ಸಿಸಿಬಿ ಕಾರ್ಯಾಚರಣೆ ಪ್ರಶಂಸಿದ ಸಿಎಂ…!

ಬೆಂಗಳೂರು:

    ಬೆಂಗಳೂರಿನಲ್ಲಿ ಶಂಕಿತ ಉಗ್ರರ ಬಂಧನ ವಿಚಾರವಾಗಿ ಸಿಸಿಬಿ ಪೊಲೀಸರ ಕಾರ್ಯಕ್ಕೆ ಗೃಹ ಸಚಿವ ಡಾ.‌ಜಿ ಪರಮೇಶ್ವರ್ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

    ಉಗ್ರ ಬಂಧನ ಹಾಗೂ ಕಾರ್ಯಾಚರಣೆ ಕುರಿತು ವಿಧಾನಸಭೆಯಲ್ಲಿ ಮಾತನಾಡಿದ ಸಚಿವರು, ಐವರು ಆರೋಪಿಗಳನ್ನು ಬಂಧನಕ್ಕೊಳಪಡಿಸಲಾಗಿದೆ. ಬಂಧಿತರು ಈ ಹಿಂದೆ ಹಲವು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದರು. ನಂತರ ಜಾಮೀನು ಮೇಲೆ ಹೊರಗೆ ಬಂದಿದ್ದರು. ನಂತರ ದೇಶದ್ರೋಹಿ ಸಂಘಟನೆಗಳ‌ ಸಂಪರ್ಕಕ್ಕೆ ಬಂದಿದ್ದಾರೆಂದು ಹೇಳಿದರು.

    ಬಂಧಿಕರು ಕರ್ನಾಟಕ ಹಾಗೂ ಇತರೆಡೆಗಳಲ್ಲಿ ಉಗ್ರ ಚಟುವಟಿಕೆಗಳನ್ನು ಕೈಗೊಳ್ಳಲು ಮುಂದಾಗಿದ್ದರು. ಶಂಕಿತರ ಸಂಭವನೀಯ ಉಗ್ರ ಚಟುವಟಿಕೆಗಳನ್ನು ಸಿಸಿಬಿ ಪೊಲೀಸರು ತಡೆದು ಬಂಧಿಸಿದ್ದಾರೆ. ಈ ಶಂಕಿತರು ಯಾವ ಉಗ್ರ ಚಟುವಟಿಕೆಗೆ ಉದ್ದೇಶಿಸಿದ್ದರು ಎಂಬುದು ತನಿಖೆಯಿಂದ ಗೊತ್ತಾಗಬೇಕಿದೆ ಎಂದು ತಿಳಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link