ಬೆಂಗಳೂರು:
ನಾವೆಲ್ಲ ಅಂತರ್ಜಾಲ ತಾಣಗಳಲ್ಲಿ ನೋಡಿದ್ದೇವೆ ಬೆಸಿಲಿನ ತಾಪಕ್ಕೆ ಕೆಲವೊಂದು ಕಾರುಗಳ ಭಾಗಗಳು ಕರಗಿರುವುದನ್ನು ಆದರೆ ನಮ್ಮ ಬೆಂಗಳೂರಿನ ವೈಟ್ ಫೀಲ್ಡ್ ನಲ್ಲಿ ಬೇಸಿಗೆ ಶುರುವಾಗುತ್ತಿದ್ದಂತೇ ಶಾಖ ಜೋರಾಗಿ ದೇಶದ ಅತ್ಯುತ್ತಮ ಎಸ್‌ಯುವಿಗಳಲ್ಲಿ ಒಂದು ಎಂದು ಪರಿಗಣಿಸಲಾದ ಟಾಟಾ ಹ್ಯಾರಿಯರ್ ಕಾರಿನ ಮುಂಭಾಗದ ಬಂಪರ್ ಭಾರೀ ಶಾಖದಿಂದಾಗಿ ಕರಗಲು ಪ್ರಾರಂಭಿಸಿದೆ. 
ಸೌರವ್ ನಹತಾ ಎಂಬ ಹೆಸರಿನ ಕಾರು ಮಾಲೀಕರು ತಮ್ಮ ಟ್ವೀಟ್‌ನಲ್ಲಿ, ʻತನ್ನ ಎಸ್‌ಯುವಿಯನ್ನು ತಮ್ಮ ಕಚೇರಿಯ ಹೊರಗೆ ನಿಲ್ಲಿಸಿದ್ದೆ. ನಂತರ ಕಾರಿನ ಬಳಿ ಬಂದಾಗ ಸೂರ್ಯನ ಬೆಳಕಿನಿಂದ ಹ್ಯಾರಿಯರ್‌ನ ಮುಂಭಾಗದ ಬಂಪರ್ ಕರಗಿದ್ದನ್ನು ಕಂಡು ಗಾಬರಿಗೊಂಡು ನಂತರ ಅದನ್ನು ಟ್ವಿಟ್ಟರ್ನಲ್ಲಿ ಹಂಚಿಕೊಂಡಿದ್ದಾರೆ.ಅವರು ತಮ್ಮ ಕಾರಿನ ಮುಂಭಾಗದ ಗ್ರಿಲ್ ಮತ್ತು ಬಂಪರ್ ಕರಗಿರುವುದನ್ನು ಹಂಚಿಕೊಂಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








