ಸಹಕಾರ ಖಾತೆ ಸಿಕ್ಕಿದ್ದು ಖುಷಿ ತಂದಿದೆ :ಎಸ್ ಟಿ ಸೋಮಶೇಖರ್

ಬೆಂಗಳೂರು

   ತಮಗೆ ಸಂಪುಟದಲ್ಲಿ ಸಹಕಾರ ಖಾತೆ ಸಿಕ್ಕಿದ್ದು ಸಂತೋಷ ತಂದಿದ್ದು, ಮೊದಲ ಬಾರಿಗೆ ಸಹಕಾರ ವಲಯದ ಸಚಿವನಾಗುವ ಅವಕಾಶ ಸಿಕ್ಕಿದೆ ಎಂದು ನೂತನ ಸಚಿವ ಎಸ್.ಟಿ.ಸೋಮಶೇಖರ್ ಹರ್ಷ ವ್ಯಕ್ತಪಡಿಸಿದ್ದಾರೆ.

    ವಿಧಾನಸೌಧದಲ್ಲಿ ಖಾತೆ ಹಂಚಿಕೆ ವಿಚಾರವಾಗಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ಸಚಿವನಾಗಲು ಸಹಕರಿಸಿದ ಕ್ಷೇತ್ರದ ಜನತೆ ಮತ್ತು ಸಹಕಾರಿ ವಲಯದ ಪರವಾಗಿ ಮುಖ್ಯಮಂತ್ರಿ ಯಡಿಯೂರಪ್ಪಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.ತಾವು ಇಂತಹದ್ದೇ ಖಾತೆ ಬೇಕು ಎಂದು ಬೇಡಿಕೆ ಇಟ್ಟಿರಲಿಲ್ಲ. ಖಾತೆ ಹಂಚುವ ಮುನ್ನ ತಮಗೆ ಬೆಂಗಳೂರು ನಗರಾಭಿವೃದ್ಧಿ ಇಲಾಖೆ ಬೇಕೇ ಎಂದು ಕೇಳಿದ್ದಿದ್ದರೆ ಆಗ ಬೇಡಿಕೆ ಇಡಬಹುದಿತ್ತು. ಆದರೆ ಯಡಿಯೂರಪ್ಪ ತಮ್ಮನ್ನು ಕೇಳಲಿಲ್ಲ, ಹಾಗೆಯೇ ತಾವು ಇಂತಹದ್ದೇ ಕೊಡಿ ಎನ್ನಲಿಲ್ಲ. ಯಾವುದೇ ಖಾತೆ ನೀಡಿದರೂ ನಿಭಾಯಿಸುತ್ತೇನೆ ಎಂದಿದ್ದೆ ಅಷ್ಟೆ ಎಂದು ಮಾರ್ಮಿಕವಾಗಿ ಹೇಳಿದರು.

   ಸಹಕಾರ ವಲಯದಲ್ಲಿ ತಮಗೆ ಅನುಭವವಿದೆ. ಈಗ ಸಹಕಾರ ಖಾತೆ ನೀಡಿದ್ದು, ಅದನ್ನು ಸಮರ್ಥವಾಗಿ ನಿಭಾಯಿಸುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಸಚಿವ ಭೈರತಿ ಬಸವರಾಜು ಮಾತನಾಡಿ, ತಮಗೆ ಮಂತ್ರಿಮಂಡಲದಲ್ಲಿ ನಗರಾಭಿವೃದ್ಧಿ ಇಲಾಖೆ ಕೊಟ್ಟಿದ್ದಾರೆ. ಇದು ದೊಡ್ಡ ಖಾತೆ, ಪ್ರಾಮಾಣಿಕವಾಗಿ, ಸಮರ್ಥವಾಗಿ ಮುನ್ನಡೆಸಿಕೊಂಡು ಹೋಗುತ್ತೇನೆ ಎಂದರು.

    ತಮಗೆ ಇದೇ ಖಾತೆ ಬೇಕು ಎಂದು ಒತ್ತಡ ಹಾಕಿರಲಿಲ್ಲ. ಕೆಲವೊಂದು ಕಾರಣಗಳಿಗೆ ಖಾತೆ ಹಂಚಿಕೆ ವಿಳಂಬವಾಯಿತಷ್ಟೆ. ಒಂದು ಮನೆ ಎಂದ ಮೇಲೆ ಸಣ್ಣಪುಟ್ಟ ಸಮಸ್ಯೆಗಳೆಲ್ಲಾ ಇರುತ್ತವೆ ಎಂದು ಪಕ್ಷದೊಳಗಿನ ಖಾತೆ ಹಂಚಿಕೆಯಿಂದಾಗಿರುವ ಅಸಮಾಧಾನಕ್ಕೆ ಸಮಜಾಯಿಷಿ ನೀಡಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap