ಇವಿಎಂ ಬ್ಯಾಲೆಟ್‌ನಲ್ಲಿ ಈ ಬಾರಿ ಬ್ರೈಲ್ ಲಿಪಿ ಅಳವಡಿಕೆ!

ತುಮಕೂರು

ಎಸ್.ಹರೀಶ್ ಆಚಾರ್ಯ

     ನಿರ್ಧಿಷ್ಟ ಅಭ್ಯರ್ಥಿಗೆ ಮತ ಬೀಳುವಂತೆ ಇವಿಎಂ ದುರ್ಬಳಕೆಯಾಗುತ್ತಿದೆ ಎಂಬ ರಾಜಕೀಯ ಆರೋಪಗಳು ಒಂದೆಡೆಯಾದರೆ ಮತದಾರರು ಚುನಾವಣೆಯಲ್ಲಿ ಇವಿಎಂ, ವಿವಿಪ್ಯಾಟ್ ತಪ್ಪು ಬಳಕೆ ಮಾಡುತ್ತಿರುವುದನ್ನು ಚುನಾವಣಾ ಆಯೋಗ ಗುರುತಿಸಿ ಅಂತಹ ಎಡವಟ್ಟುಗಳನ್ನು ತಪ್ಪಿಸಲು ಜಾಗೃತಿ ಮೂಡಿಸಿದೆ. ಅಂತೆಯೇ ರಾಜ್ಯದ ಚುನಾವಣಾ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಇವಿಎಂ ಬ್ಯಾಲೆಟ್‌ನಲ್ಲಿ ಬ್ರೆöÊನ್ ಲಿಪಿಯನ್ನು ಅಳವಡಿಸಿರುವುದು ಗಮನಸೆಳೆದಿದೆ.

     ಬ್ಯಾಲೆಟ್ ಬಾಕ್ಸ್ನಲ್ಲಿ ಹೆಸರಿನ ಪಕ್ಕ ಬ್ರೆöÊನ್ ಲಿಪಿಯಲ್ಲೂ ಅಭ್ಯರ್ಥಿ ಹೆಸರು ನಮೂದಿಸುವುದರಿಂದ ಸಂಪೂರ್ಣ ಅಂಧ ಮತದಾರರು ಯಾರ ಸಹಾಯವೂ ಇಲ್ಲದೇ ತಾವೇ ನೇರ ಬ್ಯಾಲೆಟ್ ಬಾಕ್ಸ್ ಬಳಿ ಬಂದು ಖುದ್ದು ತಮ್ಮ ಮತ ಹಕ್ಕನ್ನು ಚಲಾಯಿಸಬಹುದಾಗಿದ್ದು, ಮತ ಚಲಾಯಿಸುವ ಸಂದರ್ಭದಲ್ಲಿ ಪಾರದರ್ಶಕತೆ ಸಾಧಿಸಲು ಇಂತಹ ಸುಧಾರಣಾ ಕ್ರಮಗಳು ಪೂರಕವೆನಿಸಿದೆ.

ಮತದಾರರು ಮಾಡುತ್ತಿರುವ ಎಡವಟ್ಟುಗಳು

    ಕಳೆದ ಒಂದೂವರೆ ದಶಕದಿಂದೀಚೆಗೆ ಇವಿಎಂ ಮತ ಯಂತ್ರಗಳನ್ನು ಲೋಕಸಭೆ, ವಿಧಾನಸಭೆ ಸ್ಥಳೀಯ ಸಂಸ್ಥೆ ಚುನಾವಣೆಗೆ ಪರಿಚಯಿಸಿತು. ಬ್ಯಾಲೆಟ್ ಪೇಪರ್‌ನಲ್ಲೆ ಮತ ಮುದ್ರೆ ಒತ್ತಿ ಮತಹಾಕುತ್ತಿದ್ದ ಮತದಾರರಿಗೆ ಇನ್ನೂ ಪೂರ್ಣ ಪ್ರಮಾಣದಲ್ಲಿ ಇವಿಎಂ ಬ್ಯಾಲೆಟ್ ಮತ ಯಂತ್ರದ ಬಳಕೆಯ ಅರಿವು ಸಂಪೂರ್ಣ ಆಗಿಲ್ಲ. ಗ್ರಾಮೀಣ ಅನಕ್ಷರಸ್ಥರು ಮಾತ್ರವಲ್ಲದೆ ನಗರ ವಿದ್ಯಾವಂತರೇ ಇವಿಎಂ ಯಂತ್ರವನ್ನು ತಪ್ಪಾಗಿ ಬಳಸುತ್ತಿರುವುದು ಕಂಡುಬಂದಿದೆ. ಆದ್ದರಿಂದ ಶೀಘ್ರದಲ್ಲೆ ಎದುರಾಗಲಿರುವ ಕರ್ನಾಟಕ ವಿಧಾನಸಭೆ ಚುನಾವಣೆ ಪೂರ್ವಭಾವಿಯಾಗಿ ಚುನಾವಣಾ ಆಯೋಗ, ಬೂತ್‌ವಾರು ಹಾಗೂ ಸರ್ಕಾರಿ ಕಚೇರಿಗಳಲ್ಲಿ ಇವಿಎಂ ಮತ ಚಲಾವಣೆ ಪ್ರಾತ್ಯಕ್ಷಿಕಾ ಕೇಂದ್ರಗಳನ್ನು ತೆರೆದು ಜಾಗೃತಿ ಮೂಡಿಸುತ್ತಿದೆ.

     ಸಾಮಾನ್ಯ ತಪ್ಪುಗಳು: ಇವಿಎಂ ಮಿಷನ್‌ನಲ್ಲಿ ಒಂದೇ ಬಾರಿಗೆ ಮರ‍್ನಾಲ್ಕು ಬಟನ್ ಒತ್ತುವುದು. ಹೀಗೆ ಒತ್ತಿದರೂ ಮೊದಲು ಯಾರ ಹೆಸರಿನ ಮುಂದೆ ಬಟನ್ ಒತ್ತಿರುತ್ತಾರೋ ಅವರಿಗೆ ಆ ಮತ ದಾಖಲಾಗುತ್ತದೆ.

     ನಿಮ್ಮ ಅಪೇಕ್ಷಿತ ಅಭ್ಯರ್ಥಿಯ ಹೆಸರಿನ ಮುಂದೆ ಬಟನ್ ಹೊತ್ತಿದಾಗ ಲೈಟ್ ಆನ್ ಆಗಿ ಬೀಪ್ ಸೌಂಡ್ ಬರುತ್ತದೆ. ಜೊತೆಗೆ ಪಕ್ಕದಲ್ಲಿ ವಿವಿ ಪ್ಯಾಟ್‌ನಲ್ಲಿ ಅಭ್ಯರ್ಥಿ ಕ್ರಮಾಂಕ ಸಂಖ್ಯೆಯ ಸ್ಲಿಪ್ ಸಹ ಬಾಕ್ಸ್ಗೆ ಬೀಳುತ್ತದೆ. ಇದನ್ನು ಗಮನಿಸಿದೆ ಆತುರವಾಗಿ ಬಟನ್ ಒತ್ತಿ ಮತಚಲಾವಣೆ ಬಾಕ್ಸ್ನಿಂದ ನಿರ್ಗಮಿಸುವುದು.ಇವಿಎಂ ಯಂತ್ರದ ಅಭ್ಯರ್ಥಿಗಳ ಹೆಸರಿನ ಮುಂದೆ ಬಟನ್ ಒತ್ತದೆ ಹೆಬ್ಬೆರೆಳೆಗೂ ಶಾಹಿ ಹಾಕಿ ಬಟನ್ ಮೇಲೆ ಹೆಬ್ಬೆಟ್ಟು ಒತ್ತಿದಂತೆ ಒತ್ತುವುದು.

    ಇವಿಎಂ ಬಟನ್ ಒತ್ತಿದಾಗ ತಾಂತ್ರಿಕ ಸಮಸ್ಯೆಯಿಂದ ಬೀಪ್ ಸೌಂಡ್ ಬಾರದಿದ್ದಾಗ ಅದನ್ನು ಅಧಿಕಾರಿಗಳ ಗಮನಕ್ಕೆ ತಾರವೇ ತಾವೇ ಅವು ಒಳಕ್ಕೆ ಸೇರಿವೆ ಎಂದು ಬಟನ್ ಅನ್ನು ಪೆನ್ನು, ಪೆನ್ಸಿಲ್, ಪಿನ್‌ಗಳಿಂದ ಮೇಲೆತ್ತುವ ಪ್ರಯತ್ನ ಮಾಡುವುದು.

    ಬಟನ್ ಮೇಲೆ ಎಂಚಲು ಹಚ್ಚುವುದು ಹೀಗೆ ಹಲವು ಅವೈಜ್ಞಾನಿಕ ಕ್ರಮಗಳನ್ನು ಮತದಾರರು ಮಾಡಲು ಮುಂದಾಗುತ್ತಾರೆ. ಇಂತಹ ತಪ್ಪುಗಳು ಮತದಾರರು ತಮಗೆ ಅರಿವಿಲ್ಲದಂತೆ ಮಾಡುತ್ತಿರುವ ತಪ್ಪುಗಳಾಗಿವೆ ಎಂದು ಚುನಾವಣಾ ಸಂಪನ್ಮೂಲ ತಜ್ಞ ಮಲ್ಲಿಕಾರ್ಜುನ್ ವಿವರಿಸಿದ್ದಾರೆ. ಇಂತಹ ತಪ್ಪುಗಳನ್ನು ತಡೆಯಲು ಈ ಬಾರಿ ಚುನಾವಣಾ ಆಯೋಗ ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳ ಸೂಚನೆ ಮೇರೆಗೆ ಪ್ರಾತ್ಯಕ್ಷಿಕೆ ಮೂಲಕ ಜಿಲ್ಲೆಯಾದ್ಯಂತ 11 ಕ್ಷೇತ್ರದಲ್ಲೂ ಅರಿವು ಮೂಡಿಸಲಾಗುತ್ತದೆ ಎಂದು ಚುನಾವಣಾ ತಹಸೀಲ್ದಾರ್ ಗೌರಮ್ಮ ತಿಳಿಸಿದ್ದಾರೆ.

ಸಹಾಯಕರೆಂದು ಕರೆತಂದು ಮತಚಲಾವಣೆಗೆ ಕಡಿವಾಣ ಅಗತ್ಯ :

     ವೃದ್ಧರು, ವಿಕಲಚೇತನ ಮತದಾರರನ್ನು ಮತಗಟ್ಟೆಗೆ ಸಹಾಯಕರಾಗಿ ಕರೆತರುವ ನೆಪದಲ್ಲಿ ತಮಗಿಷ್ಟ ಬಂದ ಅಭ್ಯರ್ಥಿಗೆ ಮತಹಾಕಿಸುವುದು ಬಹಳ ಹಿಂದಿನಿಂದಲೂ ನಡೆದು ಬಂದಿದೆ. ಬ್ಯಾಲೆಟ್ ಪೇಪರ್ ಕಾಲದಿಂದ ಇವಿಎಂ ಕಾಲಕ್ಕೆ ಬದಲಾದ ಮೇಲೂ ಇದು ತಪ್ಪಿಲ್ಲ. ಮತದಾರರು ಮಾಡುವ ಸಾಮಾನ್ಯ ತಪ್ಪುಗಳಿಗಿಂತ ಇದು ದೊಡ್ಡ ಮತಅಕ್ರಮವೆನಿಸಿದ್ದು, ಇದರ ಕಡಿವಾಣಕ್ಕೆ ಆಯೋಗ ಗಂಭೀರ ಕ್ರಮ ತೆಗೆದುಕೊಳ್ಳುವ ಅಗತ್ಯವಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap