ಜನವರಿಗೆ ಸೂಪರ್ ಸ್ಟಾರ್ ರನಿಕಾಂತ್ ರಾಜಕೀಯ ಪಕ್ಷ ಆರಂಭ

ಚೆನ್ನೈ :  

     2021ರ ಜನವರಿಯಲ್ಲಿ ರಜನಿಕಾಂತ್ ಹೊಸ ರಾಜಕೀಯ ಪಕ್ಷ ಸ್ಥಾಪಿಸಲಿದ್ದು, 2020ರ ಡಿಸೆಂಬರ್ 31ರಂದು ತಮ್ಮ ಹೊಸ ಪಕ್ಷದ ಬಗ್ಗೆ ಘೋಷಣೆ ಮಾಡಲಿದ್ದಾರೆ.

     ಹೌದು, ಇಂದು ಟ್ವೀಟ್ ಮೂಲಕ ಈ ವಿಷಯ ಪ್ರಕಟಿಸಿರುವ ರಜನಿಕಾಂತ್, ಈಗ ಬದಲಾವಣೆ, ರೂಪಾಂತರ ತಾರದಿದ್ದರೆ ಮತ್ತೆ ಯಾವಾಗಲೂ ಸಾಧ್ಯವಿಲ್ಲ ಎಂದಿದ್ದಾರೆ.

    ಜನವರಿಯಲ್ಲಿ ಪಕ್ಷ ಆರಂಭವಾಗುತ್ತದೆ, ಈ ಸಂಬಂಧ ಡಿಸೆಂಬರ್ 31ರಂದು ಘೋಷಣೆ ಮಾಡಲಾಗುವುದು. ಮುಂದಿನ ವರ್ಷದ ವಿಧಾನಸಭೆ ಚುನಾವಣೆಯಲ್ಲಿ ಜನರ ಬೆಂಬಲದೊಂದಿಗೆ ಧಾರ್ಮಿಕ ರಾಜಕೀಯ ತಮಿಳು ನಾಡಿನಲ್ಲಿ ಆರಂಭವಾಗಲಿದೆ.

      ಮುಂದಿನ ವರ್ಷ ತಮಿಳು ನಾಡು ವಿಧಾನಸಭೆ ಚುನಾವಣೆ ನಡೆಯಲಿದ್ದು ಜನರ ಬೆಂಬಲದೊಂದಿಗೆ ಪ್ರಾಮಾಣಿಕ, ಪಾರದರ್ಶಕ, ಭ್ರಷ್ಟಾಚಾರ ರಹಿತ, ಜಾತ್ಯತೀತ ರಾಜಕೀಯ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬರಬೇಕು ಎಂದು ರಜನಿಕಾಂತ್ ಹೇಳಿದ್ದರು.

     ತಮ್ಮ ರಾಜಕೀಯ ಜೀವನ ಆರಂಭದ ಬಗ್ಗೆ ತೀರ್ಮಾನ ತೆಗೆದುಕೊಳ್ಳಲು ಸ್ವಲ್ಪ ಸಮಯ ಬೇಕು ಎಂದು ನಟ ರಜನಿಕಾಂತ್ ಕಳೆದ ಸೋಮವಾರ ಚೆನ್ನೈಯ ತಮ್ಮ ನಿವಾಸದಲ್ಲಿ ನಡೆದಿದ್ದ ರಜಿನಿ ಮಕ್ಕಲ್ ಮಂದ್ರಮ್(ಆರ್ ಎಂಎಂ) ಜಿಲ್ಲಾ ಪದಾಧಿಕಾರಿಗಳ ಸಭೆಯಲ್ಲಿ ಹೇಳಿದ್ದರು. ಅಲ್ಲದೇ 2017ರಲ್ಲಿ ರಜನಿಕಾಂತ್ ರಾಜಕೀಯ ಪ್ರವೇಶಿಸುವುದಾಗಿ ಘೋಷಣೆ ಮಾಡಿದ್ದರು.

     ಇಷ್ಟು ದಿನಗಳ ಊಹಾಪೋಹ, ಕಾಯುವಿಕೆಗೆ ಕೊನೆಗೂ ಸೂಪರ್ ಸ್ಟಾರ್ ರಜನಿಕಾಂತ್ ತೆರೆ ಎಳೆದಿದ್ದಾರೆ.  

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap