ಬೆಂಗಳೂರು:

ಕಳೆದ ವರ್ಷಕ್ಕೆ ಹೋಲಿಸಿದ್ರೇ, ಹವಾಮಾನದ ವೈಪರಿತ್ಯದಿಂದಾಗಿ, ಈ ಬಾರಿ ನಾಲ್ಕು ತಿಂಗಳು ಬೇಸಿಗೆ ಹೆಚ್ಚಿರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿ, ಶಾಕ್ ನೀಡಿತ್ತು. ಈ ನಂತ್ರ, ಇದೀಗ ವಾಡಿಕೆಯಷ್ಟೇ ಬೇಸಿಗೆ ಬಿಸಿ ಇರಲಿದೆ.
ಈ ಬಾರಿ ರಣಬಿಸಿಲು ಕಾಡುವುದಿಲ್ಲ ಎಂಬುದಾಗಿ ಹೇಳುವ ಮೂಲಕ, ರಾಜ್ಯದ ಜನತೆಗೆ ಶುಭಸುದ್ದಿಯನ್ನು ನೀಡಿದೆ.
ಈ ಬಗ್ಗೆ ಮಾಹಿತಿ ನೀಡಿರುವಂತ ಭಾರತೀಯ ಹವಾಮಾನ ಇಲಾಖೆ ರಾಜ್ಯದಲ್ಲಿ ಈ ಬಾರಿ ಬೇಸಿಗೆಯಲ್ಲಿ ವಾಡಿಕೆಯಷ್ಟೇ ತಾಪಮಾನ ಇರಲಿದೆ. ಉಷ್ಣಾಂಶ ಒಂದೆರಡು ಡಿಗ್ರಿ ಸೆಲ್ಸಿಯಸ್ ಇಳಿಕೆ ಕೂಡ ಆಗುವ ಸಾಧ್ಯತೆ ಇದೆ ಎಂಬುದಾಗಿ ತಿಳಿಸಿದೆ.
ಹವಾಮಾನ ತಜ್ಞ ಡಾ.ಜಿಎಸ್ ಶ್ರೀನಿವಾಸ್ ರೆಡ್ಡಿಯವರು, ರಾಜ್ಯದ ಕೆಲ ಜಿಲ್ಲೆಗಳಲ್ಲಿ ಕೆಲವು ದಿನ ಮಾತ್ರ ತಾಪಮಾನದಲ್ಲಿ ಏರಿಕೆಯಾಗಲಿದೆ. ಆದ್ರೇ ಕೆಲವೆಡೆ ವಾಡಿಕೆಗಿಂತ ತಾಪಮಾನ ಇಳಿಕೆಯೂ ಆಗುವ ಸಾಧ್ಯತೆ ಇದೆ ಎಂದು ಹೇಳುವ ಮೂಲಕ, ರಾಜ್ಯದ ಜನರಿಗೆ ತಣ್ಣನೆಯ ಸುದ್ದಿ ನೀಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








