ಕೊರಟಗೆರೆ
ನೇರ, ನಿಷ್ಠುರ, ನಡೆ, ನುಡಿಗಳಿಂದ ಸಮಾಜದಲ್ಲಿನ ಮೂಢನಂಬಿಕೆಯನ್ನು ಹೊಗಲಾಡಿಸಲು ಶ್ರಮಿಸಿದ ಮಹಾನ್ ವಚನಗಾರ ನಿಜಶರಣ ಅಂಬಿಗರ ಚೌಡಯ್ಯ ಎಂದು ಕೊರಟಗೆರೆ ತಾಸಿಲ್ದಾರ್ ಮಂಜುನಾಥ್ ಅಭಿಪ್ರಾಯಪಟ್ಟರು.
ಅವರು ತಾಲೂಕ ಕಚೇರಿಯಲ್ಲಿ ಆಯೋಜಿಸಲಾಗಿದ್ದ ಅಂಬಿಗ ಚೌಡಯ್ಯ ಜಯಂತಿ ಹಾಗೂ ಡಾಕ್ಟರ್ ಶಿವಕುಮಾರ ಸ್ವಾಮೀಜಿ ಅವರ ಜಯಂತೋತ್ಸವ ಆಚರಣೆ ನಂತರ ಮಾತನಾಡಿ ನಿಜಶರಣ ಅಂಬಿಗರ ಚೌಡಯ್ಯ ಹಾಗೂ ನಡೆದಾಡುವ ದೇವರು , ಶೈಕ್ಷಣಿಕ ದಾಸೋಹಿ ಶಿವಕುಮಾರ ಸ್ವಾಮೀಜಿಯವರ ತತ್ವ ಸಿದ್ಧಾಂತ ಹಾಗೂ ಆದರ್ಶಗಳು ಸಮಾಜದಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಅಂಬಿಗರ ಚೌಡಯ್ಯನವರು ಕೇವಲ ಗಂಗಾಮತ ಸಮಾಜಕ್ಕೆ ಸೀಮಿತವಾದವರಲ್ಲ, ಇಡೀ ಮನುಕುಲಕ್ಕೆ ಮಾದರಿಯಾಗಿದ್ದಾರೆ, ಇಂತಹವರ ವಿಚಾರಧಾರೆಗಳನ್ನು ಯುವಕರಿಗೆ ಮುಟ್ಟಿಸುವ ಕಾರ್ಯವನ್ನು ಎಲ್ಲರೂ ಕೈಗೊಳ್ಳಬೇಕಿದೆ,
ಯಾರಿಗೂ ಹೆದರದೆ, ಆಳುಕದೇ ಸಮಾಜದ ಅಂಕುಡೊಂಕುಗಳನ್ನು ತಿದ್ದಿದವರು ಕಾಯಕ ನಿಷ್ಠೆ ಉಳ್ಳವರು, ಹಸಿದವರಿಗೆ ಅನ್ನ ಕೊಡಿ, ದುಖಃದಲ್ಲಿದ್ದವರಿಗೆ ಸಾಂತ್ವಾನ ಹೇಳಿ, ಕಷ್ಟದಲ್ಲಿದ್ದವರಿಗೆ ಸಹಾಯಮಾಡಿ ಎಂದು ತಮ್ಮ ವಚನದ ಮೂಲಕ ಜಗತ್ತಿಗೆ ಸಾರಿದವರು ,ಚೌಡಯ್ಯ ನೇರ, ನಿಷ್ಠುರ, ನಡೆ, ನುಡಿಗಳಿಂದ ಸಮಾಜದಲ್ಲಿನ ಅಸ್ಪøಶ್ಯತೆ ಹಾಗೂ ಮೂಢನಂಬಿಕೆಯನ್ನು ಹೊಗಲಾಡಿಸಲು ಶ್ರಮಿಸಿದ ಮಹಾನ್ ವಚನಗಾರ ನಿಜಶರಣ ಅಂಬಿಗರ ಚೌಡಯ್ಯ ಎಂದದರು.
ನಡೆದಾಡುವ ದೇವರು ಶಿಕ್ಷಣಕ್ಕೆ ತನ್ನದೇ ಆದಂತ ಕೊಡುಗೆ ನೀಡಿ ನಿರಂತರ ದಾಸೋಹವನ್ನು ಮುನ್ನಡೆಸಿಕೊಂಡು ಬಂದಿರುವಂತಹ, ಶೈಕ್ಷಣಿಕ ಹಾಗೂ ಧಾರ್ಮಿಕವಾಗಿ ತನ್ನದೇ ಆದಂತ ದೊಡ್ಡ ಕೊಡುಗೆ ನೀಡಿದ ಶಿವಕುಮಾರ ಸ್ವಾಮಿ ಅವರ ಆದರ್ಶ ತತ್ವ ಸಿದ್ಧಾಂತ ಜನ ಅಳವಡಿಸಿಕೊಂಡರೆ ಆರೋಗ್ಯಕರ ಸಮಾಜ ನಿರ್ಮಾಣವಾಗಲಿದೆ ಎಂದರು.
12ನೇ ಶತಮಾನದ ಶರಣರ ಸಮಕಾಲಿನಲ್ಲಿ ಬಸವಣ್ಣನವರ ಅನುಯಾಯಿಯಾಗಿ ಸಾಮಾಜಿಕ ಅಸಮಾನತೆ ವಿರುದ್ಧ ಕ್ರಾಂತಿಯ ಚಳುವಳಿ ಸಾರಿದರು ಅವರು ತಮ್ಮ ವಚನಗಳಲ್ಲಿ ಸಮಾಜದ ಅಂಕು ಡೊಂಕುಗಳ ವಿರುದ್ಧ ಕಟುವಾಗಿ ಟೀಕಿಸಿದರೂ, ಅವರ ಮಾತುಗಳಲ್ಲಿ ಸಾಮಾಜಿಕ ಕಾಳಜಿ ಕಾಣುತ್ತಿತ್ತು.ಅವರ ವಚನಗಳಲ್ಲಿನ ಭಾವ ಅನ್ಯಾಯ ಮತ್ತು ಅಸಮಾನತೆಯ ವಿರುದ್ಧ ಕಟುವಾಗಿ ಟೀಕಿಸುತ್ತಿದ್ದರು ಇಂತಹ ನಿಜಶರಣ ಅಂಬಿಗರ ಚೌಡಯ್ಯ ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಾವೆಲ್ಲರೂ ನಡೆದಾಗ ಬದುಕು ಸಾರ್ಥಕವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಗ್ರೇಡ್ 2 ತಹಸಿಲ್ದಾರ್ ರಾಮಪ್ರಸಾದ್, ಕಸಬಾ ಆರ್ ಐ ಬಸವರಾಜು, ಕಸಬಾ ಉಪ ತಾಸಿಲ್ದಾರ್ ವೆಂಕಟರಂಗನ್ , ಎಲೆಕ್ಷನ್ ಶ್ರೀಸೇದಾರ್ ಮಂಜುನಾಥ್ ಸೇರಿದಂತೆ ಹಲವಾರು ಹಾಜರಿದ್ದರು.
