ಕಾಫಿ ತೋಟದಲ್ಲಿ ಕೋಟ್ಯಾಂತರ ಮೌಲ್ಯದ ಬ್ರಿಟೀಷರ ಕಾಲದ ಪುರಾತನ ಬೆಳ್ಳಿ ನಾಣ್ಯಗಳು !

ಸಕಲೇಶಪುರ: 

ಬ್ರಿಟೀಷರ ಕಾಲದ ಪುರಾತನ ಬೆಳ್ಳಿ ನಾಣ್ಯಗಳನ್ನು ಸಕಲೇಶಪುರ ಗ್ರಾಮಾಂತರ ಠಾಣೆಯ ಪೊಲೀಸರು ವಶಪಡೆದಿರುವ ಘಟನೆ ತಾಲೂಕಿನಲ್ಲಿ ನಡೆದಿದೆ.

ತಾಲೂಕಿನ ಹಾಲೇಬೇಲೂರು ಗ್ರಾಮದ ಶ್ಯಾಮ್ ಎಂಬುವರ ಕಾಫಿ ತೋಟದಲ್ಲಿ ವಾಟೆಗದ್ದೆ ಗ್ರಾಮದ ಹರೀಶ್ ಹಾಗೂ ಇತರರು ಕಳೆದ 15 ದಿನಗಳ ಹಿಂದೆ ಕೆಲಸ ಮಾಡುವಾಗ ಬ್ರಿಟೀಷರ ಕಾಲದ ಕೆಲ ನಾಣ್ಯಗಳು ದೊರಕಿದ್ದು ಮಾಲಿಕರಿಗೆ ತಿಳಿಸದೆ ತೆಗೆದುಕೊಂಡು ಹೋಗಿರುತ್ತಾರೆ.

       ಕೆಲಸಗಾರರಿಗೆ ನಿಧಿ ಸಿಕ್ಕಿದೆ ಎಂಬ ಸುದ್ದಿ ಗ್ರಾಮದಲ್ಲಿ ಹರಡಿದಾಗ ಈ ಕುರಿತು ತೋಟದ ಮಾಲಿಕರು ಹರೀಶ್ ಬಳಿ ಈ ಕುರಿತು ವಿಚಾರಿಸಿದಾಗ ಅವನು ಇಂದು ನನಗೆ ಬೆಳ್ಳಿಯಂತಿರುವ ಕೇವಲ 9 ನಾಣ್ಯ ಸಿಕ್ಕಿದೆ ಎಂದು ಹೇಳಿ ಮಾಲಿಕರಿಗೆ 9 ನಾಣ್ಯ ಒಪ್ಪಿಸಿದ್ದಾನೆ.

ಈ ವೇಳೆಗಾಗಲೆ ಮಾಹಿತಿ ಸಿಕ್ಕ ತೋಟದ ಮಾಲಿಕ ಶ್ಯಾಮ್ ಪೋಲಿಸರಿಗೆ ಈ ಕುರಿತು ದೂರು ನೀಡಿ 9 ನಾಣ್ಯಗಳನ್ನು ಪೋಲಿಸರಿಗೆ ಒಪ್ಪಿಸಿದ್ದಾರೆ.

ಈ ಕುರಿತು ಗ್ರಾಮಾಂತರ ಠಾಣೆಯ ಪಿಎಸ್‌ಐ ಬಸವರಾಜ್ ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ಹರೀಶ್‌ನನ್ನು ಬಂಧಿಸಿ, ವಾಟೆಗದ್ದೆ ಗ್ರಾಮದ ಅವನ ಮನೆಯ ಹಿಂಭಾಗ ಬಿಳಿ ಬಟ್ಟೆಯಲ್ಲಿ ಸುತ್ತಿದ್ದ ಸುಮಾರು 19 ಬ್ರಿಟೀಷರ ಕಾಲದ ಬೆಳ್ಳಿ ನಾಣ್ಯಗಳನ್ನು ವಶಪಡಿಸಿಕೊಂಡಿದ್ದಾರೆ.

ಒಟ್ಟು 28 ಬೆಳ್ಳಿ ನಾಣ್ಯಗಳು ದೊರಕಿದ್ದು ಈ ನಾಣ್ಯಗಳಿಗೆ ಮಾರುಕಟ್ಟೆಯಲ್ಲಿ ಕೋಟ್ಯಾಂತರ ಮೌಲ್ಯದ ಬೆಲೆ ಇದ್ದು, ವಶಪಡಿಸಿಕೊಂಡ ನಾಣ್ಯಗಳನ್ನು ಪ್ರಾಚೀನ ಹಾಗೂ ಪುರಾತತ್ವ ಇಲಾಖೆಗೆ ನೀಡಲಾಗುತ್ತದೆ ಎಂದು ತಿಳಿದು ಬಂದಿದೆ.

ಡಿ.ವೈ.ಎಸ್.ಪಿ ಅನಿಲ್ ಕುಮಾರ್, ಗ್ರಾಮಾಂತರ ಠಾಣೆ ಪಿಎಸ್‌ಐ ಬಸವರಾಜು ಮಾರ್ಗದರ್ಶನದಲ್ಲಿ ತನಿಖೆ ನಡೆಸಲಾಗುತ್ತಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link