ಹರಪನಹಳ್ಳಿ:
ತಾಲ್ಲೂಕಿನ ಕಡತಿ ಗ್ರಾಮದ ಜಮೀನೊಂದರಲ್ಲಿ ಚಿರತೆ ತನ್ನ ಮರಿಗಳೊಂದಿಗೆ ಪ್ರತ್ಯಕ್ಷವಾಗಿ ದಾಳಿಗೆ ಹೊಂಚು ಹಾಕಿದೆ ಆದರೆ ಒಗ್ಗಟ್ಟಾಗಿ ರೈತರು ಕೂಗಿ ಕೊಂಡು ಹೇಗೊ ಪಾರಾದ ಘಟನೆ ಶುಕ್ರವಾರ ಮದ್ಯಾಹ್ನ ಜರುಗಿದೆ.
ಗ್ರಾಮದ ರಡ್ಡೇರ ಮಹೇಶಪ್ಪ ಎಂಬುವವರ ಕಬ್ಬಿನ ಜಮೀನಿನಲ್ಲಿ ಆರು ರೈತರು ಗಿಡಗಂಟೆ ಕೀಳುವಾಗ ಚಿರತೆ ಪ್ರತ್ಯಕ್ಷವಾಗಿದೆ. ಆಗ ಮಹಾದೇವಪ್ಪ ಎಂಬಾತ ಕೈಯಲ್ಲಿದ್ದ ಕುಡುಗೋಲು ನಿಂದ ಕೈ ಬೀಸುತ್ತಿರುವಾಗ ಆತನ ಜೊತೆಗಿದ್ದ ಇತರರು ಕೇಕೆ ಹಾಕಿ ಚಿರತೆಯನ್ನು ಹಿಮ್ಮೆಟ್ಟಿಸಿ ಒಡಿಸಿದ್ದಾರೆ.
ನಂತರ ಪೊದೆಯಲ್ಲಿ ಚಿರತೆ ಮರಿ ಕಂಡುಬಂದಿದೆ. ರೈತರು ಆ ಚಿರತೆ ಮರಿಯನ್ನು ಹಿಡಿದು ಅರಣ್ಯ ಇಲಾಖೆ ಅಧಿಕಾರಿಗಳಿಗೆ ದೂರವಾಣಿ ಮೂಲಕ ಮಾಹಿತಿ ನೀಡಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳು ಆಗಮಿಸಿ ಮರಿ ಪಡೆದುಕೊಂಡಿದ್ದಾರೆ. ಮರಿಯನ್ನು ಹಿಡಿದುಕೊಂಡರೆ ಚಿರತೆ ಮರಳಿ ಬರುವುದಿಲ್ಲ ಎಂದು ಸಮಜಾಯಿಸಿ ಮರಿಯನ್ನು ಪುನಃ ಪೊದೆಯಲ್ಲಿ ಬಿಟ್ಟು ಬಂದಿದ್ದಾರೆ.
ಮತ್ತೂರು ಬಳಿ ಸಹ ಚಿರತೆ ಆಗಾಗ ಕಾಣಿಸಿಕೊಂಡಿದೆ. ಸುಮಾರು ದಿನಗಳಿಂದ ಈ ಭಾಗದಲ್ಲಿ ಚಿರತೆ ಹಾವಳಿ ಇದ್ದು, ಜಮೀನಿನಲ್ಲಿ ಕೆಲಸ ಮಾಡಲು ಕಷ್ಟವಾಗಿದೆ, ಮೊನ್ನೆ 1ಕುರಿ ಹಾಗೂ 1 ಮೇಕೆ ಗಳನ್ನು ಹಿಡಿದು ತಿಂದಿದೆ, ಆದ್ದರಿಂದ ಆದಷ್ಟು ಬೇಗ ಅರಣ್ಯ ಅಧಿಕಾರಿಗಳು ಚಿರತೆ ಹಿಡಿದು ರೈತರಿಗೆ ಅನುಕೂಲ ಮಾಡಿಕೊಡಬೇಕು ಎಂದು ರೈತ ರಡ್ಡೇರ ಮಹೇಶಪ್ಪ ಒತ್ತಾಯಿಸಿದ್ದಾರೆ.
ಮಾಜಿ ಜಿಲ್ಲಾ ಪಂಚಾಯ್ತಿ ಸದಸ್ಯ ತೆಲಗಿ ಈಶ್ವರಪ್ಪ ಮಾತನಾಡಿ, ಈ ಭಾಗದ ಹೊಲ ಗದ್ದೆಗಳಲ್ಲಿ ರೈತರು ಕೆಲಸ ಮಾಡಲು ಭಯಭೀತರಾಗಿದ್ದಾರೆ. ರಾತ್ರಿ ವೇಳೆ ವಿದ್ಯುತ್ ನೀಡುತ್ತಿದ್ದ ಜಮೀನುಗಳಿಗೆ ನೀರು ಕಟ್ಟಲು ಸಾಧ್ಯವಾಗುತ್ತಿಲ್ಲ. ಕಾಡು ಪ್ರಾಣಿಗಳಿಂದ ರೈತರಿಗೆ ಹಾನಿಯಾಗುವುದಕ್ಕಿಂತ ಮುಂಚೆ ಅರಣ್ಯ ಇಲಾಖೆಯ ಅಧಿಕಾರಿಗಳು ಭೋನು ಅಥವಾ ಬಲೆ ಹಾಕಿ ಚಿರತೆಗಳನ್ನು ಹಿಡಿದು ರೈತರಿಗೆ ರಕ್ಷಣೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಈ ಕುರಿತು ಪ್ರತ್ಕ್ರಿಯೆ ನೀಡಿದ ಉಪ ವಲಯ ಅರಣ್ಯಾಧಿಕಾರಿ ಅಶೋಕ ಅವರು ಸೆ.22 ರಿಂದಲೇ ಅಲ್ಲಿ ಬೋನು ಇಟ್ಟು ಚಿರತೆ ಹಿಡಿಯುವ ಕೆಲಸಕ್ಕೆ ಮುಂದಾಗುತ್ತೇವೆಂದು ಹೇಳಿದರು
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
