ಬಿಬಿಕೆ11: ವಿಚಿತ್ರ ರೀತಿ ವರ್ತನೆ ಮಾಡಿದ ಚೈತ್ರ ಕುಂದಾಪುರ್…!

ಬೆಂಗಳೂರು :

   ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ  ಚೈತ್ರಾ ಕುಂದಾಪುರ ದಿನ ಕಳೆದಂತೆ ಸಖತ್ ಹೈಲೈಟ್ ಆಗುತ್ತಿದ್ದಾರೆ. ಪ್ರತಿ ದಿನ ಒಂದಲ್ಲ ಒಂದು ವಿಚಾರಕ್ಕೆ ಇವರು ಸುದ್ದಿಯಲ್ಲಿ ಇರುತ್ತಾರೆ. ಕೆಲ ಸ್ಪರ್ಧಿಗಳ ಜೊತೆ ಮಾತ್ರ ಉತ್ತಮ ಬಾಂಧವ್ಯ ಹೊಂದಿದ್ದಾರೆ. ತನ್ನ ನೇರ ಮಾತು ಮತ್ತು ವಾದಗಳಿಂದಲೇ ಫೇಮಸ್ ಆಗುತ್ತಿದ್ದಾರೆ. ಎದುರಾಳಿ ಇವರ ಜೊತೆ ಮಾತನಾಡಲೂ ಹೆದರುವಂತಾಗಿದೆ. ಇವುಗಳ ಮಧ್ಯೆ ಬಿಗ್ ಬಾಸ್ ಮನೆಯಲ್ಲಿ ಚೈತ್ರಾ ಕುಂದಾಪುರ ಅವರ ವರ್ತನೆ ಕಂಡು ಕೆಲ ಸ್ಪರ್ಧಿಗಳು ಮತ್ತು ವೀಕ್ಷಕರು ಶಾಕ್ ಆಗಿದ್ದಾರೆ.

   ಬಿಗ್ ಬಾಸ್ ಮನೆಯಲ್ಲಿ ಬೆಳಗ್ಗೆ ಹೆಚ್ಚಾಗಿ ಧ್ಯಾನ ಮಾಡುತ್ತಿದ್ದ ಚೈತ್ರಾ ಇದೀಗ ದೇವಿಯ ಪಕ್ಕದಲ್ಲಿ ನಿಂತು, ಕನ್ನಡಿ ನೋಡಿಕೊಂಡು, ಗಂಟೆ ಬಾರಿಸುತ್ತಾ, ತಮಗೆ ತಾವೇ ಊದುಬತ್ತಿ ಬೆಳಗಿಕೊಂಡು ಪೂಜೆ ಮಾಡಿಕೊಂಡಿದ್ದಾರೆ. ಮೊದಲು ಮನೆಯಲ್ಲಿರುವ ದೇವಿ ವಿಗ್ರಹಕ್ಕೆ ಪೂಜೆ ಸಲ್ಲಿಸಿದ ಚೈತ್ರಾ ನಂತರ ಅಲ್ಲೇ ಪಕ್ಕದಲ್ಲಿದ್ದ ಕನ್ನಡಿಯ ಬಳಿ ಬಂದು ತನಗೆ ತಾನೇ ಆರತಿ ಮಾಡಿಕೊಂಡಿದ್ದಾರೆ. ಇದನ್ನ ಕಂಡ ಶಿಶಿರ್‌ ಶಾಸ್ತ್ರಿ ಅಕ್ಷರಶಃ ನಿಬ್ಬೆರಗಾಗಿದ್ದಾರೆ.

   ಚೈತ್ರಾ ಕುಂದಾಪುರ ಮಾಡಿದ ಈ ವಿಚಿತ್ರ ಪೂಜೆ ಬಿಗ್‌ ಬಾಸ್ ಅಭಿಮಾನಿಗಳನ್ನು ಅಚ್ಚರಿ ಮೂಡಿಸಿದೆ. ಜನರು ಈ ಬಗ್ಗೆ ನಾನಾ ಬಗೆಯ ಕಾಮೆಂಟ್ ಮಾಡುತ್ತಿದ್ದಾರೆ. ಚೈತ್ರಾ ದೈವ ಭಕ್ತೆ. ಅದರಲ್ಲೂ ದೇವಿ ಮೇಲೆ ಇವರಿಗೆ ಅತೀವ ನಂಬಿಕೆ ಇದೆ. ಇದನ್ನು ಅನೇಕ ಬಾರಿ ಮನೆಯೊಳಗೆ ಅವರೇ ಹೇಳಿಕೊಂಡಿದ್ದರು. ಆದರೆ, ಇದೀಗ ತನಗೆ ತಾನೇ ಪೂಜೆ ಮಾಡಿಕೊಂಡಿದ್ದು ಯಾಕೆ ಎಂಬುದು ಯಕ್ಷ ಪ್ರಶ್ನೆಯಾಗಿದೆ.

   ಚೈತ್ರಾ ಅವರು ಈ ರೀತಿ ಪೂಜೆ ಮಾಡಿದ್ದು ಇದೇ ಮೊದಲ ಅಥವಾ ವೀಕ್ಷಕರಿಗೆ ಬಿಗ್ ಬಾಸ್ ತೋರಿಸಿದ್ದು ಮೊದಲ ಎಂಬುದು ತಿಳಿದಿಲ್ಲ. ಇವರ ಈ ವಿಚಿತ್ರ ವರ್ತನೆ ಗಮನ ಸೆಳೆದಿದ್ದಂತೂ ನಿಜ. ಈ ರೀತಿ ಮಾಡುವುದರ ಹಿಂದೆ ಏನಾದರೂ ಒಳ್ಳೆಯ ಉದ್ದೇಶ ಇದೆಯೇ ಎಂಬುದನ್ನು ಚೈತ್ರಾ ಅವರೇ ಹೇಳಬೇಕಿದೆ. ವೀಕೆಂಡ್​ನಲ್ಲಿ ಕಿಚ್ಚ ಸುದೀಪ್ ಈ ವಿಚಾರವಾಗಿ ಮಾತನಾಡುವ ಸಾಧ್ಯತೆ ಇದೆ.

Recent Articles

spot_img

Related Stories

Share via
Copy link