ನವದೆಹಲಿ:
ಉತ್ತರಖಂಡದ ಚಾರ್‌ಧಾಮ್ ಯಾತ್ರೆಗೆ ನೋಂದಣಿ ಪ್ರಕ್ರಿಯೆ ಆರಂಭಗೊಂಡಿದೆ. ಈ ನಡುವೆ ಬಸ್, ರೈಲು ಹಾಗೂ ವಿಮಾನಗಳು ಪ್ರವಾಸದ ಪ್ಯಾಕೇಜ್‌ಗಳನ್ನು ಬಿಡುಗಡೆ ಮಾಡಲು ಆರಂಭಿಸಿವೆ.
ಭಾರತೀಯ ರೈಲ್ವೆ ಕ್ಯಾಟರಿಂಗ್ ಮತ್ತು ಟೂರಿಸಂ ಕಾರ್ಪೋರೇಷನ್ ಲಿಮಿಟೆಡ್ (IRCTC) ಚಾಮ್‌ಧಾಮ್‌ಗೆ 12 ದಿನಗಳ ಪ್ರವಾಸ ಪ್ಯಾಕೇಜ್ ಅನ್ನು ಬಿಡುಗಡೆಗೊಳಿಸಿದೆ. ಇದು ಮೇ 25 ರಿಂದ ಪ್ರಾರಂಭವಾಗಲಿದೆ. ಚಾರ್‌ಧಾಮ್ ಯಾತ್ರೆಗೆ ತೆರಳುವ ಆಸಕ್ತರಿಗಾಗಿ ಈ ಪ್ಯಾಕೇಜ್ನ ಸಂಪೂರ್ಣ ಮಾಹಿತಿ ಇಲ್ಲಿದೆ.
IRCTC ಪ್ರವಾಸಿಗರಿಗೆ ಚಾರ್ ಧಾಮ್ ಯಾತ್ರಾ ಟೂರ್ ಪ್ಯಾಕೇಜ್ ಅನ್ನು ಪರಿಚಯಿಸಿದೆ. ಈ ಪ್ರವಾಸ ಪ್ಯಾಕೇಜ್ ಭೋಪಾಲ್‌ನಿಂದ ಪ್ರಾರಂಭವಾಗುತ್ತದೆ. ಈ ವರ್ಷ ಚಾಚ್‌ಧಾಮ್ ಯಾತ್ರೆಯು ಮೇ 10ರಿಂದ ಪ್ರಾರಂಭವಾಗುತ್ತಿದೆ. ಈ ಪ್ರವಾಸ ಪ್ಯಾಕೇಜ್ ಮೂಲಕ, ಭಕ್ತರು ಚಾರ್‌ಧಾಮ್‌ಗೆ ಭೇಟಿ ನೀಡಬಹುದು.
ಹರಿದ್ವಾರದ ಮೂಲಕ ತಮ್ಮ ಮನೆಗೆ ಹಿಂದಿರುಗುತ್ತಾರೆ. ಐಆರ್‌ಸಿಟಿಸಿ ‘ನಮ್ಮ ದೇಶ ನೋಡಿ’ ಅಡಿಯಲ್ಲಿ ಈ ಪ್ರವಾಸ ಪ್ಯಾಕೇಜ್ ಅನ್ನು ಪರಿಚಯಿಸಿದೆ. ಚಾರ್‌ಧಾಮ್ ಯಾತ್ರೆಗೆ ಭೇಟಿ ನೀಡುವುದರಿಂದ ಮೋಕ್ಷ ಸಿಗುತ್ತದೆ ಜೊತೆಗೆ ಪಾಪಗಳು ನಾಶವಾಗುತ್ತವೆ ಎಂದು ನಂಬಲಾಗುತ್ತದೆ
ಚಾರ್‌ಧಾಮ್ ಅಂದರೆ ಪ್ರಸಿದ್ಧ ಗಂಗೋತ್ರಿ, ಯಮುನೋತ್ರಿ, ಹರಿದ್ವಾರ ಮತ್ತು ಬದರಿನಾಥ ಯಾತ್ರಾಸ್ಥಳಗಳಾಗಿವೆ. ಈ ನಾಲ್ಕು ಧಾಮಗಳು ಉತ್ತರಾಖಂಡದಲ್ಲಿವೆ. IRCTC ಯ ಈ ಪ್ರವಾಸದ ಪ್ಯಾಕೇಜ್ ಕುರಿತು ವಿವರವಾದ ಮಾಹಿತಿಯನ್ನು ಈಗ ತಿಳಿಯೋಣ.
IRCTC ಯ ಚಾರ್ಧಾಮ್ ಯಾತ್ರಾ ಪ್ರವಾಸದ ಪ್ಯಾಕೇಜ್ 12 ದಿನಗಳವರೆಗೆ ಇರುತ್ತದೆ. ಹರಿದ್ವಾರ, ಬರ್ಕೋಟ್, ಜಂಕಿ ಚಟ್ಟಿ, ಯಮುನೋತ್ರಿ, ಉತ್ತರಕಾಶಿ, ಗಂಗೋತ್ರಿ, ಗುಪ್ತೇಶ್ವರ್, ಸೋನ್‌ಪ್ರಯಾಗ, ಕೇದಾರನಾಥ ಮತ್ತು ಬದರಿನಾಥ ಸ್ಥಳಗಳನ್ನು ಈ ಪ್ರವಾಸ ಪ್ಯಾಕೇಜ್ ಒಳಗೊಂಡಿದೆ. IRCTC ಯ ಈ ಪ್ರವಾಸದ ಪ್ಯಾಕೇಜ್‌ನಲ್ಲಿ, ಭಕ್ತರು ಭೋಪಾಲ್‌ನಿಂದ ವಿಮಾನದ ಮೂಲಕ ಬರುತ್ತಾರೆ. ಈ ಪ್ರವಾಸದ ಪ್ಯಾಕೇಜ್‌ನ ಹೆಸರು ಚಾರ್ಧಾಮ್ ಯಾತ್ರಾ ಉತ್ತರಾಖಂಡ್.
IRCTC ಈ ಪ್ರವಾಸ ಪ್ಯಾಕೇಜ್ ಮೇ25ರಿಂದ ಪ್ರಾರಂಭವಾಗುತ್ತದೆ. ಈ ಪ್ರವಾಸದ ಪ್ಯಾಕೇಜ್‌ನಲ್ಲಿ ಪ್ರವಾಸಿಗರಿಗೆ ವಸತಿ ಮತ್ತು ಆಹಾರದ ವ್ಯವಸ್ಥೆಯು ಉಚಿತವಾಗಿರುತ್ತದೆ. ಪ್ರವಾಸದ ಪ್ಯಾಕೇಜ್‌ನಲ್ಲಿ ಭಕ್ತರಿಗೆ ಆರಾಮದಾಯಕ ಹೋಟೆಲ್‌ನಲ್ಲಿ ವಸತಿ ಕಲ್ಪಿಸಲಾಗುತ್ತದೆ.
ಈ ಪ್ರವಾಸದ ಪ್ಯಾಕೇಜ್‌ನಲ್ಲಿ, ಒಬ್ಬಂಟಿಯಾಗಿ ಪ್ರಯಾಣಿಸಲು ಪ್ರತಿ ವ್ಯಕ್ತಿಗೆ 95150 ರೂಪಾಯಿಗಳನ್ನು ಪಾವತಿಸಬೇಕಾಗುತ್ತದೆ. ನೀವು ಇಬ್ಬರು ಜನರೊಂದಿಗೆ ಪ್ರಯಾಣಿಸಿದರೆ ಪ್ರತಿ ವ್ಯಕ್ತಿಗೆ 62950 ರೂಪಾಯಿ ಪಾವತಿಸಬೇಕು. ನೀವು ಮೂರು ಜನರೊಂದಿಗೆ ಪ್ರಯಾಣಿಸಿದರೆ ಪ್ರತಿ ವ್ಯಕ್ತಿಗೆ 56850 ರೂಪಾಯಿ ಹಾಗೂ ಹೆಚ್ಚುವರಿ ಹಾಸಿಗೆ ಪಡೆಯುವ 5 ರಿಂದ 11 ವರ್ಷದೊಳಗಿನ ಮಕ್ಕಳು ಇದ್ದರೆ 38650 ರೂಪಾಯಿ ಜೊತೆಗೆ ಹಾಸಿಗೆ ಪಡೆಯದ 5 ರಿಂದ 11 ವರ್ಷದ ಮಕ್ಕಳು 28900 ರೂಪಾಯಿ ಪಾವತಿಸಬೇಕಾಗುತ್ತದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ