ರೈತರು ಬೇರೆ ಕ್ಷೇತ್ರಗಳತ್ತ ಮುಖ ಮಾಡುವ ದುಸ್ಥಿತಿ ಎದುರಾಗಿದೆ

ಚಿಕ್ಕಬಳ್ಳಾಪುರ :
     ಒಕ್ಕೂಟವು ಹಾಲು ಉತ್ಪಾದಕರ ಕಾಳಜಿಯನ್ನು ಕಡೆಗಣಿಸಿರುವ ಹಿನ್ನೆಲೆಯಲ್ಲಿ ಒಕ್ಕೂಟವು ದಿವಾಳಿಯತ್ತ ಸಾಗುವ ಜೊತೆಗೆ ರೈತರು ರಾಸುಗಳನ್ನು ಮಾರಿ ಬೇರೆ ಕ್ಷೇತ್ರಗಳತ್ತ ಮುಖ ಮಾಡುವ ದುಸ್ಥಿತಿ ಎದುರಾಗಿದೆ ಎಂದು ಕೋಚಿಮುಲ್ ಮಾಜಿ ಅಧ್ಯಕ್ಷ ಕೆ.ವಿ.ನಾಗರಾಜ್ ಕಳವಳ ವ್ಯಕ್ತಪಡಿಸಿದರು.
      ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಬರದನಾಡಗಿರುವ ಕೋಲಾರ ಚಿಕ್ಕಬಳ್ಳಾಪುರ ಭಾಗದ ರೈತರು ಹೈನುಗಾರಿಕೆಯನ್ನು ನಂಬಿ ಜೀವನ ಸಾಗಿಸುತ್ತಿದ್ದಾರೆ. ಹಾಲಿನ ಉತ್ಪಾದಕರಿಗೆ ಪ್ರತಿ ಲೀ. ೪ ರೂ ಕಡಿತ, ಮಂಡಳಿಯ ತಪ್ಪು ನಿರ್ಧಾರಗಳಿಂದ ಹಿನ್ನೆಲೆಯಲ್ಲಿ ಒಕ್ಕೂಟದ ಹಾಲಿನ ಉತ್ಪಾದನೆ ೧೧ ಲಕ್ಷ ಲೀ. ನಿಂದ ೮.೫ ಲಕ್ಷ ಲೀ.ಗೆ ಇಳಿದಿದ್ದು, ರೈತರಿಗೆ ಹೈನುಗಾರಿಕೆ ಮೇಲೆ ವಿರಕ್ತಿ ಮೂಡುವ ಮೊದಲೇ ಪ್ರತಿ ಲೀ. ೮ ರೂ ಹೆಚ್ಚಿಸಿ, ಇತೆ ಸೌಲಭ್ಯ ಒದಗಿಸಲು ಒತ್ತಾಯಿಸಿದರು. 
     ಅಗತ್ಯಕ್ಕೂ ಮೀರಿ ನೌಕರರ ನೇಮಕ, ಕೋಟ್ಯಾಂತರ ರೂ ವಿನಿಯೋಗಿಸಿ ರೈತರಿಗೆ ಅಗತ್ಯವಿಲ್ಲದ ಕಾರ್ಯಕ್ರಮಗಳ ಆಯೋಜನೆ, ಒಕ್ಕೂಟದಲ್ಲಿಯೇ ೪೫ ಪೈಸೆ ವೆಚ್ಚದಲ್ಲಿ ತಯಾರಾಗುತ್ತಿದ್ದ ಲೀ. ಹಾಲಿನ ಟೆಟ್ರಾ ಪ್ಯಾಕ್‌ಗೆ ೧.೫ ರೂ ನಿಗಧಿಪಡಿಸಿ ಹೈದರಾಬಾದ್‌ನವರಿಗೆ ಟೆಂಡರ್ ನೀಡಿರುವುದು, ಹಾಲಿನ ಸಾಗಾಣಿಕೆಗೆ ದುಬಾರಿ ಧರದ ಟೆಂಡರ್ ನೀಡಿರುವುದು ಸೇರಿ ಇನ್ನು ಹಲವು ಅವ್ಯವಹಾರ ನಡೆಸಿರುವುದರಿಂದ ಒಕ್ಕೂಟವು ಬರೊಬ್ಬರಿ ೩೦ ಕೋಟಿ ನಷ್ಟ ಅನುಭವಿಸುವಂತಾಗಿದೆ ಎಂದು ಆರೋಪಿಸಿದರು.
     ಚಿಕ್ಕಬಳ್ಳಾಪುರ ಪ್ರತ್ಯೇಕ ಹಾಲು ಒಕ್ಕೂಟ ರಚಿಸಬೇಕೆಂಬ ಸಚಿವ ಡಾ.ಕೆಸುಧಾಕರ್ ಒತ್ತಾಯದಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರತ್ಯೇಕ ಒಕ್ಕೂಟ ರಚನೆಗೆ ಆದೇಶವನ್ನು ಹೊರಡಿಸಿದ್ದರು. ಒಕ್ಕೂಟಕ್ಕೆ ಬಜೆಟ್‌ನಲ್ಲಿ ೫೦ ಕೋಟಿ ಮೀಸಲಿರಿಸಲು ತೀರ್ಮಾನಿಸಲಾಗಿತ್ತು. ಅಲ್ಲದೆ ಮೆಗಾಡೇರಿಗೆ ಬೇಕಾಗಿರುವ ೧೦ ಎಕರೆ ಜಮೀನು ನೀಡಲು ತಯಾರಿ ನಡೆದಿತ್ತು.ಆದರೆ ಜಿಲ್ಲೆಯ ಕೆಲ ನಿರ್ದೇಶಕರು ಕಾಂಗ್ರೆಸ್ಸಿಗರೊAದಿಗೆ ಕೈಜೋಡಿಸಿ ಪ್ರತ್ಯೇಕ ಒಕ್ಕೂಟ ಮಾಡದಂತೆ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
         ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap