ತಿಪಟೂರು
ವಿಕಲ ಚೇತನರು ಯಾವುದರಲ್ಲೂ ಕಡಿಮೆ ಇಲ್ಲ, ಅವರು ಮುಖ್ಯವಾಹಿನಿಗೆ ತರಲು ಸರ್ಕಾರದ ಕಾರ್ಯಕ್ರಮಗಳ ಜೊತೆ ಎಲ್ಲರೂ ಪ್ರತ್ನಿಸಬೇಕೆಂದು ಬಿ.ಸಿ.ನಾಗೇಶ್ ತಿಳಿಸಿದರು.
ನಗರದ ಆರ್ಯಬಾಲಿಕ ಶಾಲೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು 2015-16, 2016-17ನೇ ಜಿಲ್ಲಾ ಪಂಚಾಯತ್ ವಿಕಲಚೇತನ ಪುನರ್ವಸತಿ ಕಾರ್ಯಕ್ರಮದಡಿಯಲ್ಲಿ ಶೇಕಡ 3 ರ ಅನುದಾನದಲ್ಲಿ ಸುಮಾರು 6.88 ಲಕ್ಷ ರೂಗಳನ್ನು ವಿನಯೋಗಿಸಿ ವಿವಿಧ ಸವಲತ್ತುಗಳ ವಿತರಣಾ ಕಾರ್ಯಕ್ರಮದಲ್ಲಿ ಆಯ್ದ ಅಭ್ಯರ್ಥಿಳಿಗೆ ದ್ವಿಚಕ್ರವಾಹನ, ಕುರಿ, ಹಸು ಸಾಗಾಣಿಕೆ, ವ್ಯಾಪಾರ ಮತ್ತಿತರ ಯೋಜನೆಗಳಿಗೆ ಸಂಬಂಧಿಸಿದಂತೆ ವಿಕಲಚೇತನರಿಗೆ ನೀಡುವ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಶಾಸಕ ಬಿ.ಸಿ.ನಾಗೇಶ್ ಹುಟ್ಟುವ ಪ್ರತಿಯೊಬ್ಬ ಮಾನವರು ಸಾಧಕರೆ ಜ್ಮತಹವಾಗಿ ಎಲ್ಲರೂ ಸಾಧಕರೆ ಆದರೆ ವಿಕಲಚೇತನರು ಯಾವುದರಲ್ಲೂ ಕಡಿಮೆ ಇಲ್ಲ ಭಗವಂತನು ಒಂದನ್ನು ಕಿತ್ತುಕೊಂಡು ಇನ್ನೊಂದರಲ್ಲಿ ಜ್ಞಾನವನ್ನು ಆ ವಿಶೇಷ ಚೇತನವನ್ನು ನೀಡಿರುತ್ತಾನೆ ಅದಕ್ಕೆ ಅವರನ್ನು ವಿಶೇಷ ಚೇತನರು ಎಂದು ಕರೆಯುತ್ತೇವೆ. ಸರ್ಕಾರಿ ಸೌಲಭ್ಯವನ್ನು ಬಳಸಿಕೊಂಡು ನೀವು ಸಹ ಸಾಧನೆಮಾಡಿ ಸಮಾಜದ ಮುಖ್ಯವಾಹಿನಿಗೆ ಬರಬೇಕೆಂದು ಕರೆ ನೀಡಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಜಿ.ಪಂ ಸದಸ್ಯ ನಾರಾಯಣ್ ಕೈಕಾಲುಗಳು ಸರಿಯಿರುವ ನಾವುಗಳೇ ಏನನ್ನು ಸಾಧಿಸದಿರುವಾಗ ಮೊನ್ನತಾನೆ ಪತ್ರಿಕೆಯಲ್ಲಿ ನೋಡಿದಹಾಗೆ ಕೈಇಲ್ಲದ ವಿಮಾನದ ಪೈಲೆಟ್ ಒಬ್ಬಳು ತನ್ನ ಕಾಲುಗಳನ್ನೇ ಬಳಸಿ ವಿಮಾನವನ್ನು ಚಾಲನೆ ಮಾಡುತ್ತಿದ್ದಾಳೆ ಅದರೆಂತೆ ನೀವು ಸಹ ಛಲದಿಂದ ಸವಲತ್ತುಗಳನ್ನು ಬಳಸಿಕೊಂಡು ಅಭಿವೃದ್ಧಿಹೊಂದಬೇಕೆಂದರು.
ಜಿ.ಪಂ ಸದಸ್ಯರಾದ ಮಮತ ಉಮಾಮಹೇಶ್ ಮಾತನಾಡಿ ಅಂಗವೈಕಲ್ಯವಿರುವುದು ದೇಹಕ್ಕೆಮಾತ್ರ ಮನಸ್ಸಿಗೆ ಅಲ್ಲ, ಅಂಗವೈಕಲ್ಯವಿದೆ ಎಂದು ಮನಸ್ಸಿಗೆ ಹಾಕಿಕೊಳ್ಳದೇ ದೃಡವಾದ ಮನಸ್ಸಿನಿಂದ ಉನ್ನತ ಗುರಿಯನ್ನಿಟ್ಟುಕೊಂಡು ಮುನ್ನಡೆದರೆ ಏನನ್ನಾದರು ಸಾಧಿಸಬುಹುದೆಂದು ವಿಕಲಚೇತನರಿಗೆ ಸ್ಪೂರ್ತಿ ತುಂಬಿದರು.
ಕಾರ್ಯಕ್ರಮದಲ್ಲಿ ಸಿ.ಡಿ.ಪಿ.ಓ ಓಂಕರಾಪ್ಪನವರು ಪ್ರಸ್ತಾವಿಕ ನುಡಿಗಳನ್ನಾಡಿದರು, ತಾ.ಪಂ ಇ.ಒ ಮದನ್ ಮೋಹನ್, ಬಿ.ಇ.ಓ ಮಂಗಳ ಗೌರಮ್ಮ, ಬಿ.ಜೆ.ಪಿಯ ರಾಜ್ಯ ಎಸ್.ಸಿ.ಮೋರ್ಜಾದ ಉಪಾಧ್ಯಕ್ಷ ಗಂಗರಾಜು, ತಾಲ್ಲೂಕು ಅಂಗವುಇಕರ ಸಂಗದ ಅಧ್ಯಕ್ಷ ಹಿನಾಯತ್, ಮುಂತಾದವರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
