ಚಾಮರಾಜನಗರ : ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್‌ ಸಿಗದೇ 20ಕ್ಕೂ ಅಧಿಕ ಮಂದಿ ಸಾವು!!

ಚಾಮರಾಜನಗರ :

     ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಅಕ್ಸಿಜನ್‌ ಸಿಗದೇ 20ಕ್ಕೂ ಅಧಿಕ ಮಂದಿ ಕರೊನ ಸೋಂಕಿತರು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.

      ಈ ಘಟನೆಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ಸಿಎಂ ಯಡಿಯೂರಪ್ಪ, ಅಲ್ಲಿನ ವಾಸ್ತವ ಏನೆಂದು ವರದಿ ಸಲ್ಲಿಸುವಂತೆ ಆರೋಗ್ಯ ಮತ್ತು ವೈದ್ಯಕೀಯ ಸಚಿವ ಡಾ.ಕೆ. ಸುಧಾಕರ್​ಗೆ ಸೂಚಿಸಿದ್ದಾರೆ. ಸಿಎಂ ಸೂಚನೆ ಮೇರೆಗೆ ಚಾಮರಾಜನಗರ, ಮೈಸೂರು ಮತ್ತು ಮಂಡ್ಯದತ್ತ ಸುಧಾಕರ್​ ಪ್ರಯಾಣ ಬೆಳೆಸಿದ್ದಾರೆ.

      ಕರೊನ ಸೋಂಕಿತರಿಗಾಗಿ ಚಿಕಿತ್ಸೆ ನೀಡಲಾಗುತ್ತಿದ್ದ ಕೊಠಡಿಗೆ ತಲುಪುತ್ತಿದ್ದ ಅಕ್ಸಿಜನ್‌ ಏಕಾಏಕಿ ಸ್ಥಗಿತಗೊಂಡು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಮೈಸೂರಿನಿಂದ ಚಾಮರಾಜನಗರ 50 ಸಿಲಿಂಡರ್ ಆಕ್ಸಿಜನ್ ಬರಬೇಕಿತ್ತು. ಆದರೆ ಮಧ್ಯರಾತ್ರಿ 2 ಗಂಟೆಯಾದರೂ ಪೂರೈಕೆಯಾಗದ ಕಾರಣ ಈ ದುರಂತ ಸಂಭವಿಸಿದೆ ಎಂದು ಚಾ.ನಗರ ಜಿಲ್ಲಾಧಿಕಾರಿ ಎಂಆರ್ ವಿ ರವಿ ಹೇಳಿದ್ದಾರೆ.

      ಸದ್ಯ ಘಟನ ಸ್ಥಳಕ್ಕೆ ಜಿಲ್ಲಾಧಿಕಾರಿ ಎಂಆರ್ ವಿ ರವಿ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ಮೈಸೂರಿನಿಂದ ಚಾಮರಾಜನಗರ 50 ಸಿಲಿಂಡರ್ ಆಕ್ಸಿಜನ್ ಬರಬೇಕಿತ್ತು. ಆದರೆ ಮಧ್ಯರಾತ್ರಿ 2 ಗಂಟೆಯಾದರೂ ಪೂರೈಕೆಯಾಗದ ಕಾರಣ ಈ ದುರಂತ ಸಂಭವಿಸಿದೆ ಎಂದು ಹೇಳಿದ್ದಾರೆ.

     ತನಿಖೆ ಬಳಿಕ ಮಾತ್ರ ಈ ಬಗ್ಗೆ ಸತ್ಯ ತಿಳಿದುಬರಲಿದೆ. ಈ ನಡುವೆ ಆಸ್ಪತ್ರೆ ಮುಂದೆ ನೂರಾರು ಮಂದೆ ನೆರೆದಿದ್ದು, ಪರಿಸ್ಥಿತಿಯನ್ನು ನಿಭಾಯಿಸಲು ಪೊಲೀಸರು ಸ್ಥಳದಲ್ಲಿ ಬೀಡು ಬಿಟ್ಟಿದ್ದಾರೆ. 

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap