ಕೊರಟಗೆರೆ
ಕೊಳಾಲದ ಗೋಪೇನಹಳ್ಳಿ ಗ್ರಾಮದ ರೈತ ವಸಂತಕುಮಾರ್ ಎಂಬುವರ ಜಮೀನಿನಲ್ಲಿ ಮೇಕೆಯೊಂದು ಮೇವು ತಿನ್ನುವಾಗ ಚಿರತೆ ದಾಳಿ ನಡೆಸಿ ಮೇಕೆಯ ಕುತ್ತಿಗೆಗೆ ಬಾಯಿ ಹಾಕಿ ರಕ್ತ ಹೀರಿ ಸಾಯಿಸಿದೆ ಎಂದು ವರದಿ ಯಾಗಿದ್ದು .ಇದನ್ನು ಕಂಡ ರೈತರು ಬಯದಿಂದಲೇ ಕೂಗಾಟ ನಡೆಸಿ ಚಿರತೆಯನ್ನು ಬೆದರಿಸಿ ಓಡಿಸಿದ್ದಾರೆ.
ಈ ಘಟನೆಯಿಂದ ಭಯಭೀತವಾಗಿರುವ ಗ್ರಾಮಸ್ಥರು ಅರಣ್ಯ ಇಲಾಖೆ ಸೂಕ್ತ ಕ್ರಮ ಕೈಗೊಂಡು ಚಿರತೆ ಹಾವಳಿಯನ್ನು ತಪ್ಪಿಸುವಂತೆ ಒತ್ತಾಯಿಸಿದ್ದು ರೈತನಿಗೆ ಸೂಕ್ತ ಪರಿಹಾರ ಒದಗಿಸುವಂತೆ ಆಗ್ರಹಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ