ಚಿ.ನಾ.ಹಳ್ಳಿ : ಕೊರೊನಾ ಸೋಂಕಿತರಿಗೆ ಉಚಿತ ವಾಹನ ಸೇವೆ!

ಚಿಕ್ಕನಾಯಕನಹಳ್ಳಿ :

      ಕೊರೊನಾ ಸೋಂಕಿತರನ್ನು ವಿವಿಧ ಗ್ರಾಮಗಳಿಂದ ಇಲ್ಲಿನ ಸಾರ್ವಜನಿಕ ಆಸ್ಪತ್ರೆಗೆ ಕರೆತಂದು, ಚಿಕಿತ್ಸೆ ಕೊಡಿಸುವುದು, ಗುಣಮುಖರಾದವರನ್ನು ಅವರ ಊರುಗಳಿಗೆ ಕರೆದೊಯ್ಯುವ ಕಾರ್ಯವನ್ನು ‘ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ’ ಸಂಸ್ಥೆಯು ಉಚಿತವಾಗಿ ಮಾಡುತ್ತಿದ್ದಾರೆ.

      ತಾಲೂಕಿನಲ್ಲಿ ದಿನೇ ದಿನೇ ಕೊರೊನಾ ಸೋಂಕು ಹೆಚ್ಚಾಗುತ್ತಿದ್ದು, ಸಮುದಾಯಕ್ಕೂ ಹರಡುತ್ತಿದೆ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವ್ಯವಹಾರವು ಲಾಕ್‍ಡೌನ್ ಮುಗಿಯುವರೆಗೆ ಸ್ಥಗಿತಗೊಳಿಸಲಾಗಿದೆ ಹಾಗಾಗಿ ಸಂಸ್ಥೆಯ ವಾಹನವನ್ನು ಕೊರೋನ ಸೊಂಕಿತರಿಗೆ ಅನುಕೂಲವಾಗಲು ಮೀಸಲಿಡಲಾಗಿದೆ, ಇದರಿಂದ ಇದುವರೆಗೆ 60 ಕ್ಕೂ ಹೆಚ್ಚಿನ ಮಂದಿ ಕೊರೋನಾ ಪೀಡಿತರಿಗೆ ನೆರವಾಗಿದೆ. ಕೊರೊನಾ ಶೋಂಕಿತರನ್ನು ವಿವಿಧ ಗ್ರಾಮಗಳಿಂದ ಕರೆತಂದು, ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಗೊಳಪಡಿಸಲಾಗಿದೆ. ಅದೇ ರೀತಿ ಗುಣಮುಖರಾದವರನ್ನು ಅವರ ಮನೆಗಳಿಗೆ ಕಳುಹಿಸಿಕೊಡಲಾಗಿದೆ.

      ಸಂಪೂರ್ಣ ಲಾಕ್‍ಡೌನ್ ಇರುವುದರಿಂದ ಹಳ್ಳಿಯಿಂದ ಯಾವುದೇ ವಾಹನವು ತಾಲ್ಲೂಕಿನ ಸಾರ್ವಜನಿಕ ಆಸ್ಪತ್ರೆ ಅಥವಾ ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬರಲು ಒಪ್ಪದಿರುವ ಈ ಸಂದರ್ಭ ಸಂಸ್ಥೆಯ ವಾಹನವು ಅನೇಕರಿಗೆ ಅನುಕೂಲವಾಗಿದೆ. ಮೇ.15 ರ ವರೆಗೆ ಉಚಿತ ವಾಹನದ ಸೌಲಭ್ಯವಿದ್ದು, ಕೊರೋನಾ ಸೋಂಕಿತರು ಮತ್ತು ಗುಣಮುಖರಾದರು 99013 15676 ದೂರವಾಣಿಗೆ ಕರೆ ಮಾಡಿ ಸೌಲಭ್ಯ ಪಡೆಯಬಹುದು ಎಂದು ತಾಲ್ಲೂಕು ಯೋಜನಾಧಿಕಾರಿ ಪ್ರೇಮಾನಂದ.ಎಲ್.ಬಿ ತಿಳಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link