ತೆಲಂಗಾಣ :
ನಟಿ ಸೌಂದರ್ಯಾ ಅವರು 2004ರ ಏಪ್ರಿಲ್ 17ರಂದು ನಿಧನ ಹೊಂದಿದರು. ಅವರು ಏರಿದ್ದ ಖಾಸಗಿ ವಿಮಾನ ಟೇಕಾಫ್ ಆದ ಕೆಲವೇ ಗಂಟೆಗಳಲ್ಲಿ ಹೊತ್ತಿ ಉರಿಯಿತು. ಅವರ ಜೊತೆ ಸಹೋದರ ಅಮರನಾಥ್ ಕೂಡ ನಿಧನ ಹೊಂದಿದರು. ಈ ಘಟನೆ ನಡೆದು 21 ವರ್ಷಗಳು ಕಳೆದಿವೆ. ಈಗ ಟಾಲಿವುಡ್ನ ಖ್ಯಾತ ನಟ, ನಿರ್ಮಾಪಕ ಮೋಹನ್ ಬಾಬು ವಿರುದ್ಧ ದೂರು ದಾಖಲಾಗಿದೆ. ಸೌಂದರ್ಯಾ ಸಾವಿನ ಹಿಂದೆ ಇವರ ಕೈವಾಡ ಇದೆ ಎಂದು ಆರೋಪಿಸಲಾಗಿದೆ. ಈ ವಿಚಾರ ಸಾಕಷ್ಟು ಸಂಚಲನ ಸೃಷ್ಟಿ ಮಾಡಿದೆ.
‘ಸೌಂದರ್ಯಾ ಅವರದ್ದು ಆಕಸ್ಮಿಕ ಸಾವಲ್ಲ, ಇದೊಂದು ನಿಯೋಜಿತ ಕೊಲೆ. ಜಾಗದ ವಿಚಾರದಲ್ಲಿ ಈ ಕೊಲೆ ನಡೆದಿದೆ. ಸೌಂದರ್ಯಾ ಹಾಗೂ ಅವರ ಸಹೋದರ ಅಮರನಾಥ್ ಶಂಶಾಬಾದ್ನಲ್ಲಿರುವ ಆರು ಎಕರೆ ಜಾಗವನ್ನು ಹೊಂದಿದ್ದರು. ಇದನ್ನು ತಮಗೆ ಕೊಡುವಂತೆ ಮೋಹನ್ ಬಾಬು ಕೇಳುತ್ತಿದ್ದರು. ಇದನ್ನು ಮಾರಲು ಸೌಂದರ್ಯಾ ನಿರಾಕರಿಸಿದ್ದರು. ಇದರಿಂದ ಈ ಕೊಲೆ ನಡೆದಿದೆ’ ಎಂದು ದೂರಿನಲ್ಲಿ ತಿಳಿಸಲಾಗಿದೆ.
