ಚಿಕ್ಕನಾಯಕನಹಳ್ಳಿ :
ತಿಪಟೂರು, ಚಿಕ್ಕನಾಯಕನಹಳ್ಳಿ ಹಾಗೂ ತುರುವೇಕೆರೆ ತಾಲ್ಲೂಕುಗಳ ರೈತರಿಗೆ ಅನುಕೂಲವಾಗುವಂತೆ ಸುಮಾರು 25ಸಾವಿರ ಐಪಿ ಸೆಟ್‍ಗಳಿಗೆ ವಿದ್ಯುತ್ ನೀಡಲು ಅಗತ್ಯವಿರುವ ವಿದ್ಯುತ್ ಪರಿವರ್ತಕಗಳನ್ನು ಆಳವಡಿಸಲು ಅನುದಾನಕ್ಕಾಗಿ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಶಾಸಕ ಜೆ.ಸಿ.ಮಾಧುಸ್ವಾಮಿ ತಿಳಿಸಿದರು.
ಪಟ್ಟಣದ ಬೆಸ್ಕಾಂ ಇಲಾಖೆಯ ವಿದ್ಯುತ್ ಪರಿವರ್ತಕಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಅಧಿಕವಾದ ಒತ್ತಡವಿದ್ದ ಕಾರಣ 10ಕೆ.ವಿ ಇದ್ದಂತಹ ವಿದ್ಯುತ್ ಪರಿವರ್ತಕವನ್ನು ಬದಲಾಯಿಸಿ 20ಕೆ.ವಿ.ಯ ವಿದ್ಯುತ್ ಪರಿವರ್ತಕವನ್ನು ಅಳವಡಿಸುವ ಕೆಲಸವನ್ನು ಮಾಡಿದ್ದು, ಇನ್ನು ಮುಂದೆ ನಮ್ಮ ತಾಲ್ಲೂಕಿನ ರೈತರಿಗೆ ಕನಿಷ್ಟ ಪಕ್ಷ 7 ಗಂಟೆಗಳ ವಿದ್ಯುತ್ ನೀಡಬಹುದಾಗಿದ್ದು ಪಟ್ಟಣದಲ್ಲಿ ವಿದ್ಯುತ್ ವ್ಯತ್ಯಯವಾಗುವುದಿಲ್ಲ ಎಂದರು.
ಇಷ್ಟು ದಿನ ನಮಗೆ ವಿದ್ಯುತ್ ಸರಬರಾಜಿನಲ್ಲಿ ತೊಂದರೆಯಾಗಿತ್ತು. ಆದ್ದರಿಂದ ಈಗ ಕೆಪಿಟಿಸಿಎಲ್ ಹಾಗೂ ಬೆಸ್ಕಾಂರವರು ಈ ವಿದ್ಯುತ್ ಘಟಕದ ಶಕ್ತಿಯನ್ನು ಹೆಚ್ವಿಸಿದ್ದು, ಅದೇ ರೀತಿ ಇನ್ನು 3 ಘಟಕಗಳಾದ ಹಂದನಕೆರೆ. ಹುಳಿಯಾರು ಘಟಕಗಳನ್ನು ಹೆಚ್ಚು ಮಾಡುವ ಕೆಲಸ ಮಾಡಲಾಗುತ್ತದೆ. ಜೆ.ಸಿ.ಪುರ. ದೊಡ್ಧೇಣ್ಣೆಗೆರೆ, ಬೆಳಗುಲಿ, ಮತಿಘಟ್ಟಗಳಲ್ಲಿ ಘಟಕ ಮಾಡುತ್ತೇವೆ ಅದರಂತೆ ಬುಕ್ಕಾಪಟ್ಟಣದ ದೊಡ್ಡ ಅಗ್ರಹಾರ. ಕಾವಲುಗಳಲ್ಲೂ ಘಟಕಗಳನ್ನು ಸ್ಥಾಪಿಸುವುದರಿಂದ ಗುಣಮಟ್ಟದ ವಿದ್ಯುತ್ ಅನ್ನು ನೀಡುವ ಕೆಲಸ ಮಾಡುತ್ತೇವೆ ಎಂದರು.
ಕೇಂದ್ರದ ಯೋಜನೆಯಂತೆ 7.5 ಹೆಚ್‍ಪಿ ಐಪಿ ಸೆಟ್ ಇರುವ ರೈತರಿಗೆ ವಿದ್ಯುತ್ ಪರಿವರ್ತಕಗಳನ್ನು ಆಳವಡಿಸುವ ಕೆಲಸ ಮಾಡುತ್ತೇವೆ. ಈ ಬಾಗಕ್ಕೆ 12 ಕೋಟಿ ಅನುದಾನವನ್ನು ತಂದಿದ್ದೇನೆ. ಒಟ್ಟು 6 ಘಟಕಗಳನ್ನು ಅಭಿವೃದ್ಧಿ ಮಾಡಿದ್ದೇನೆ ಅದರಂತೆ ಎಲ್ಲಾ ತಾಲ್ಲೂಕಿನಲ್ಲಿ ಸೇರಿ 29 ಎಂಯುಎಸ್ ಎಸ್ ಪ್ರಾರಂಭಿಸುತ್ತಿದ್ದೇವೆ ಎಂದರು.
ಈ ಸಂದರ್ಭದಲ್ಲಿ ಕೆಪಿಟಿಸಿಎಲ್ ಮುಖ್ಯ ಇಂಜಿನಿಯರ್ ಆದಿನಾರಾಯಣ. ಕೆಪಿಟಿಸಿಎಲ್‍ನ ಅಧೀಕ್ಷಕ ಅಲ್ಲಾ ಭಕ್ಷ್ ಸೇರಿದಂತೆ ಮತ್ತಿತರರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ