ಶ್ರೀ ಲಕ್ಷ್ಮಿನರಸಿಂಹಸ್ವಾಮಿ ಬ್ರಹ್ಮರಥೋತ್ಸವ

ಹೊಳಲ್ಕೆರೆ:

     ಮಧ್ಯ ಕರ್ನಾಟಕದ ಬಯಲು ಸೀಮೆಯ ಕೋಟೆ ನಾಡು ಚಿತ್ರದುರ್ಗ ಜಿಲ್ಲೆಯಲ್ಲಿ ಒಂದಾಲ್ಲ ಒಂದು ದೇವಸ್ಥಾನಗಳು ವಿಶೇಷತೆಯಿಂದ ಕೂಡಿರುತ್ತವೆ. ಅದೇ ರೀತಿ ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನ ಹೊರಕೆ ದೇವರಪುರ ( ಹೆಚ್.ಡಿ.ಪು) ಶ್ರೀ ಕ್ಷೇತ್ರ ಶ್ರೀ ಲಕ್ಷ್ಮಿನರಸಿಂಹಸ್ವಾಮಿ (ಹೊರಕೆ ರಂಗನಾಥ ಸ್ವಾಮಿ) ಬ್ರಹ್ಮರಥೋತ್ಸವ ಮಾರ್ಚ್ ೧೩ ರಂದು ಮಧ್ಯಾಹ್ನ ೩. ರಿಂದ ೪.೩೦ ರ ಸಮಯಕ್ಕೆ ಸ್ವಾಮಿಯ ಬ್ರಹ್ಮರಥೋತ್ಸವವು ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು.

   ತಿರುಪತಿ ಶ್ರೀ ವೆಂಕಟೇಶ್ವರಸ್ಚಾಮಿಯು ಶ್ರೀ ಲಕ್ಷೀನರಸಿಂಹಸ್ವಾಮಿಯಾಗಿ ಬಯಲುಸೀಮೆ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನ ಹೊರಕೆದೇವರಪುರದಲ್ಲಿ ನೆಲೆಗೊಂಡಿದ್ದಾನೆ. ಈ ಭಾಗದ ಭಕ್ತರು ನೂರಾರು ಮೈಲು ದೂರದ ತಿರುಪತಿಗೆ ಬಂದು ದರ್ಶನ ಪಡೆಯುವುದು ಕಷ್ಟ ಸಾಧ್ಯ ಎಂದು ಭಕ್ತರಿದ್ದ ಸ್ಥಳಕ್ಕೆ ಬಂದು ನೆಲೆಸಿ ಭಕ್ತರ ಇಷ್ಟಾರ್ಥಸಿದ್ದಿಗೆ ಜನರ ಸಂಕಷ್ಟ ನಿವಾರಿಸುತ್ತಿದ್ದಾನೆ ಎಂಬುದು ಇಲ್ಲಿನ ಭಕ್ತರ ನಂಬಿಕೆ ಇದೆ.

Recent Articles

spot_img

Related Stories

Share via
Copy link