ಸಂವಿಧಾನದ ಬ್ರೈಲ್-ಲಿಪಿ ಆವೃತ್ತಿ ಬಿಡುಗಡೆ ….!

ಬೆಂಗಳೂರು: 

    ಭಾರತ ಸಂವಿಧಾನ ಜಾರಿಯಾಗಿ 75 ವರ್ಷ ತುಂಬಿದ ಹಿನ್ನೆಲೆಯಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಸೋಮವಾರ ಸಂವಿಧಾನದ ಬ್ರೈಲ್-ಲಿಪಿ(ದೃಷ್ಟಿಹೀನರು ಬಳಸುವ ಸ್ಪರ್ಶ ಬರವಣಿಗೆಯ ವ್ಯವಸ್ಥೆ) ಆವೃತ್ತಿಯನ್ನು ಬಿಡುಗಡೆ ಮಾಡಿದರು.ಬೆಂಗಳೂರಿನ ಶಂಕರ ಕಣ್ಣಿನ ಆಸ್ಪತ್ರೆ ಮತ್ತು ಸಿಐಐ ಯಂಗ್ ಇಂಡಿಯನ್ಸ್(ಯಿ) ಬೆಂಗಳೂರಿನ ಸಹಯೋಗದೊಂದಿಗೆ ಸಂವಿಧಾನದ ಬ್ರೈಲ್-ಲಿಪಿಯ ಆವೃತ್ತಿಯನ್ನು ಸಿದ್ಧಪಡಿಸಲಾಗಿದೆ.

   “ಈ ಉಪಕ್ರಮವು ದೃಷ್ಟಿ ವಿಶೇಷಚೇತನರು ಅಥವಾ ದೃಷ್ಟಿ ಕಡಿಮೆ ಇರುವ ನಾಗರಿಕರು ತಮ್ಮ ಹಕ್ಕುಗಳು ಮತ್ತು ಜವಾಬ್ದಾರಿಗಳನ್ನು ಓದಲು ಮತ್ತು ಅರ್ಥಮಾಡಿಕೊಳ್ಳಲು ಅನುವು ಮಾಡಿಕೊಡುವ ಮೂಲಕ ಅವರನ್ನು ಸಬಲೀಕರಣಗೊಳಿಸುವ ಗುರಿಯನ್ನು ಹೊಂದಿದೆ” ಎಂದು ಶಂಕರ ಐ ಫೌಂಡೇಶನ್ ಇಂಡಿಯಾ ಮತ್ತು ವೈದ್ಯಕೀಯ ಆಡಳಿತ, ಗುಣಮಟ್ಟ ಮತ್ತು ಶಿಕ್ಷಣದ ಅಧ್ಯಕ್ಷ ಡಾ. ಕೌಶಿಕ್ ಮುರಳಿ ಸೋಮವಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಬ್ರೈಲ್ ಆವೃತ್ತಿಯನ್ನು ಪ್ರಮುಖ ಸಂಸ್ಥೆಗಳಿಗೆ ವಿತರಿಸಲಾಗುವುದು ಎಂದು ಅವರು ಹೇಳಿದ್ದಾರೆ.

Recent Articles

spot_img

Related Stories

Share via
Copy link