ಅವರವರ ಭಕ್ತಿಗೆ ತಕ್ಕಂತೆ ಸಾಗುತಿದೆ ಮಹಾಕುಂಭ ಮೇಳ : ಸಿ ಟಿ ರವಿ

ಬೆಂಗಳೂರು:

   ಅವರವರ ಭಕುತಿಗೆ ತಕ್ಕಂತೆ ಸಾಗುತಿದೆ ಮಹಾಕುಂಭ ಮೇಳ ಎಂದು ಬಿಜೆಪಿಯ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಹೇಳಿದ್ದಾರೆ.
ನಿನ್ನೆ ಉತ್ತರ ಪ್ರದೇಶ ವಿಧಾನಸಭೆಯಲ್ಲಿ ವಿಪಕ್ಷಗಳನ್ನು ಉದ್ದೇಶಿಸಿ ಮಾತನಾಡಿದ್ದ ಯೋಗಿ ಆದಿತ್ಯನಾಥ್‌ ಅವರ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಪೋಸ್ಟ್‌ ಮಾಡಿ ಯದ್ಭಾವಂ ತದ್ಭವತಿ ಎನ್ನುವ ಉಕ್ತಿಯಂತೆ ಕುಂಭಮೇಳದಲ್ಲಿ ಯಾರ್ಯಾರಿಗೆ ಏನೇನೆಲ್ಲಾ ಕಂಡಿತು, ದೊರಕಿತು ಎಂಬ ಪ್ರಶ್ನೆಗೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರು ಉತ್ತರ ನೀಡಿದ್ದಾರೆ… ರಣಹದ್ದುಗಳಿಗೆ ಶವಗಳೇ ಕಂಡವು, ಹಂದಿಗಳಿಗೆ ಬರೀ ಹೊಲಸು ಕಾಣಿಸಿತು, ಆಸ್ತಿಕರು ಆಶೀರ್ವಾದ ಪಡೆದರು, ಭಕ್ತರಿಗೆ ದೇವ ದರ್ಶನವಾಯಿತು, ವರ್ತಕರಿಗೆ ವ್ಯಾಪಾರ ದೊರೆಯಿತು, ಬಡವರಗೆ ಬಾಳು ದೊರೆಯಿತು, ದಯಾಳುಗಳಿಗೆ ಕರುಣೆ ಪ್ರಾಪ್ತವಾಯಿತು, ಕೋಟ್ಯಾಂತರ ಭಕ್ತರಿಗೆ ಸ್ವಚ್ಛತೆ, ಸುವ್ಯವಸ್ಥೆ ಕಾಣಿಸಿತು. ಹೀಗೆ ಅವರವರ ಭಾವಕ್ಕೆ, ಅವರವರ ಭಕುತಿಗೆ ತಕ್ಕಂತೆ ಸಾಗುತಿದೆ ಮಹಾಕುಂಭ ಮೇಳ ಎಂದಿದ್ದಾರೆ

Recent Articles

spot_img

Related Stories

Share via
Copy link