ಚಿಕ್ಕನಾಯಕನಹಳ್ಳಿ :
ಪರವಾನಿಗೆ ಇಲ್ಲದೆ ಅಕ್ರಮವಾಗಿ 4140 ಲೀಟರ್ ಮದ್ಯ ಸಾಗಿಸುತ್ತಿದ್ದ ವ್ಯಕ್ತಿ ಹಾಗೂ ಬೈಕ್ನ್ನು ಚಿಕ್ಕನಾಯಕಹಳ್ಳಿ ಅಬಕಾರಿ ಇಲಾಖೆ ವಶಪಡಿಸಿಕೊಂಡು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ತುಮಕೂರು ಜಿಲ್ಲೆ ಹಾಗೂ ತಿಪಟೂರು ಅಬಕಾರಿ ಉಪ ಅಧೀಕ್ಷಕರ ಮಾರ್ಗದರ್ಶನದಲ್ಲಿ ಚಿಕ್ಕನಾಯಕನಹಳ್ಳಿ ಅಬಕಾರಿ ಇಲಾಖೆಯವರು ಟಿ ತಾಂಡ್ಯ ಹರೇನಹಳ್ಳಿ ರಸ್ತೆಯ ರಂಗನೇಹಳ್ಳಿ ಕ್ರಾಸ್ ಬಳಿ ಸುಜಕಿ ಕಂಪನಿಯ ದ್ವಿಚಕ್ರ ವಾಹನದಲ್ಲಿ ಸುವ್ವಾಲಿ ತಾಂಡ್ಯದ ಕಿರಣ್ ಕುಮಾರ್ ಎಸ್ ಎಂಬುವವರು ಪರವಾನಗಿ ಇಲ್ಲದೆ ಅಕ್ರಮವಾಗಿ ಮದ್ಯ ಸಾಗಿಸುತ್ತಿರುವುದನ್ನು ಖಚಿತ ಮಾಹಿತಿ ಮೇರೆಗೆ ತಿಳಿದು ಅಕ್ರಮವಾಗಿ ಸಾಗಿಸುತ್ತಿದ್ದ ದ್ವಿಚಕ್ರ ವಾಹನ ಹಾಗೂ ಮದ್ಯವನ್ನು ಜಪ್ತು ಪಡಿಸಿಕೊಂಡಿದ್ದಾರೆ.
ದಾಳಿಯಲ್ಲಿ ಅಬಕಾರಿ ನಿರೀಕ್ಷಕರಾದ ಗಂಗರಾಜು ಹೆಚ್.ಟಿ, ಅಬಕಾರಿ ಉಪನಿರೀಕ್ಷಕರಾದ ಆಶಾ, ಪೂಜಾ, ಅಬಕಾರಿ ಇನ್ಸ್ ಪೆಕ್ಟರ್ ಗಳಾದ ಕೃಷ್ಣಮೂರ್ತಿ, ರಾಜಕುಮಾರ, ರಮೇಶ, ಸಿಬ್ಬಂದಿ ಮಂಜುನಾಥ, ಚಿದಾನಂದ ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ