ಹೆಚ್ಚುತ್ತಿರುವ ಬಸ್ಗಳ ಸಂಖ್ಯೆ; ಅಡ್ಡಾದಿಡ್ಡಿ ನಿಲುಗಡೆ; ಅಪಘಾತಗಳಿಗೆ ಆಹ್ವಾನ.

ವಿಜಯಪುರ;

    ಪಟ್ಟಣದಲ್ಲಿ ಬೆಂಗಳೂರಿಗೆ ಹಾಗೂ ಸುತ್ತಮುತ್ತಲ ಗ್ರಾಮಗಳ ಮೂಲಕ ಮಾರ್ಕೆಟ್, ಮೆಜೆಸ್ಟಿಕ್, ಶಿವಾಜಿನಗರ, ಹೊಸಕೋಟೆಗಳಿಗೆ ಬಿಎಂಟಿಸಿ ಬಸ್ ಸಂಪರ್ಕ ಕಲ್ಪಿಸಿದ್ದು, ಇದರಿಂದ ಒಂದೆಡೆ ಪ್ರಯಾಣಿಕರಿಗೆ ಅನುಕೂಲ ಹೆಚ್ಚುತ್ತಿದ್ದರೂ ಸಹ, ಹೆಚ್ಚುತ್ತಿರುವ ಈ ಬಸ್ಗಳಿಗೆ ಬಸ್ ನಿಲ್ದಾಣದಲ್ಲಿ ಸ್ಥಳಾವಕಾಶವಿಲ್ಲದೆ ಬಸ್ಸುಗಳು ನಿಗದಿತ ಜಾಗ ಗುರುತಿಸದ ಕಾರಣ ಎಲ್ಲೆಂದರಲ್ಲಿ ಬಸ್ ಗಳನ್ನು ನಿಲ್ಲಿಸುವುದರಿಂದ ಪಾದಚಾರಿಗಳು ಹಾಗೂ ಖಾಸಗಿ ವಾಹನಗಳಲ್ಲಿ ಓಡಾಡುವವರೆಗೂ ಸಹ ತೀವ್ರ ತೊಂದರೆ ಉಂಟಾಗುತ್ತಿದ್ದು ಹತ್ತು ಹಲವಾರು ಅಪಘಾತಗಳು ಸಂಭವಿಸಿವೆ.

    ಖಾಸಗಿ ಬಸ್ಗಳ ಲೋಡರ್ ಮೌಲಾನ ಆಜಾದ್ ಮಾತನಾಡಿ, ಒಮ್ಮೆ ಬಸ್ ನಿಲ್ದಾಣಕ್ಕೆ ಬಸ್ ಗಳು ಪ್ರವೇಶಿಸಿದರೆ ತಿರುಗಿಸಿಕೊಂಡು ವಾಪಸ್ಸು ಹೋಗಲು ಪರದಾಡಬೇಕಾಗುತ್ತದೆ. ಅದರಲ್ಲಿಯೂ ಕೆಲ ಬಿಎಂಟಿಸಿ ಬಸ್ ಗಳವರು ಹಾಗೂ ಮತ್ತಿತರೆ ಬಸ್ಗಳ ಚಾಲಕರು, ನಿರ್ವಾಹಕರು ಮಾತಿಗೆ ಮಾತು ಬೆಳೆಸುವುದು, ಜಗಳ ಕಾಯುವುದು, ಬಸ್ ನಿಲ್ದಾಣ ಯಾರದೇ ಸ್ವತ್ತಲ್ಲ ಎಂದು ವಾಗ್ವಾದ ನಡೆಸುವುದು ನಡೆಯುತ್ತಿದ್ದು, ಅವಶ್ಯಕ ಪೊಲೀಸರನ್ನು ಬಸ್ ನಿಲ್ದಾಣದಲ್ಲಿ ನೇಮಿಸುವ ಮೂಲಕ ಅವ್ಯವಸ್ಥೆಯ ಬಸ್ ನಿಲುಗಡೆಯನ್ನು ಸರಿಪಡಿಸಬೇಕೆಂದು ಒತ್ತಾಯಿಸಿರುವರು.

    ಬಸ್ ನಿಲ್ದಾಣದ ಬಳಿಯೇ ರೇಷ್ಮೆ ಗೂಡಿನ ಮಾರುಕಟ್ಟೆ, ತರಕಾರಿ ಮಾರುಕಟ್ಟೆ, ಹೂವಿನ ಮಾರುಕಟ್ಟೆ, ಬ್ಯಾಂಕುಗಳು ಇದ್ದು, ಪಟ್ಟಣದೊಳಗೆ ಪ್ರವೇಶಿಸುವವರು ಸಹ ಬಸ್ ನಿಲ್ದಾಣದ ಮೂಲಕವೇ ಪ್ರವೇಶಿಸಬೇಕಾಗಿದ್ದು, ಎಲ್ಲದಕ್ಕೂ ಸಮಸ್ಯೆಗಳು ಉಂಟಾಗುತ್ತಿವೆ. ಪುರಸಭೆಯಿಂದ ಅಂಗಡಿ ಮಳಿಗೆಗಳನ್ನು ಬಾಡಿಗೆಗೆ ತೆಗೆದುಕೊಂಡವರು ಸಹ ನಮ್ಮ ಅಂಗಡಿಗಳ ಮುಂದೆ ಬಸ್ಗಳನ್ನು ನಿಲ್ಲಿಸುವುದರಿಂದ ನಮಗೆ ವ್ಯಾಪಾರಕ್ಕೆ ತೊಂದರೆ ಉಂಟಾಗುತ್ತಿದೆ ಎಂದು ಅಲವತ್ತು ಕೊಳ್ಳುತ್ತಿದ್ದಾರೆ

   ಬಸ್ ನಿಲ್ದಾಣದಲ್ಲಿಯೂ ಯಾವುದೇ ಪ್ರಯಾಣಿಕರು ಬಸ್ಗಳಿಗಾಗಿ ಕಾಯುವಾಗ ಎಲ್ಲಿಯೂ ಕುಳಿತುಕೊಳ್ಳಲು ಸ್ಥಳಾವಕಾಶ ಇರುವುದಿಲ್ಲ.ಬಸ್ ನಿಲ್ದಾಣವು ಖಾಸಗಿ ಬಸ್ ನಿಲ್ದಾಣವಾಗಿದ್ದು, ಪುರಸಭೆಯ ಒಡೆತನಕ್ಕೆ ಒಳಪಟ್ಟಿರುತ್ತದೆ. ಇದಕ್ಕಾಗಿ ಪುರಸಭೆಯಿಂದ ಖಾಸಗಿ ಬಸ್ಸುಗಳಿಗೆ 50 ರೂಗಳಂತೆ ಸುಂಕ ಸಹ ವಸೂಲಿ ಮಾಡಲಾಗುತ್ತದೆ ಹಾಗೂ ಟೆಂಪೋ ಆಟೋಗಳಿಗೆ 30ರೂಗಳಂತೆ ಪುರಸಭೆಯಿಂದ ಸುಂಕ ವಸೂಲಿ ಮಾಡಲಾಗುತ್ತದೆ

    ಪುರಸಭೆಯಿಂದ ಸುಂಕ ವಸೂಲಿ ಮಾಡಲು ವಾರ್ಷಿಕ 3 ಲಕ್ಷ ರೂಗಳಷ್ಟು ಟೆಂಡರ್ ಕೊಟ್ಟು ಗುತ್ತಿಗೆ ಪಡೆದಿರುವ ಪ್ರದೀಪ್ ರವರು ಮಾತನಾಡಿ, ಬಸ್ ನಿಲ್ದಾಣದಲ್ಲಿ ಖಾಸಗಿ ಬಸ್ ಗಳು ಹಾಗೂ ಟೆಂಪೋ ಆಟೋಗಳ ಬಳಿ ಸುಂಕ ವಸೂಲಿ ಮಾಡಲು ಹೋದಾಗ ಪುರಸಭೆಯಿಂದ ನಮಗೆ ಏನು ಸವಲತ್ತು ನೀಡಿರುವಿರಿ, ಕನಿಷ್ಠ ವಾಹನ 10 ನಿಮಿಷಗಳ ಕಾಲ ನಿಲ್ಲಿಸಲು ಸಹ ಅವಕಾಶವಿಲ್ಲದಿದ್ದು, ಸುಂಕ ಏಕೆ ವಸೂಲಿ ಮಾಡುತ್ತೀರೆಂದು ನಮ್ಮನ್ನೇ ಪ್ರಶ್ನಿಸುತ್ತಾರೆ.

   ಈಗಾಗಲೇ ಪುರಸಭೆಗೆ ಹತ್ತು- ಹಲವು ಬಾರಿ ಖಾಸಗಿ ಬಸ್ಸುಗಳು ಹಾಗೂ ಸರ್ಕಾರಿ ಬಸ್ಸುಗಳು ನಿಲುಗಡೆ ಮಾಡಲು ವ್ಯವಸ್ಥಿತವಾದ ಜಾಗ ಗುರ್ತಿಸಬೇಕೆಂದು ತಿಳಿಸಲಾಗಿದ್ದರು ಪುರಸಭೆಯವರು ಇದಕ್ಕೆ ಹೆಚ್ಚಿನ ಮಹತ್ವ ನೀಡುತ್ತಿಲ್ಲವೆಂದು ತಿಳಿಸಿದರು

   ಹೆಸರು ಹೇಳಲಿಚ್ಚಿಸದ ಖಾಸಗಿ ವಾಹನ ಮಾಲೀಕರು ಮಾತನಾಡಿ, ಕರೋನ ಬಂದ ನಂತರ ಖಾಸಗಿ ವಾಹನ ನಡೆಸುವುದೇ ದುಸ್ತರವಾಗಿದ್ದು ಒಂದೆಡೆ ಪ್ರಯಾಣಿಕರಿಲ್ಲದೆ ಪರದಾಡುವಂತೆ ಆಗಿದ್ದು, ಮತ್ತೊಂದೆಡೆ ಸರ್ಕಾರ ಹೇರಿರುವ ದುಬಾರಿ ಟ್ಯಾಕ್ಸ್ ಕಟ್ಟುವುದಕ್ಕೆ ಸಾಧ್ಯವಾಗುತ್ತಿಲ್ಲ. ಮಗದೊಂದೆಡೆ ಪ್ರತಿ ಬಾರಿ ಟೋಲ್ ಪ್ರವೇಶಿಸಲು ಸುಂಕ ತರಬೇಕಾಗುತ್ತದೆ ಎಷ್ಟೋ ಬಾರಿ ಟೋಲ್‌ನ ಸುಂಕ 300 ರೂ ಕಲೆಕ್ಷನ್ ಸಹ ಆಗಿರುವುದಿಲ್ಲ. ಪ್ರತಿ ಬಸ್ಸು ನಿಂದಲೂ ಕನಿಷ್ಠ 10 ಕುಟುಂಬಗಳು ಜೀವನ ನಡೆಸುತ್ತಿದ್ದು, ಹೂವನ್ನು ನೀಡುವವರು, ಲೋಡರ್, ಡ್ರೈವರ್, ಕ್ಲೀನರ್, ಓನರ್ ಮುಂತಾಗಿ ಎಲ್ಲರ ಕುಟುಂಬಗಳು ಇಂತಹ ಪರಿಸ್ಥಿತಿಯಲ್ಲಿ ಬೀದಿಗೆ ಬೀಳುವಂತಾಗಿದೆ.

    ಇದೀಗ ಬಿಎಂಟಿಸಿ ಬಸ್ ಗಳು ಹೆಚ್ಚಿನ ಸಂಖ್ಯೆಯಲ್ಲಿ ಓಡಾಡುತ್ತಿರುವುದರಿಂದ ಯಾರಿಗೂ ಸರಿಯಾಗಿ ಕಲಕ್ಷನ್ ಆಗುತ್ತಿಲ್ಲ. ಹತ್ತಾರು ಖಾಸಗಿ ಬಸ್ಸುಗಳು ಕೊರೋನಾ ಸಂದರ್ಭದಲ್ಲಿ ನಿಲುಗಡೆಯಾಗಿರುವುದು ಈಗಲೂ ಸಹ ಚಾಲನೆಗೆ ಬಾರದಂತಾಗಿದೆ ಎಂದು ಅಳಲನ್ನು ತೋಡಿಕೊಂಡರು.

    ಈ ಕೂಡಲೇ ಪುರಸಭೆಯವರು ಸರ್ಕಾರಿ ಬಸ್ಸು, ಖಾಸಗಿ ಬಸ್ಸು, ಹಾಗೂ ಬಿಎಂಟಿಸಿ ಬಸ್ಸುಗಳು ನಿಲುಗಡಿಗೆ ವ್ಯವಸ್ಥಿತ ನಿಲ್ದಾಣ ರೂಪಿಸುವುದರೊಂದಿಗೆ ಸಾರ್ವಜನಿಕರು ಬಸ್ಗಾಗಿ ಕಾಯುವ ಸಮಯದಲ್ಲಿ ಕುಳಿತುಕೊಳ್ಳಲು ಸಾರ್ವಜನಿಕರಿಗೆ ಆಸನ, ವ್ಯವಸ್ಥೆ ಕಲ್ಪಿಸಬೇಕಾಗಿದ್ದು ಪೊಲೀಸ್ ಇಲಾಖೆ ಯಾವುದೇ ಅಪಘಾತಗಳಾಗದಂತೆ ಹಾಗೂ ಸಂಚಾರ ನಿಯಮ ಉಲ್ಲಂಘಿಸುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ನೋಡಿಕೊಳ್ಳಬೇಕಾಗಿದ್ದು, ಶೀಘ್ರವೇ ಇತ್ತ ಎಲ್ಲರೂ ಚಿತ್ತಹರಿಸಬೇಕಾಗಿದೆ.

    ಈಗಾಗಲೇ ಖಾಸಗಿ ಬಸ್ ಮಾಲೀಕರ ಸಂಘದಿAದ ಸುಂಕ ವಸೂಲಾತಿ ಮಾಡುವ ಗುತ್ತಿಗೆ ಪಡೆದಿರುವವರಿಗೆ ಹಾಗೂ ಪುರಸಭೆಗೆ ಬಿಎಂಟಿಸಿ ಹಾಗೂ ಕೆಎಸ್‌ಆರ್‌ಟಿಸಿ ಬಸ್ಸುಗಳಿಂದ ಆಗುತ್ತಿರುವ ತೊಂದರೆಯ ಬಗ್ಗೆ ಮನವಿ ಪತ್ರವನ್ನು ಸಲ್ಲಿಸಿದ್ದು, ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಎಲ್ಲಾ ಬಸ್ಸುಗಳ ಅವಶ್ಯಕತೆ ಇದ್ದು ಆದರೆ ಒಂದೇ ಬಾರಿಗೆ ಬಸ್ ನಿಲ್ದಾಣದಲ್ಲಿ 8-10 ಬಸ್ಸುಗಳು ನಿಲ್ಲುವುದರಿಂದ ಬೇರೆ ವಾಹನಗಳು ಓಡಾಡಲು ತೊಂದರೆಯಾಗುತ್ತಿದ್ದು,

   ಯಾವುದೇ ಬಿಎಂಟಿಸಿ ಬಸ್ಸುಗಳು ನಿಲ್ದಾಣದಿಂದ ಹೋಗಬೇಕಾದ ನಿಗದಿತ ಸಮಯಕ್ಕೆ ಐದು ನಿಮಿಷಗಳ ಮುನ್ನ ನಿಲ್ದಾಣದಲ್ಲಿ ಬಸ್ ಹಾಕುವಂತಾಗಬೇಕು. ಇದೇ ನಿಯಮ ಬೆ1ಂಗಳೂರಿನ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿಯೂ ಪಾಲಿಸುತ್ತಿದ್ದು, ಯಾವುದೇ ಬಸ್ಸುಗಳು ಬಸ್ ನಿಲ್ದಾಣದಲ್ಲಿ ಐದು ನಿಮಿಷಕ್ಕಿಂತ ಹೆಚ್ಚುವರಿ ನಿಲುಗಡೆಯಾಗುವುದಿಲ್ಲ. ಅದೇ ನೀತಿಯನ್ನು ಇಲ್ಲಿ ಜಾರಿಗೊಳಿಸಿದರೆ ಇತರೆ ಎಲ್ಲಾ ವಾಹನಗಳವರೆಗೂ ಅನುಕೂಲವಾಗುತ್ತದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap