ಚಾರ್‌ ಧಾಮ್‌ ಯಾತ್ರೆ : ಹೃದಯಾಘಾತಕ್ಕೆ 4 ಬಲಿ ….!

ಉತ್ತರಾಖಂಡ

    ಕೇದಾರನಾಥ ದೇವಾಲಯದ ಬಾಗಿಲು ತೆರೆಯುವುದರೊಂದಿಗೆ ಚಾರ್‌ಧಾಮ್ ಯಾತ್ರೆ ಆರಂಭವಾಗಿದೆ. ಚಾರ್‌ಧಾಮ್‌ಗೆ ಭೇಟಿ ನೀಡಲು ಪ್ರತಿದಿನ ಸಾವಿರಾರು ಜನರು ಉತ್ತರಖಂಡಕ್ಕೆ ತೆರಳುತ್ತಿದ್ದಾರೆ. ಯಮುನೋತ್ರಿ ಧಾಮದ ಬಾಗಿಲು ತೆರೆದು ಕೇವಲ ಎರಡು ದಿನಗಳು ಕಳೆದಿವೆ. ಅದಾಗಲೆ ಇಲ್ಲಿಯವರೆಗೆ ಇಲ್ಲಿಗೆ ಭೇಟಿ ನೀಡಲು ಬಂದ ಭಕ್ತರ ಪೈಕಿ 4 ಭಕ್ತರು ಹೃದಯ ಸಂಬಂಧಿ ಸಮಸ್ಯೆಗಳಿಂದ ಸಾವನ್ನಪ್ಪಿದ್ದಾರೆ.

    ಮೇ 10 ರಂದು ಕೇದಾರನಾಥ, ಯಮುನೋತ್ರಿ ಮತ್ತು ಗಂಗೋತ್ರಿ ಧಾಮದ ಬಾಗಿಲು ತೆರೆಯಲಾಯಿತು. ಮೇ 10 ರಂದು ಯಮುನೋತ್ರಿ ಧಾಮದ ವಿವಿಧ ಸ್ಥಳಗಳಲ್ಲಿ ಇಬ್ಬರು ಭಕ್ತರು ಹೃದಯಾಘಾತದಿಂದ ಸಾವನ್ನಪ್ಪಿದ್ದರು. ಯಾತ್ರೆಯ ಎರಡನೇ ದಿನವಾದ ಮೇ 11 ಶನಿವಾರದಂದು ಯಮುನೋತ್ರಿ ಧಾಮದಲ್ಲಿ ಮತ್ತೊಬ್ಬ ಭಕ್ತ ಸಾವನ್ನಪ್ಪಿದ್ದಾನೆ. ಓರ್ವ ಮಹಿಳಾ ಯಾತ್ರಿ ಕೂಡ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

   ಹೀಗಾಗಿ ಚಾರ್‌ಧಾಮ್‌ ಯಾತ್ರೆಗೆ ಆಗಮಿಸುವ ಹೃದಯ ಸಂಬಂಧಿ ಸಮಸ್ಯೆಗಳು ಇರುವ ಭಕ್ತರಿಗೆ ಆರೋಗ್ಯದ ಬಗ್ಗೆ ಕಾಳಜಿ ವಹಿಸಲು ಸೂಕ್ತ ಮಾರ್ಗದರ್ಶನಗಳನ್ನು ನೀಡಲಾಗಿದೆ. ಚಾರ್ ಧಾಮ್ ಯಾತ್ರೆಗೆ ತೆರಳುವ ಜನರು ತಮ್ಮ ಆರೋಗ್ಯದ ಬಗ್ಗೆ ಹೇಗೆ ಕಾಳಜಿ ವಹಿಸಬೇಕು.

   ವಿಶೇಷವಾಗಿ ವಯಸ್ಸಾದವರು ಕೆಲವು ಪ್ರಮುಖ ವಿಷಯಗಳ ಬಗ್ಗೆ ವಿಶೇಷ ಕಾಳಜಿ ವಹಿಸಬೇಕಾಗುತ್ತದೆ. ವೈದ್ಯರು ನೀಡಿದ ಕೆಲವು ಸಲಹೆಗಳನ್ನು ನೀವು ಅಳವಡಿಸಿಕೊಂಡು ಯಾತ್ರೆ ಮಾಡಬೇಕು ಎಂದು ಹೃದ್ರೋಗ ತಜ್ಞ ಡಾ.ವಿಕಾಸ್ ಠಾಕ್ರನ್ ಅವರು ಹೇಳಿದರು. ನೀವು ಚಾರ್ಧಾಮ್ ಯಾತ್ರೆಗೆ ಹೋಗುತ್ತಿದ್ದರೆ, ನಿಮ್ಮ ಹೃದಯದ ಆರೋಗ್ಯವನ್ನು ಯಾವ ರೀತಿ ಕಾಳಜಿ ತೆಗೆದುಕೊಳ್ಳಬೇಕು ಎಂದು ವೈದ್ಯರು ಸಲಹೆ ನೀಡಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap