ಕೊಪ್ಪಳ : ವಿದ್ಯುತ್ ಸ್ಪರ್ಶ, ಹಾಸ್ಟೆಲ್‌ನಲ್ಲಿ 5 ವಿದ್ಯಾರ್ಥಿಗಳು ಬಲಿ

ಕೊಪ್ಪಳ :

  ವಿದ್ಯುತ್ ಸ್ಪರ್ಶದಿಂದಾಗಿ ಐವರು ವಿದ್ಯಾರ್ಥಿಗಳು ಮೃತಪಟ್ಟ ಘಟನೆ ಕೊಪ್ಪಳದ ಹಾಸ್ಟೆಲ್‌ನಲ್ಲಿ ನಡೆದಿದೆ. ಕೊಪ್ಫಳ ನಗರದಲ್ಲಿರುವ ದೇವರಾಜ ಅರಸು ಬಿಸಿಎಂ ಹಾಸ್ಟೆಲ್‌ನಲ್ಲಿ ಭಾನುವಾರ ಬೆಳಗ್ಗೆ ಈ ಅವಘಡ ನಡೆದಿದೆ. ಸ್ವಾತಂತ್ರ ದಿನಾಚರಣೆಗೆ ಬಾವುಟ ಹಾರಿಸಲು ನೆಟ್ಟಿದ್ದ ಕಬ್ಬಿಣದ ಕಂಬ ತೆರವು ಮಾಡುವಾಗ ಈ ಘಟನೆ ನಡೆದಿದೆ.

  ಸರ್ಕಾರಿ ಕಟ್ಟಡ ಲಭ್ಯವಿಲ್ಲದ ಕಾರಣ ಬಾಡಿಗೆ ಕಟ್ಟಡದಲ್ಲಿ ಬಿಸಿಎಂ ಹಾಸ್ಟೆಲ್ ನಡೆಸಲಾಗುತ್ತಿತ್ತು. ಗುರುವಾರ ಧ್ವಜಾರೋಹಣ ಮಾಡಲು ಕಬ್ಬಿಣದ ಕಂಬವನ್ನು ನೆಡಲಾಗಿತ್ತು. ಈ ಪ್ರದೇಶದಲ್ಲಿ ಮಂಗಗಳ ಕಾಟ ವಿಪರೀತವಾಗಿದ್ದು, ಕಂಬವನ್ನು ಆಧರಿಸಿ, ಜಿಗಿಯುವುದನ್ನು ಮಾಡುತ್ತಿದ್ದವು. ಇದರಿಂದಾಗಿ ವಿದ್ಯಾರ್ಥಿನಿಲಯದ ಪಕ್ಕದಲ್ಲೇ ಹಾದು ಹೋಗಿರುವ 11 ಕೆ.ವಿ. ವಿದ್ಯುತ್​ ಲೈನ್​ಮೇಲೆ ಧ್ವಜಕಂಬ ಒರಗಿಕೊಂಡಿತ್ತು. ಇದು ತಿಳಿಯದ ಮಕ್ಕಳು ಭಾನುವಾರ ಬೆಳಗ್ಗೆ ಧ್ವಜಕಂಬವನ್ನು ತೆರವುಗೊಳಿಸಲು ಮುಂದಾಗಿದ್ದರು. ಕಂಬವನ್ನು ಸ್ಪರ್ಶಿಸುತ್ತಲೇ ಐವರು ಮಕ್ಕಳಲ್ಲಿ ವಿದ್ಯುತ್​ ಪ್ರವಹಿಸಿ   ಈ ಘಟನೆ ನೇಡೆದಿದೆ.

  ಮೃತಪಟ್ಟ ವಿದ್ಯಾರ್ಥಿಗಳನ್ನು ಮೆಟಗಲ್ ನಿವಾಸಿ ಮಲ್ಲಿಕಾರ್ಜುನ, ಲಿಂಗದಹಳ್ಳಿ ನಿವಾಸಿ ಬಸವರಾಜ, 9ನೇ ತರಗತಿಯ ಹಲಗೇರಿಯ ದೇವರಾಜ, ಹೈದರ್ಣೇನಗರದ ಕುಮಾರ್ಶ, 8ನೇ ತರಗತಿಯ ಲಾಚನಕೇರಿಯ ಗಣೇಶ್ ಎಂದು ಗುರುತಿಸಲಾಗಿದೆ. 

 ಮೊದಲು ಒಬ್ಬ ವಿದ್ಯಾರ್ಥಿಗೆ ವಿದ್ಯುತ್ ಸ್ಪರ್ಶಿಸಿತು ಆತನನ್ನು ರಕ್ಷಣೆ ಮಾಡಲು ಹೋದ ಉಳಿದ ನಾಲ್ವರು ವಿದ್ಯುತ್ ಸ್ಪರ್ಶಿಸಿ ಸಹ ಘಟನೆಯಲ್ಲಿ ಮೃತಪಟ್ಟಿದ್ದಾರೆ. ಕೊಪ್ಪಳ ನಗರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

5 ಲಕ್ಷ ರೂ. ಪರಿಹಾರ ಘೋಷಿಸಿದ ಸಿಎಂ
ಕೊಪ್ಪಳದ ದೇವರಾಜ ಅರಸು ಮೆಟ್ರಿಕ್​ ಪೂರ್ವ ಬಿಸಿಎಂ ಹಾಸ್ಟೆಲ್​ನಲ್ಲಿ ನಡೆದ ಅವಘಡದಲ್ಲಿ ಮೃತಪಟ್ಟಿರುವ ಐವರು ವಿದ್ಯಾರ್ಥಿಗಳ ಕುಟುಂಬ ವರ್ಗದವರಿಗೆ ತಲಾ 5 ಲಕ್ಷ ರೂ. ಪರಿಹಾರ ಧನ ನೀಡಲಾಗುವುದು ಎಂದು ಸಿಎಂ ಬಿ.ಎಸ್​. ಯಡಿಯೂರಪ್ಪ ತಿಳಿಸಿದರು.

  ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

 

Recent Articles

spot_img

Related Stories

Share via
Copy link