ಚಿಕ್ಕನಾಯಕನಹಳ್ಳಿ :
ಪಟ್ಟಣದ ಎಪಿಎಂಸಿ ಬಳಿ ಇರುವ ರಾಗಿ ಖರೀದಿ ಕೇಂದ್ರದತ್ತ ರೈತರು ತಂದಿರುವ ಮೂಟೆಗಳನ್ನು ತುಂಬಿರುವ ವಾಹನಗಳ ಸಾಲು ಕಿಲೋಮೀಟರ್ ವರೆಗೆ ಬೆಳೆದಿತ್ತು, ಭಾನುವಾರ ಸಂಜೆ ಬಂದ ರೈತರು ರಾತ್ರಿ ಇಡೀ ಟ್ರಾಕ್ಟರ್‍ನ ಟ್ರೇಲರ್ ಮೇಲೆ ಹಾಗೂ ಕೆಳಗೆ ಮಲಗಿ ಚಳಿಯಲ್ಲಿ ಕಾಲ ಕಳೆದು ಬೆಳಗಾಗಿಸಿದರು.
ತಾಲ್ಲೂಕು ಕಛೇರಿಯಿಂದ ಎಪಿಎಂಸಿ ರಾಗಿ ಖರೀದಿ ಕೇಂದ್ರದ ಒಳಗೆ ಸುಮಾರು 2 ಸಾವಿರ ಕ್ವಿಂಟಾಲ್‍ಗೂ ಹೆಚ್ಚು ರಾಗಿಯನ್ನು ರೈತರು ಖರೀದಿ ಕೇಂದ್ರಕ್ಕೆ ನೀಡಲು ರಾತ್ರಿಯೆಲ್ಲಾ ಕಾದಿದ್ದಾರೆ. ಪ್ರತಿ ರೈತರಿಂದ ಒಂದು ಎಕರೆಗೆ 10 ಕ್ವಿಂಟಾಲ್ ನಂತೆ ಗರಿಷ್ಠ 50 ಕ್ವಿಂಟಾಲ್ ರಾಗಿಯನ್ನು ರಾಗಿ ಖರೀದಿ ಕೇಂದ್ರದಲ್ಲಿ ಕೊಳ್ಳಲಾಗುತ್ತಿದೆ, ರಾಗಿ ಖರೀದಿ ಕೇಂದ್ರದಲ್ಲಿ ಭಾನುವಾರ ಸಂಜೆಯವರೆಗೂ ರಾಗಿ ಖರೀದಿ ಮಾಡಲಾಗಿದೆ.
ತಾಲ್ಲೂಕಿನ ಸುತ್ತಮುತ್ತಲಿನ ಹಳ್ಳಿಗಳಲ್ಲಿನ ಇನ್ನಷ್ಟು ರೈತರು ಮಧ್ಯರಾತ್ರಿ 12ಗಂಟೆಗೆ ಬಂದು ಟ್ರಾಕ್ಟರ್ ನ ಸರತಿ ಸಾಲಿನಲ್ಲಿ ನಿಂತಿದ್ದಾರೆ, ಖರೀದಿದಾರರು ನೀಡುವ ಟೋಕನ್ ಪಡೆಯಲು ಮಧ್ಯರಾತ್ರಿಯೇ ಆಗಮಿಸಿದ್ದೇವೆ, ಕಳೆದ ಹಲವು ದಿನಗಳಿಂದಲೂ ರಾಗಿ ಖರೀದಿ ಮಾಡುತ್ತಿದ್ದು ಈ ದಿನ ಹೆಚ್ಚಾಗಿ ರೈತರು ಬಂದಿದ್ದಾರೆ ಎನ್ನುತ್ತಾರೆ ಗೋಪಾಲನಹಳ್ಳಿ ಪ್ರತಾಪ್.
ಭಾನುವಾರವೂ ರಾಗಿ ಖರೀದಿ ಮಾಡಿದ್ದೇವೆ, ಸುಮಾರು 2ಸಾವಿರ ಕ್ವಿಂಟಾಲ್ ನಷ್ಠು ರಾಗಿ ಖರೀದಿ ಮಾಡಿದ್ದೇವೆ, ರೈತರಲ್ಲಿ ರಾಗಿ ಕೊಳ್ಳುತ್ತಾರೋ ಇಲ್ಲವೋ ಎಂಬ ಭೀತಿಯಿಂದ, ಸರ್ಕಾರದಲ್ಲಿ ಹಣವಿಲ್ಲ ಎಂದು ಅವರವರೇ ಮಾತನಾಡಿಕೊಂಡು ಒಂದೇ ಬಾರಿ ರಾಗಿ ನೀಡಲು ಬರುತ್ತಿದ್ದಾರೆ, ದಿನಕ್ಕೆ 150ಕ್ಕೂ ಹೆಚ್ಚು ಟ್ರಾಕ್ಟರ್ ಗಳು ಆಗಮಿಸುತ್ತಿವೆ, ಒಂದು ಟ್ರಾಕ್ಟರ್ ನಲ್ಲಿ 50ಕ್ಕೂ ಹೆಚ್ಚು ರಾಗಿ ಚೀಲವಿರುತ್ತದೆ. ಈ ತಿಂಗಳ 14ರವರೆಗೆ ರಾಗಿ ಖರೀದಿಗೆ ಸರ್ಕಾರ ದಿನಾಂಕ ನಿಗಧಿಪಡಿಸಿದ್ದಾರೆ ಆದರೆ ನಾವು ಮಾರ್ಚ್ ಅಂತ್ಯವರೆಗೂ ಮುಂದುವರೆಸಲು ಮನವಿ ಮಾಡಿದ್ದೇವೆ,
-ನಂಜಪ್ಪ, ರಾಗಿ ಖರೀದಿ ಕೇಂದ್ರದ ವ್ಯವಸ್ಥಾಪಕ.
ಇಬ್ಬರು ಮೂವರು ಸೇರಿ ಟ್ರ್ಯಾಕ್ಟರ್ ನಲ್ಲಿ ರಾಗಿ ತಂದಿದ್ದೇವೆ, ರಾತ್ರಿ ಇಡೀ ಚಳಿಯಲ್ಲಿ ನಲುಗಿದ್ದೇವೆ, ಟ್ರಾಕ್ಟರ್ ಗಳ ಟೈರುಗಳು ವೀಕ್ ಆಗಿ ಯಾವಾಗ ಬರೆಸ್ಟ್ ಆಗುತ್ತವೆ ಎಂಬ ಬೀತಿಯಲ್ಲಿದ್ದೇವೆ.
-ನಾಗರಾಜ್, ಟ್ರ್ಯಾಕ್ಟರ್ ಚಾಲಕ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ