ಇತ್ತೀಚಿನ ದಿನಗಳು ಅಚ್ಚೇದಿನಗಳಲ್ಲ ದೌರ್ಭಾಗ್ಯದ ದಿನಗಳು: ಕಾಂಗ್ರೆಸ್ ಜಾಹೀರಾತು

ಬೆಂಗಳೂರು

    ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ಮುಂದುವರೆಸಿದ್ದ ಕರ್ನಾಟಕ ಕಾಂಗ್ರೆಸ್‌ ‘ಕರ್ನಾಟಕಕ್ಕೆ ಮೋದಿ ಸರ್ಕಾರ ಕೊಟ್ಟ ಕೊಡುಗೆ ಚೊಂಬು’ ಎಂದು ಜಾಹೀರಾತು ನೀಡಿತ್ತು. ಶನಿವಾರ ಕೇಂದ್ರ ಸರ್ಕಾರದ ಬೆಲೆ ಏರಿಕೆ ವಿರುದ್ಧ ಜಾಹೀರಾತು ನೀಡಿ ಮತದಾರರಲ್ಲಿ ಕಾಂಗ್ರೆಸ್ ಮನವಿ ಮಾಡಿದೆ.

     ಅಚ್ಚೇದಿನಗಳಲ್ಲ ದೌರ್ಭಾಗ್ಯದ ದಿನಗಳು ಶಿರ್ಷಿಕೆಯಡಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿರುವ ಕಾಂಗ್ರೆಸ್, ಕೇಂದ್ರ ಸರ್ಕಾರದ ಆಡಳಿತದಲ್ಲಿ ಬೆಲೆ ಏರಿಕೆಯಾಗಿದ್ದ ಅಂಕಿ ಸಂಖ್ಯೆ ತಿಳಿಸಿದೆ. ಇಂಧನ, ಗ್ಯಾಸ್ ಸಿಲೆಂಡರ್, ಬೇಳೆ, ಟೀ ಪುಡಿ ಸೇರಿದಂತೆ ನಿತ್ಯ ಬಳಕೆಯ ವಸ್ತುಗಳ ಬೆಲೆ ಗಗನಕ್ಕೇರಿವೆ ಎಂದು ಜಾಹೀರಾತಿನಲ್ಲಿ ತಿಳಿಸಿದೆ.

    ಜನರು ಈ ಬೆಲೆ ವಿರುದ್ಧ ಈ ಚುನಾವಣೆಯಲ್ಲಿ ತೀರ್ಮಾನಿಸಬೇಕು. ಬಿಜೆಪಿ ಸೋಲಿಸಿ, ಬೆಲೆಯೇರಿಕೆ ನಿಲ್ಲಿಸಬೇಕು. ಕಾಂಗ್ರೆಸ್‌ಗೆ ನಿಮ್ಮ ಮತ ನೀಡುವಂತೆ ಪಕ್ಷವು ಮನವಿ ಮಾಡಿದೆ. ಈ ಮೂಲಕ ಕೇಂದ್ರ ಸರ್ಕಾರದ ಜನರಿಗೆ ಆರ್ಥಿಕ ಹೊರೆ ನೀಡಿದೆ ಎಂದು ಕಾಂಗ್ರೆಸ್ ದೂರಿದೆ.

    ಕಾಂಗ್ರೆಸ್ ಹೇಳುವಂತೆ, ಒಂದು ಲೀಟರ್ ಪೆಟ್ರೋಲ್ ದರ 100 ರೂ., ಡೀಸೆಲ್ 85 ರೂ., ಗ್ಯಾಸ್ ಸಿಲೆಂಡರ್ ಬೆಲೆ ರೂ.1100ಕ್ಕೆ ಏರಿಕೆ ಆಗಿದೆ. ಅಡುಗೆ ಎಣ್ಣೆ ಲೀಟರ್ 180 ರೂಪಾಯಿ ಇದೆ. ತೊಗರಿ ಬೇಳೆ ಕೆ.ಜಿಗೆ 200 ಇದೆ. ಟೀ ಪುಡಿ ಕೆ.ಜಿಗೆ 300 ರೂಪಾಯಿ ಇದೆ.

    ಹೀಗೆ ಬಡವರು ಸೇರಿದಂತೆ ಎಲ್ಲ ವರ್ಗದ ಜನರು ಬಳಸುವ ಇಂಧನ, ಆಹಾರ ಪದಾರ್ಥಗಳ ಬೆಲೆ ಏರಿಕೆ ಆಗಿದೆ. ಇದು ಮಧ್ಯಮ ವರ್ಗದವರನ್ನು ಆರ್ಥಿಕ ಸಂಕಷ್ಟಕ್ಕೆ ನೂಕಿದೆ. ಬಡವರು ದುಡಿದ ದುಡ್ಡು ಬುದಕು ನಡೆಸಲು ಸಾಕಾಗುತ್ತಿಲ್ಲ. ಬೆಲೆ ಏರಿಕೆಯ ಬಿಸಿ ತಟ್ಟಿದೆ.

   ಚುನಾವಣೆಯಲ್ಲಿ ಇದನ್ನೆ ಬೆಲೆ ಏರಿಕೆ ಅಸ್ತ್ರವನ್ನೇ ಮಾಡಿಕೊಂಡ ಕಾಂಗ್ರೆಸ್ ಬಿಜೆಪಿ ವಿರುದ್ಧ ಬಳಸುತ್ತಿದೆ. ಮತದಾರರನ್ನು ತನ್ನತ್ತ ಸಳೆಯುತ್ತಿದೆ.

    ಬಡವರ ಖಾತೆಗೆ ಹಣ ಹಾಕುವುದಾಗಿ ಹೇಳಿ ಹಾಕಲಿಲ್ಲ, ರೈತರ ಆದಾಯ ಡಬಲ್ ಮಾಡಲಿಲ್ಲ. ಸಮರ್ಪಕ ತೆರಿಗೆ ಹಂಚಲಿಲ್ಲ ಹೀಗೆ ಹಲವು ವಿಷಯಗಳಲ್ಲಿ ಬಿಜೆಪಿ ಕರ್ನಾಟಕದವರಿಗೆ ಚೋಂಬು ಕೊಡುಗೆ ನೀಡಿದೆ. ಹೇಳಿದಂತೆ ನಡೆದುಕೊಳ್ಳದೇ ಬಿಜೆಪಿ ಶೂನ್ಯ ಸಾಧನೆ ಮಾಡಿದೆ ಎಂದು ಶುಕ್ರವಾರ ಕಾಂಗ್ರೆಸ್ ಜರಿದಿತ್ತು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap