ಪತ್ರಕರ್ತರ ರಾಜ್ಯ ಸಮ್ಮೇಳನ ಕ್ಕೆ ಸಿಎಂಗೆ ಆಮಂತ್ರಣ : ಕ್ರೀಡಾಕೂಟ ಲಾಂಛನ ಅನಾವರಣಗೊಳಿಸಿ ಶುಭ ಹಾರೈಕೆ

ಬೆಂಗಳೂರು:

   ಕರ್ನಾಟಕ ಕಾರ್ಯನಿರತ ಪತ್ರಕರ್ತ ರ ಸಂಘ ಜಿಲ್ಲಾಡಳಿತ ತುಮಕೂರು ವತಿಯಿಂದ ಕರ್ನಾಟಕ ಸುವರ್ಣ ಸಂಭ್ರಮ ನೆನಪಿನ ರಾಜ್ಯ ಮಟ್ಟದ ಕ್ರೀಡಾಕೂಟಕ್ಕೆ ಭರದ ಸಿದ್ಧತೆ ಜರುಗುತ್ತಿದೆ.ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗುರುವಾರ ಗೃಹ ಕಚೇರಿ ಕಾವೇರಿಯಲ್ಲಿ ಲಾಂಛನ ಅನಾವರಣಗೊಳಿಸಿ ಕ್ರೀಡಾಕೂಟಕ್ಕೆ ಶುಭ ಹಾರೈಸಿದರು.

  ಇದೇ ವೇಳೆ ತುಮಕೂರಿನಲ್ಲಿ ಆಯೋಜಿಸಲಿರುವ ರಾಜ್ಯ ಮಟ್ಟದ ಪತ್ರಕರ್ತರ ಸಮ್ಮೇಳನಕ್ಕೆ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಜಿ. ಪರಮೇಶ್ವರ ಅವರ ನೇತೃತ್ವದಲ್ಲಿ ಅಗತ್ಯ ಪೂರ್ವ ಸಿದ್ಧತೆಯನ್ನು ನಡೆಸುತ್ತಿದ್ದು ಉದ್ಘಾಟಿಸಲು ಸಮಯವಕಾಶ ಕೊಡಬೇಕೆಂದು ಮುಖ್ಯಮಂತ್ರಿಗಳನ್ನು ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು,ಜಿಲ್ಲಾಧ್ಯಕ್ಷ ಚಿ. ನಿ. ಪುರುಷೋತ್ತಮ್ ಹಾಗೂ ರಾಷ್ಟ್ರೀಯ ಮಂಡಳಿ ಸದಸ್ಯರಾದ ಅನು ಶಾಂತರಾಜು, ಟಿ. ಎನ್. ಮಧುಕರ್ , ಡಿ. ಎಂ. ಸತೀಶ್ ಮತ್ತು ಪದಾಧಿಕಾರಿಗಳು ಕೋರಿದರು.ಸ್ಪಂದಿಸಿದ ಮುಖ್ಯ ಮಂತ್ರಿ ಗಳು ಜನವರಿಯಲ್ಲಿ ಸಮ್ಮೇಳನ ಆಯೋಜಿಸುವಂತೆ ಸಲಹೆ ನೀಡಿ ಅಗತ್ಯ ಸಹಕಾರದ ಭರವಸೆ ಯನ್ನು ನೀಡಿದರು.

   ಮುಖ್ಯ ಮಂತ್ರಿ ಗಳ ಮಾಧ್ಯಮ ಸಲಹೆ ಗಾರರಾದ ಕೆ. ವಿ. ಪ್ರಭಾಕರ್, ವಾರ್ತಾ ಇಲಾಖೆ ಹಿರಿಯ ಸಹಾಯ ಕ ನಿರ್ದೇಶಕರಾದ ಹಿಮಂತರಾಜು ಕ್ರೀಡಾ ಸಮಿತಿ ಮುಖ್ಯ ಸಂಚಾಲಕರಾದ ಸತೀಶ್ ಹಾರೋಗೆರೆ, ಯಶಸ್ ಪದ್ಮನಾಭ್, ಎಸ್. ಹರೀಶ್ ಆಚಾರ್ಯ ಹಾಜರಿದ್ದರು.

Recent Articles

spot_img

Related Stories

Share via
Copy link