ಈ ವೀಡಿಯೋ ನೋಡಿದ್ರೆ ನೀವು ಬೆಚ್ಚಿಬೀಳುವುದು ಪಕ್ಕಾ…!

ಹೈದರಾಬಾದ್​: 

    ಇತ್ತೀಚಿನ ದಿನಗಳಲ್ಲಿ ತೆಲಂಗಾಣದ ರಾಜಧಾನಿ ಹೈದರಾಬಾದಿನಲ್ಲಿ ದರೋಡ ಪ್ರಕರಣಗಳು ಹೆಚ್ಚುತ್ತಿದ್ದು, ರಾಜ್ಯ ರಾಜಧಾನಿಯಲ್ಲಿ ದರೋಡೆಕೋರರ ಹೊಸ ಗುಂಪೊಂದು ಕಾಣಿಸಿಕೊಂಡಿದೆ. ಈ ಗ್ಯಾಂಗ್​ನ ಸದಸ್ಯರು ಬುರ್ಖಾ ಧರಿಸಿ ಕಳ್ಳತನ ಮಾಡುತ್ತಿದ್ದು, ಇವರನ್ನು ಹಿಡಿಯಲು ಪೊಲೀಸರು ಪರದಾಡುತ್ತಿದ್ದಾರೆ.

    ಇದೀಗ ಮತ್ತೊಮ್ಮೆ ಈ ಗ್ಯಾಂಗ್​ ಮತ್ತೊಂದು ಕೃತ್ಯ ಬೆಳಕಿಗೆ ಬಂದಿದ್ದು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುರಿತಾದ ಪ್ರಶ್ನೆಗಳು ಉದ್ಭವಿಸಿದೆ.

   

ತೆಲಂಗಾಣದ ರಾಜಧಾನಿ ಹೈದರಾಬಾದಿನ ಮೆಡ್​ಚಲ್​ನಲ್ಲಿ ಇರುವ ಚಿನ್ನಾಭರಣ ಅಂಗಡಿಗೆ ಬುರ್ಖಾ ಧರಿಸಿರುವ ಇಬ್ಬರು ವ್ಯಕ್ತಿಗಳು ಕಳ್ಳತನಕ್ಕೆ ಮುಂದಾಗಿದ್ದು, ಇದನ್ನು ಕಂಡು ಮಾಲೀಕ ಅವರ ಯೋಜನೆಯನ್ನು ವಿಫಲಗೊಳಿಸುವಲ್ಲಿ ಯಶಸ್ವಿಯಾಗಿದ್ದು, ಗಾಯಗೊಂಡಿರುವ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್​ ವೈರಲ್​ ಆಗುತ್ತಿದೆ.

    ವೈರಲ್​ ಆಗಿರುವ ವಿಡಿಯೋ ನೋಡವುದಾದರೆ ಬುರ್ಖಾ ಧರಿಸಿರುವ ವ್ಯಕ್ತಿಯೋರ್ವ ಮೆಡ್ಚಲ್‌ನ ಕೊಂಪಲ್ಲಿಯಲ್ಲಿರುವ ಜಗದಂಬಾ ಜ್ಯುವೆಲರ್ಸ್‌ಗೆ ಬೆಳಿಗ್ಗೆ 11 ಗಂಟೆ ಸುಮಾರಿಗೆ ಪ್ರವೇಶಿಸಿದ್ದಾರೆ. ಒಬ್ಬ ವ್ಯಕ್ತಿ ದೊಡ್ಡ ಚಾಕು ಒಂದನ್ನು ಹಿಡಿದು ಅಂಗಡಿಯ ಮಾಲೀಕನಿಗೆ ಹಣ ಹಾಗೂ ಬೆಲೆಬಾಳುವ ವಸ್ತುಗಳನ್ನು ಕೊಡುವಂತೆ ಸೂಚಿಸುತ್ತಾನೆ.

   ಇದನ್ನು ಗಮನಿಸಿದ ಕೆಲಸದವ ಕೂಡಲೇ ಬೀಗವನ್ನು ಇಟ್ಟುಕೊಳ್ಳುತ್ತಾನೆ. ಇದನ್ನು ಗಮನಿಸಿದ ದರೋಡೆಕೋರ ಮಾಲೀಕನ ಮೇಲೆ ಚಾಕುವಿನಿಂದ ದಾಳಿ ಮಾಡುತ್ತಾನೆ. ಈ ವೇಳೆ ನೋವನ್ನು ತಡೆದುಕೊಳ್ಳದ ಮಾಲೀಕ ಜೋರಾಗಿ ಕೂಗಲು ಶುರು ಮಾಡುತ್ತಾನೆ. ಮಾಲೀಕನ ಕೂಗಾಟ ಕೇಳಿದ ಸ್ಥಳೀಯರು ಅಂಗಡಿ ಬರಲು ಶುರು ಮಾಡುತ್ತಾರೆ. ಇದನ್ನು ಗಮನಿಸಿದ ದರೋಡೆಕೋರರು ಓಡಿ ಹೋಗುವುದನ್ನು ವೈರಲ್​ ಆಗಿರುವ ವಿಡಿಯೋದಲ್ಲಿ ನೋಡಬಹುದಾಗಿದೆ.

   ಇತ್ತ ಈ ವಿಚಾರ ಹೊರಬರುತ್ತಿದ್ದಂತೆ ಕಿಡಿಕಾರಿರುವ ಜನರು ಈ ರೀತಿಯ ಅನೇಕ ಪ್ರಕರಣಗಳಾದರೂ ಪೊಲೀಸರು ಈವರೆಗೆ ಆರೋಪಿಗಳನ್ನು ಬಂಧಿಸುವ ಗೋಜಿಗೆ ಹೋಗಿಲ್ಲ. ಕೂಡಲೇ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದ್ದಾರೆ. ಇತ್ತ ವಿಚಾರ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಗಳ ಪತ್ತೆಗೆ ವಿಶೇಷ ತಂಡವನ್ನು ರಚಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ