ತುರುವೇಕೆರೆ :
ತಾಲೂಕಿನ ದಂಡಿನಶಿವರ ಹೋಬಳಿಯ ಬೀಚನಹಳ್ಳಿ ಗ್ರಾಮದ ಹೊರ ವಲಯದ ತೋಟದ ಮನೆಯ ಕಾಯಿ ಗುಡಿಸಲಿಗೆ ಆಕಸ್ಮಿಕ ಬೆಂಕಿ ಬಿದ್ದು ಕೊಬ್ಬರಿ, ತೆಂಗಿನ ಮರಗಳು ಸುಟ್ಟು ಹೋಗಿ ಸಾವಿರಾರು ರೂಪಾಯಿಗಳ ನಷ್ಟು ನಷ್ಟ ಸಂಭವಿಸಿದೆ.
ಬೀಚನಹಳ್ಳಿಯ ಸಣ್ಣಹುಚ್ಚಯ್ಯ ಅವರ ತೋಟ ಮನೆಯ ಎದುರಿನ ಕಾಯಿ ತುಂಬಿದ ಗುಡಿಸಲಿಗೆ ಬುಧವಾರ ಸಂಜೆ ಆಕಸ್ಮಿಕ ಬೆಂಕಿ ಬಿದ್ದು ಗುಡಿಸಲಿನಲ್ಲಿದ್ದ ಒಂದು ಸಾವಿರ ಕೊಬ್ಬರಿ, ಮತ್ತು ಇನ್ನಿತರ ಗೃಹಪಯೋಗಿ ವಸ್ತುಗಳು ಹಾಗು ಎರಡು ತೆಂಗಿನ ಮರಗಳು ಬೆಂಕಿಗಾಹುತಿಯಾಗಿದ್ದು ಸಾವಿರಾರು ರೂಪಾಯಿಗಳು ನಷ್ಟು ಸಂಭವಿಸಿದೆ. ಆಗೆಯೇ ಪಕ್ಕದ ಕೃಷ್ಣಮೂರ್ತಿ ಅವರ ತೋಟಕ್ಕೂ ಬೆಂಕಿಯ ಕೆನಾಲಿಗೆ ಚಾಚಿ ಎರಡು ತೆಂಗಿನ ಮರಗಳು ಸುಟ್ಟಿ ಹೋಗಿವೆ.
ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ ಅಧಿಕಾರಿಗಳು ಬೆಂಕಿ ನಂದಿಸಲು ಪ್ರಯತ್ನಿಸಿ ನಂದಿಸಿದ್ದಾರೆ. ಕಂದಾಯಧಿಕಾರಿ ಮತ್ತು ಗ್ರಾಮಲೆಕ್ಕಾಧಿಕಾರಿಗಳು ಗುರುವಾರ ಬೆಳಗ್ಗೆ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
