ವಿಧಾನ ಮಂಡಲ : ಸದನಕ್ಕೆ ಬನ್ನಿ ಗಿಫ್ಟ್‌ ಪಡೆಯಿರಿ : ಸ್ಪೀಕರ್‌

ಬೆಳಗಾವಿ:

     ವಿಧಾನಸಭಾ ಕಲಾಪದಲ್ಲಿ ಭಾಗವಹಿಸಲು ಶಾಸಕರನ್ನು ಉತ್ತೇಜಿಸುವ ನಿಟ್ಟಿನಲ್ಲಿ ಸ್ಪೀಕರ್ ಯುಟಿ ಖಾದರ್ ಅವರು ಹೊಸ ಕ್ರಮವೊಂದನ್ನು ಘೋಷಿಸಿದ್ದಾರೆ. ಈ ಮೂಲಕ ಸದನಕ್ಕೆ ಬೇಗ ಬರುವ ಶಾಸಕರಿಗೆ ಇನ್ಮುಂದೆ ವಿಶೇಷ ಉಡುಗೊರೆ ಸಿಗಲಿದೆ. ಅಲ್ಲದೆ, ತಡವಾಗಿ ಅಥವಾ ಗೈರಾದ ಸದಸ್ಯರಿಗೆ ಕೂಡ ಪ್ರಶಸ್ತಿ ನೀಡಲಾಗುತ್ತದೆ ಎಂದರು.

  ಇಂದಿನ ಅಧಿವೇಶನ ಆರಂಭಗೊಳ್ಳಲಿರುವ ಹಿನ್ನೆಲೆ ಸುವರ್ಣ ವಿಧಾನಸೌಧದಲ್ಲಿ ವಿಧಾನಸಭೆ ಸಭಾಧ್ಯಕ್ಷ ಯು.ಟಿ ಖಾದರ್ ಹಾಗೂ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಜಂಟಿ ಸುದ್ದಿಗೋಷ್ಠಿ ನಡೆಸಿದರು.

    ಈ ಕುರಿತು ಭಾನುವಾರ ಮಾತನಾಡಿದ ಖಾದರ್, ಕೋರಂ ಬೆಲ್ ಒತ್ತುವ ಮೊದಲು ವಿಧಾನಸಭೆ ಸಭಾಂಗಣಕ್ಕೆ ಪ್ರವೇಶಿಸುವ ಶಾಸಕರಿಗೆ ರಾಜ್ಯ ಮತ್ತು ರಾಷ್ಟ್ರದ ಲಾಂಛನಗಳೊಂದಿಗೆ ವಿನ್ಯಾಸಗೊಳಿಸಲಾದ ಟೀ ಕಪ್ ಮತ್ತು ಸಾಸರ್‌ಗಳನ್ನು ನೀಡಲಾಗುತ್ತದೆ. ಅತಿ ಹೆಚ್ಚು ಗೈರು ಆದವರಿಗೆ ಬೇಗ ಬರುವಂತೆ ಪ್ರಶಸ್ತಿ ನೀಡುತ್ತೇವೆ ಎಂದು ಹೇಳಿದರು.

ವಿಧಾನಸಭೆಯ ಹಾಜರಾತಿಯನ್ನು ಚುರುಕುಗೊಳಿಸಲು ನಾವು ಪ್ರಯತ್ನಿಸಬೇಕು. ಈ ಬಾರಿ ಅಧಿವೇಶನಕ್ಕೆ ಶಿಸ್ತುಬದ್ಧವಾಗಿ ಹಾಜರಾಗುವವರಿಗೆ ಪ್ರತಿನಿತ್ಯ ಟೀ ಕಪ್ ಮತ್ತು ಸಾಸರ್ ನೀಡಲಾಗುವುದು ಎಂದು ಖಾದರ್ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap