ಮತ್ತೆ ತನ್ನ ಕುತಂತ್ರಿ ಬುದ್ಧಿ ತೋರಿದ ಚೀನಾ ….!

ನವದೆಹಲಿ: 

     ವಿಶ್ವದ ದೊಡ್ಡಣ್ಣನಾಗುವ ಕನಸು ಕಾಣುತ್ತಿರುವ ನಮ್ಮ ನೆರೆ ರಾಷ್ಟ್ರ ಚೀನಾ ದಿನೇ ದಿನೆ ತಂತ್ರಜ್ಞಾನ ಮತ್ತು ಅತ್ಯಾಧುನಿಕ ಶಸ್ತ್ರಾಸ್ತ್ರಗಳ ತಯಾರಿ, ಪರೀಕ್ಷೆ ಮತ್ತು ಸಂಗ್ರಹದತ್ತ ದಾಪುಗಾಲಿಡುತ್ತಿದೆ. ಇದೀಗ ಇಂತಹ ಚೀನಾದ ಕುತಂತ್ರ ಬುದ್ದಿಯೊಂದು ಹೊರಬಿದ್ದಿದ್ದು, ಇತ್ತೀಚೆಗೆ ನಡೆದ ಭಾರತ-ಪಾಕ್ ಕಿರು ಸಮರದ  ಸಂದರ್ಭದಲ್ಲಿ ತನ್ನ ಶಸ್ತ್ರಾಸ್ತ್ರ ಸಾಮರ್ಥ್ಯವನ್ನು ಪರೀಕ್ಷಿಸುವ ಮೂಲಕ ಅವಕಾಶವಾದಿತನವನ್ನು ಮೆರೆದ ಘಟನೆಯೊಂದು ವರದಿಯಾಗಿದೆ.

    ಈ ಮಾಹಿತಿ ಅಮೆರಿಕದ ದ್ವಿಪಕ್ಷೀಯ ಕಮಿಷನ್‌ನ ವಾರ್ಷಿಕ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಅಮೆರಿಕ-ಚೀನಾ ಆರ್ಥಿಕ ಮತ್ತು ಭದ್ರತಾ ಪುನರ್ ಪರಿಶೀಲನಾ ಆಯೋಗದ ವರದಿಯಲ್ಲಿ ಈ ಮಾಹಿತಿ ಉಲ್ಲೇಖವಾಗಿದ್ದು, ಭಾರತ – ಪಾಕ್ ನಡುವಿನ ನಾಲ್ಕುದಿನಗಳ ಸಮರದ ಸಂದರ್ಭದಲ್ಲಿ ಚೀನಾವು ತನ್ನ ಶಸ್ತ್ರಾಸ್ತ್ರಗಳ ಸಾಮರ್ಥ್ಯವನ್ನು ಪರೀಕ್ಷೆಗೊಳಪಡಿಸಿ ಅದರ ಕಾರ್ಯಕ್ಷಮತೆಯನ್ನು ಜಾಹೀರುಗೊಳಿಸಿದೆ ಎಂದು ಹೇಳಿದೆ.

    ಭಾರತ-ಪಾಕ್ ಸಮರದಲ್ಲಿ ಚೀನಾದ ಎಚ್.ಕ್ಯು-9 ಏರ್ ಡಿಫೆನ್ಸ್ ಸಿಸ್ಟಮ್. ಪಿ.ಎಲ್.-15 ಏರ್ ಟು ಮಿಸೈಲ್ ಗಳು ಮತ್ತು ಜೆ-10 ಫೈಟರ್ ಏರ್ ಕ್ರಾಫ್ಟ್ ಗಳನ್ನು ಮುಕ್ತವಾಗಿ ಬಳಸಲಾಗಿದೆ ಎಂದು ಈ ವರದಿಯಲ್ಲಿ ಉಲ್ಲೇಖಿಸಲಾಗಿದೆ. 

    ಈ ಘರ್ಷಣೆ ವೇಳೆ ತನ್ನ ಡಿಫೆನ್ಸ್ ಸಾಮರ್ಥ್ಯವನ್ನು ರಿಯಲ್ ವರ್ಲ್ಡ್‌ನಲ್ಲಿ ಪರಿಚಯಿಸಿದ ಬಳಿಕ ಚೀನಾ ಕಳೆದ ಜೂನ್‌ನಲ್ಲಿ ತನ್ನ 40 ಜೆ-35 ಫಿಫ್ತ್ ಜನರೇಷನ್ ಫೈಟರ್ ಜೆಟ್, ಕೆ.ಜೆ.-500 ಏರ್ ಕ್ರಾಫ್ಟ್ ಮತ್ತು ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಪಾಕಿಸ್ತಾನಕ್ಕೆ ಮಾರಾಟ ಮಾಡುವ ಆಫರ್ ನೀಡಿತ್ತು ಎಂಬ ಆಘಾತಕಾರಿ ಅಂಶ ಈ ವರದಿಯಲ್ಲಿ ಉಲ್ಲೇಖಗೊಂಡಿದೆ.

    ಭಾರತ-ಪಾಕ್ ಘರ್ಷಣೆಗೆ ಕದನ ವಿರಾಮ ಬಿದ್ದ ಒಂದು ವಾರಗಳ ಬಳಿಕ, ಚೀನಾ ರಾಯಭಾರ ಕಚೇರಿಯು ಈ ಸಮರದಲ್ಲಿ ತನ್ನ ಶಸ್ತ್ರಾಸ್ತ್ರಗಳ ಯಶಸ್ವಿ ಪ್ರಯೋಗದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿತ್ತು ಎಂದೂ ಸಹ ಸಮಿತಿ ವಿಚಾರಣೆ ಮತ್ತು ಸಂಶೋಧನೆ ಮೂಲಕ ಪ್ರಕಟಗೊಳ್ಳುವ ಈ ವರದಿಯಲ್ಲಿ ಹೇಳಲಾಗಿದೆ.

    ಕಳೆದ ಮೇಯಲ್ಲಿ ನಡೆದಿದ್ದ ಈ ಸಂಘರ್ಷವನ್ನು ಆ ವರದಿಯಲ್ಲಿ ‘ಪ್ರಚ್ಛನ್ನ ಯುದ್ಧ’ ಎಂದು ಕರೆಯಲಾಗಿದ್ದು, ಚೀನಾ ಈ ಸಮರದಲ್ಲಿ ಕುಮ್ಮಕ್ಕು ನೀಡುವ ಪಾತ್ರವನ್ನು ವಹಿಸಿತ್ತು ಎಂದು ಹೇಳಲಾಗಿದೆ.

    ಫ್ರೆಂಚ್ ಗುಪ್ತಚರ ವರದಿಗಳ ಪ್ರಕಾರ ಚೀನಾವು ರಫೇಲ್ ವಿರುದ್ಧ ತಪ್ಪು ಮಾಹಿತಿ ನೀಡುವ ಕ್ಯಾಂಪೇನ್ ನಡೆಸಿತ್ತು ಮತ್ತು ಆ ಮೂಲಕ ಜಗತ್ತಿನಲ್ಲಿ ರಫೇಲ್ ಯುದ್ಧ ವಿಮಾನಗಳ ಮಾರಾಟಕ್ಕೆ ಅಡ್ಡಗಾಲು ಹಾಕಿ ತನ್ನ ಜೆ-35 ಯುದ್ಧ ವಿಮಾನಗಳ ಮಾರಾಟವನ್ನು ಉತ್ತೇಜಿಸಿತ್ತು ಮತ್ತು ಈ ಉದ್ದೇಶಕ್ಕಾಗಿ ಚೀನಾವು ಫೇಕ್ ಸೋಶಿಯಲ್ ಮೀಡಿಯಾ ಅಕೌಂಟ್ ಮೂಲಕ ರಫೇಲ್ ವಿರುದ್ಧ ನೆಗೆಟಿವ್ ಮಾಹಿತಿಗಳನ್ನು ಬಿತ್ತರಿಸುವ ಕೆಲಸವನ್ನು ಮಾಡುತ್ತಿದೆ ಎಂದು ಆ ವರದಿಯಲ್ಲಿ ಉಲ್ಲೇಖಿಸಲಾಗಿದೆ.

    ಈ ವಿಚಾರದಲ್ಲಿ ಇನ್ನೂ ಒಂದು ಹೆಜ್ಜೆ ಮುಂದ ಹೊದ ಕುತಂತ್ರಿ ಚೀನಾ, ರಫೇಲ್ ಯುದ್ಧ ವಿಮಾನಗಳ ಖರೀದಿಗೆ ಸಂಬಂಧಿಸಿದಂತೆ ಬಹುತೇಕ ಮಾತುಕತೆ ಮುಗಿಸಿದ್ದ ಇಂಡೋನೇಷ್ಯಾವನ್ನು ಮನವೊಲಿಸಿ ರಫೇಲ್ ಖರೀದಿಯಿಂದ ಹಿಂದೆ ಸರಿಯುವಂತೆ ಅಲ್ಲಿನ ಚೀನಾ ರಾಯಭಾರಿ ಕಚೇರಿಯು ಮಾಡಿತ್ತು ಎಂದು ಆ ವರದಿಯಲ್ಲಿ ಹೇಳಲಾಗಿದೆ. ಆದರೆ ಈ ವರದಿಯನ್ನು ಚೀನಾ ಸಂಪೂರ್ಣವಾಗಿ ತಳ್ಳಿ ಹಾಕಿದ್ದು, ಇದೊಂದು ತಪ್ಪು ಮಾಹಿತಿ ಎಂದು ಹೇಳಿಕೊಂಡಿದೆ.

Recent Articles

spot_img

Related Stories

Share via
Copy link