎಸ್.ಎಸ್.ಕೆ. ಕಾಲೇಜಿನ ಉಪನ್ಯಾಸಕ ನವೀನ್, ಸ್ವಾಮಿವಿವೇಕಾನಂದ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಕಟ್ಟಾ ನರಸಿಂಹಮೂರ್ತಿ ಮಾತನಾಡಿದರು.
ನಮ್ಮಹಕ್ಕು ಸಂಸ್ಥೆಯ ಸದಸ್ಯರುಗಳಿಗೆ ಗುರ್ತಿನ ಚೀಟಿಗಳನ್ನು ವಿತರಿಸಲಾಯಿತು.ಇದೇ ಸಂಧರ್ಭದಲ್ಲಿ 120 ಶಾಲಾ ವಿದ್ಯಾರ್ಥಿಗಳ ರಕ್ತದ ಗುಂಪು ಮಾದರಿಯನ್ನು ನಮ್ಮಹಕ್ಕು ಸಂಸ್ತೇಯಿಂದ ಉಚಿತವಾಗಿ ಪತ್ತೆ ಹಚ್ಚಲಾಯಿತು.ರೋಟರಿ ಮಾಜಿ ಅಧ್ಯಕ್ಷರಾದ ಡಾ.ಪ್ರಭಾಕರ್,ಕಮಲ್‍ಬಾಬು, ರೋಟರಿಸಹಕಾರ್ಯದರ್ಶಿ ಮಾನಂಶಶಿಕಿರಣ್,ವಿಶಾಲ್‍ಪ್ರಜ್ವಲ್,ವೆಂಕಟೇಶಲು,ರಾಜು, ಆರ್. ಹರೀಶ್,ಎಂ.ರಾಮಣ್ಣ, ಎಚ್.ಎನ್.ಪವನ್, ಅರುಣ್‍ಕುಮಾರ್,ಬೆಸ್ಕಾಂ ಇಂಜನೀಯರ್‍ಚಂದ್ರಶೇಖರ್,ಬ್ರೈಟ್ ಪ್ಯೂಚರ್ ಸಿ.ಇ.ಒ.
ಶ್ರೀಧರ್ ಗುಪ್ತಾ, ಮುಖ್ಯಶಿಕ್ಷಕಿ ಮಂಜುಳಾ,ಸಹಶಿಕ್ಷಕರಾದ ನಾಗೇಂದ್ರ, ಹರಿಡಿಜಿಟಲ್ ನ ಹರೀಶ್,ಸರ್ಕಾರಿ ಅಸ್ಪತ್ರೆಯ ಲ್ಯಾಬ್ ಟಿಕ್ನಿಷಿಯನ್ ಗುರುಪ್ರಸಾದ್, ಕಾತೀಕ್, ಪವನ್, ಮತ್ತಿರರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ