ಶಿವಮೊಗ್ಗ:
ಆಪರೇಷನ್ ಸಿಂದೂರ ಯಶಸ್ವಿಯ ಹಿನ್ನಲೆಯಲ್ಲಿ ಹಾಗೂ ನಮ್ಮ ಸೈನಿಕರಿಗೆ ನೈತಿಕ ಬೆಂಬಲ ಸೂಚಿಸಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಎಲ್ಲೆಡೆ ತಿರಂಗ ಯಾತ್ರೆಗೆ ಸೂಚಿಸಿದ್ದಾರೆ. ಅದರಂತೆ ನಮ್ಮ ರಾಜ್ಯದಲ್ಲಿ ನಡೆಸಲು ತೀರ್ಮಾನಿಸಲಾಗಿದೆ. ಇದು ರಾಜಕೀಯೇತರ ಯಾತ್ರೆಯಾಗಿ ನಡೆಯಲಿದೆ. ಮೇ 14ರಂದು ಬೆಂಗಳೂರಿನಲ್ಲಿ ತಿರಂಗ ಯಾತ್ರೆ ಆಯೋಜಿಸಲಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯಾತ್ರೆಯಲ್ಲಿ ನಿವೃತ್ತ ಯೋಧರು, ರೈತರು, ವಿದ್ಯಾರ್ಥಿಗಳು, ಎಲ್ಲಾ ವರ್ಗದ ಜನರು ಪಾಲ್ಗೊಳ್ಳಲಿದ್ದಾರೆ. ಮೇ 15ಕ್ಕೆ ಮಂಗಳೂರು ಬೆಳಗಾವಿಯಲ್ಲಿ ನಡೆದರೆ. ಮೇ 16ರಂದು ಜಿಲ್ಲಾ ಕೇಂದ್ರದಲ್ಲಿ ನಡೆಯಲಿದೆ. 18 ರಿಂದ 23ವರೆಗೆ ತಾಲೂಕು ಮಟ್ಟದಲ್ಲಿ ನಡೆಯಲಿದೆ. ಶಿವಮೊಗ್ಗದಲ್ಲಿ ನಡೆಯುವ ತಿರಂಗ ಯಾತ್ರೆಯಲ್ಲಿ ತಾವು ಭಾಗಿಯಾಗುವುದಾಗಿ ತಿಳಿಸಿದರು.
ಸಚಿವ ಪ್ರಿಯಾಂಕ್ ಖರ್ಗೆ ಸೇರಿದಂತೆ ಕಾಂಗ್ರೆಸ್ ನಾಯಕರು ಕದನ ವಿರಾಮದ ನಂತರ ಹಗುರವಾಗಿ ಮಾತನಾಡಲು ಆರಂಭಿಸಿದ್ದಾರೆ. ಪ್ರಧಾನಿ ಮೋದಿ ಟ್ರಂಪ್‌ಗೆ ಶರಣಾಗಿರುವಂತೆ ಹೋಲಿಸಿ ಮಾತನಾಡಿದ್ದಾರೆ. ಕದನ ವಿರಾಮ ಎಂದರೆ ಶಾಶ್ವತವಲ್ಲ. ಉಗ್ರ ಚಟುವಟಿಕೆ ನಡೆದರೆ ಆಕ್ಟ್ ಆಫ್ ವಾರ್ ಎಂಬುದನ್ನ ಕಾಂಗ್ರೆಸ್ ತಿಳಿದುಕೊಳ್ಳಬೇಕು. ಕದನ ವಿರಾಮ ರಾಜನೀತಿ ಎಂದು ವಿವರಿಸಿದರು.
ಕದನ ವಿರಾಮ ಆದ ನಂತರವೂ ಪಾಕ್ ದಾಳಿ ನಡೆಸಿದೆ. ಅದನ್ನ ಗಂಭೀರವಾಗಿ ಪರಿಗಣಿಸಲಿದ್ದೇವೆ.
ಪೆಹಲ್ಗಾಮ್ ಉಗ್ರರು ಎಲ್ಲಿದ್ದಾರೆ ಎಂದು ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ. ನಮ್ಮ ಸಶಸ್ತ್ರ ಪಡೆಗಳು ಯಾವಾಗಲೂ ಉಗ್ರರನ್ನ ಸದೆಬಡೆಯಲು ಸಜ್ಜಾಗಿದ್ದಾರೆ. ಕದನ ವಿರಾಮ ನಾಳೆ ಏನು ಬೇಕಾದರೂ ಆಗಬಹುದು. ಇದು ಯುದ್ಧ ಮಾಡುವ ಮತ್ತು ಉಗ್ರ ಚಟುವಟಿಕೆಗೆ ಬೆಂಬಲಿಸುವ ಕಾಲ ಅಲ್ಲ ಎಂದು ಪ್ರಧಾನಿ ಹೇಳಿದ್ದಾರೆ. ಅದನ್ನ ಕಾಂಗ್ರೆಸ್ ಅರಿತುಕೊಳ್ಳಬೇಕು ಎಂದರು.
