ಅಡುಗೆ ಎಣ್ಣೆ ಬೆಲೆ ಶೇ 15ರವರೆಗೆ ತಗ್ಗಿಸಿದ ಕಂಪನಿಗಳು

ನವದೆಹಲಿ: 

ಅಡುಗೆ ಎಣ್ಣೆ ಮೇಲಿನ ಗರಿಷ್ಠ ರಿಟೇಲ್‌ ದರವನ್ನು (ಎಂಆರ್‌ಪಿ) ಪ್ರಮುಖ ಕಂಪನಿಗಳು ಶೇಕಡ 10ರಿಂದ ಶೇ 15ರವರೆಗೆ ಇಳಿಕೆ ಮಾಡಿವೆ ಎಂದು ಸಾಲ್ವೆಂಟ್‌ ಎಕ್ಸ್‌ಟ್ರ್ಯಾಕ್ಟರ್ಸ್‌ ಅಸೋಸಿಯೇಷನ್‌ ಆಫ್‌ ಇಂಡಿಯಾ (ಎಸ್‌ಇಎ) ಸೋಮವಾರ ಹೇಳಿದೆ.

 ಅದಾನಿ ವಿಲ್ಮರ್‌, ರುಚಿ ಸೋಯಾ, ಇಮಾಮಿ, ಜೆಮಿನಿ ಕಂಪನಿಗಳು ಅಡುಗೆ ಎಣ್ಣೆ ಬೆಲೆಯನ್ನು ಇಳಿಕೆ ಮಾಡಿರುವ ಪ್ರಮುಖ ಕಂಪನಿಗಳು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಕೇಂದ್ರ ಆಹಾರ ಕಾರ್ಯದರ್ಶಿ ಸುಧಾಂಶು ಪಾಂಡೆ ಅವರು ಈಚೆಗಷ್ಟೇ ಉದ್ಯಮ ವಲಯದ ಪ್ರಮುಖರ ಸಭೆ ಕರೆದಿದ್ದರು. ಆಮದು ಸುಂಕ ಇಳಿಕೆಯ ಪ್ರಯೋಜನವನ್ನು ಗ್ರಾಹಕರಿಗೆ ವರ್ಗಾಯಿಸುವಂತೆ ಅವರು ಮನವಿ ಮಾಡಿದ್ದರು ಎಂದು ಹೇಳಿದೆ.

ಅಡುಗೆ ಎಣ್ಣೆ ದರ ತಗ್ಗಿಸಲು ಮತ್ತು ಪೂರೈಕೆ ಹೆಚ್ಚಿಸಲು ಕೇಂದ್ರ ಸರ್ಕಾರವು ಹಲವು ಕ್ರಮಗಳನ್ನು ತೆಗೆದುಕೊಂಡಿದೆ. ಸಂಸ್ಕರಿಸಿದ ತಾಳೆ ಎಣ್ಣೆ ಮೇಲಿನ ಮೂಲ ಕಸ್ಟಮ್ಸ್‌ ಸುಂಕವನ್ನು ಡಿಸೆಂಬರ್‌ 20ರಂದು ಶೇ 17.5ರಿಂದ ಶೇ 12.5ಕ್ಕೆ ಇಳಿಕೆ ಮಾಡಿದೆ. ಇದು 2022ರ ಮಾರ್ಚ್‌ವರೆಗೂ ಜಾರಿಯಲ್ಲಿ ಇರಲಿದೆ.

ಪೂರೈಕೆ ಹೆಚ್ಚಿಸುವ ಸಲುವಾಗಿ ಪರವಾನಗಿ ಇಲ್ಲದೇ 2022ರ ಡಿಸೆಂಬರ್‌ವರೆಗೆ ಸಂಸ್ಕರಿಸಿದ ತಾಳೆಎಣ್ಣೆ ಆಮದು ಮಾಡಲು ಸಹ ಸರ್ಕಾರವು ರಫ್ತುದಾರರಿಗೆ ಅನುಮತಿ ನೀಡಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link