ಯುವತಿಯ ಜೀವ ತೆಗೆದ ಚಾಕೋಲೇಟ್….!

ಬೆಂಗಳೂರು:

       ಮಹಾನಗರಿ ಬೆಂಗಳೂರಿನ ಹೆಣ್ಣೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ವಿಲಕ್ಷಣ ಘಟನೆ ನಡೆದಿದೆ. ಮೃತ ಮಹಿಳೆಯನ್ನು ನಂದಿನಿ(25) ಎಂದು ಗುರುತಿಸಲಾಗಿದೆ. ಮೃತ ಮಹಿಳೆ ನಂದಿನಿಯ ಪತಿ ಶಂಕರನಗರದ ಸಲೂನ್‌ ಒಂದರಲ್ಲಿ ಕೆಲಸ ಮಾಡುತ್ತಿದ್ದ. ಈ ಜೋಡಿ ಮುದ್ದಾದ ಇಬ್ಬರು ಮಕ್ಕಳ ಜೊತೆ ಹೆಣ್ಣೂರು ಬಳಿಯ ಹೊನ್ನಪ್ಪ ಲೇಔಟ್‌ನಲ್ಲಿ ಜೀವನ ಸಾಗಿಸುತ್ತಿದ್ದರು. ಆದರೆ ಪತ್ನಿಯ ಕಠಿಣ ನಿರ್ಧಾರ ಕುಟುಂಬಕ್ಕೆ ಈಗ ದೊಡ್ಡ ಆಘಾತವನ್ನೇ ನೀಡಿದೆ.

ನಂದಿನಿ ಹಾಗೂ ಗೌತಮ್ ಕಾಲೇಜು ದಿನಗಳಿಂದ ಸ್ನೇಹಿತರಾಗಿದ್ದು, ಇಬ್ಬರೂ ಪ್ರೀತಿಸಿ ಮದುವೆಯಾಗಿದ್ದರು. ನಂದಿನಿ ಹಾಗೂ ಗೌತಮ್ ಪ್ರೀತಿಗೆ ಸಾಕ್ಷಿಯಾಗಿ ಇಬ್ಬರು ಮಕ್ಕಳೂ ಇದ್ದರೂ. ಆದರೆ ಘಟನೆ ನಡೆಯುವ ದಿನ ಎಂದಿನಂತೆ ಕೆಲಸಕ್ಕೆ ಹೊರಟಿದ್ದ ಪತಿಯ ಜೊತೆಗೆ ಪತ್ನಿ ಕಿರಿಕ್ ತೆಗೆದಿದ್ದಳಂತೆ. ನನಗೆ ಚಾಕೊಲೇಟ್ ಬೇಕು ಎಂಬ ಬೇಡಿಕೆ ಇಟ್ಟಿದ್ದಳಂತೆ ನಂದಿನಿ. ಹೆಂಡತಿಯ ಆಸೆ ಪೂರೈಸುವುದನ್ನು ತಡ ಮಾಡಿದ್ದಕ್ಕೆಇಂತಹ ಘಟನೆ ನಡೆದು ಹೋಗಿದೆ.

Recent Articles

spot_img

Related Stories

Share via
Copy link
Powered by Social Snap