ಚಿಕ್ಕನಾಯಕನಹಳ್ಳಿ : ದಕ್ಕಲಿಗರಕೇರಿಗೆ ವಿದ್ಯುತ್ ಸಂಪರ್ಕ

 ಚಿಕ್ಕನಾಯಕನಹಳ್ಳಿ :

      ಹಲವು ದಶಕಗಳಿಂದ ವಿದ್ಯುತ್ ಬೆಳಕನ್ನೆ ಕಾಣದ ದಕ್ಕಲಿಗ ಸಮುದಾಯದ ಮನೆಗಳಿಗೆ ಪುರಸಭೆ ಸದಸ್ಯರ ಹಾಗೂ ಮುಖ್ಯಾಧಿಕಾರಿಗಳ ಇಚ್ಚಾ ಶಕ್ತಿಯಿಂದ ಪಟ್ಟಣದ ಲೈನ್ ವಿದ್ಯುತ್ ಸಂಪರ್ಕ ಸಿಕ್ಕಿದ್ದು 23ನೇ ವಾರ್ಡ್ ಗಾಂಧಿನಗರದಲ್ಲಿ ವಿದ್ಯುತ್ ದೀಪಗಳು ಬೆಳಗುತ್ತಿರುವುದನ್ನು ಕಂಡು ಇಲ್ಲಿನ ನಿವಾಸಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.

      ಪಟ್ಟಣದ 23ನೇ ವಾರ್ಡ್ ನಲ್ಲಿರುವ ಗಾಂಧಿನಗರದಲ್ಲಿ 15 ವರ್ಷಗಳಿಂದ ದಕ್ಕಲಿಗ ಸಮುದಾಯದ ಜನರು ವಾಸ ಮಾಡುತ್ತಿದ್ದು ಇಲ್ಲಿನ ಮನೆ ಹಾಗೂ ಗುಡಿಸಲುಗಳಿಗೆ ವಿದ್ಯುತ್ ಸಂಪರ್ಕವೆ ಇಲ್ಲವಾಗಿತ್ತು, ಹಾವು ಹಾಗೂ ಕ್ರಿಮಿ ಕೀಟಗಳಿಂದ ಇವರು ತಮ್ಮನ್ನು ತಾವು ರಕ್ಷಿಸಿಕೊಳ್ಳುವುದೆ ದೊಡ್ಡ ಸಮಸ್ಯೆಯಾಗಿತ್ತು ಇಲ್ಲಿ ಅನೇಕ ಮಕ್ಕಳು ಶಾಲೆ ಕಾಲೇಜಿಗೆ ಹೋಗುತ್ತಿದ್ದು ರಾತ್ರಿ ಸಮಯದಲ್ಲಿ ಓದಲು ಬೆಳಕೆ ಇಲ್ಲವಾಗಿತ್ತು ದಶಕಗಳಿಂದ ಓದಲು ತೀವ್ರ ಸಂಕಷ್ಟ ಎದುರಿಸುತ್ತಿದ್ದ ನಿವಾಸಿಗಳಿಗೆ ಈಗ ವಿದ್ಯುತ್ ಸಂಪರ್ಕ್ ಸಿಕ್ಕಿದೆ.

      ಇಚ್ಚಾಶಕ್ತಿಯ ಫಲ 23ನೇ ವಾರ್ಡ್ ನಲ್ಲಿ ಗೆಲುವು ಸಾದಿಸಿದ ಉಮಾ ಪರಮೇಶ್ವ್ ಗೆದ್ದ ದಿನದಿಂದ ಗಾಂಧಿನಗರಕ್ಕೆ ವಿದ್ಯುತ್ ಸೌಲಭ್ಯ ಕಲ್ಪಿಸುವುದಾಗಿ ಭರವಸೆ ನೀಡಿದ್ದರು, ಪುರಸಭೆ ಮುಖ್ಯಧಿಕಾರಿ ಹಾಗೂ ಬೆಸ್ಕಾಂ ರವರ ಸಹಾಯದಿಂದ ಗಾಂಧಿನಗರದ ಬೀದಿ ಹಾಗೂ ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap