ಬೆಂಗಳೂರು:
ವಿಜಯ ಸಂಕಲ್ಪ ಯಾತ್ರೆಯಿಂದ ಬಿಜೆಪಿಗೆ ಜನಬೆಂಬಲ ಹೆಚ್ಚಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ನೆಲಕಚ್ಚಲಿದ್ದು ಕಾಂಗ್ರೆಸ್ ಮುಕ್ತ ಕರ್ನಾಟಕ ಆಗಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್ ಅವರು ಹೇಳಿದರು.
ಜಮಖಂಡಿ ನಗರದಲ್ಲಿ ನಡೆದ ವಿಜಯ ಸಂಕಲ್ಪ ಯಾತ್ರೆಯ ಸಾರ್ವಜನಿಕ ಸಭೆಯಲ್ಲಿ ಮಾತನಾಡಿ, ಮೋದಿಯವರ ಅಡಳಿತದಿಂದ ಭಾರತ ಪ್ರಪಂಚದಲ್ಲಿ ಅತಿ ದೊಡ್ಡ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮುತ್ತಿದೆ. ಪಕ್ಕದ ಶತ್ರುರಾಷ್ಟç ಪಾಪಿಸ್ತಾನದ ಮಸೀದಿಯಲ್ಲಿ ಮೋದಿಯಂತಹ ಪ್ರಧಾನಿಯನ್ನು ನೀಡುವಂತೆ ಪ್ರಾರ್ಥನೆ ನಡೆಯುತ್ತಿದೆ. 500ವರ್ಷದ ಸಂಘರ್ಷ ರಾಮ ಮಂದಿರ ನಿರ್ಮಾಣದ ಕನಸ್ಸು ಮೋದಿಯವರ ನೆರವೇರಿಸಿದ್ದಾರೆ ಎಂದು ತಿಳಿಸಿದರು.
ಕೋವಿಡ್ ಲಸಿಕೆ ಕಂಡು ಹಿಡಿದು ಜನರಿಗೆ ಉಚಿತವಾಗಿ ನೀಡಿ ಪ್ರಪಂಚಕ್ಕೆ ಹಂಚಿದ ಕೀರ್ತಿ ಬಿಜೆಪಿ ಸರ್ಕಾರಕ್ಕೆ ಸಲ್ಲುತ್ತದೆ ಎಂದರು.ಜಾತಿವಾದ ಹುಟ್ಟು ಹಾಕುವುದು ಕಾಂಗ್ರೆಸ್ ಹುಟ್ಟುಗುಣ- ಸಿ.ಟಿ.ರವಿ ರಾಜ್ಯದಲ್ಲಿ ಜಾತಿವಾದ ಹುಟ್ಟು ಹಾಕಿ ಜನರಲ್ಲಿ ಜಾತಿ ಬೀಜ ಬಿತ್ತುವುದು ಕಾಂಗ್ರೆಸ್ ಹುಟ್ಟುಗುಣ ವಾಗಿದ್ದರಿಂದ ಅದು ಇಂದು ಅವನತಿಯಲ್ಲಿದೆ ಎಂದು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರು ತಿಳಿಸಿದರು. ಬಿಜೆಪಿ ಯೋಜನೆಗಳು ಯಾವುದೇ ಜಾತಿಗೆ ಸೀಮಿತವಾಗದೆ ದೇಶ ಮೊದಲು ಎಂಬ ತತ್ವ ಸಿದ್ದಾಂತದ ತಳಹದಿಯಲ್ಲಿ ಬಂದಿದೆ ಎಂದರು.
ಕಾರ್ಯಕ್ರಮದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ, ಸಂಸದ ಪಿ.ಸಿ.ಗದ್ದಿಗೌಡರ, ಸಚಿವರಾದ ಮುರುಗೇಶ ನಿರಾಣಿ, ಗೋವಿಂದ್ ಕಾರಜೋಳ, ವಿಧಾನ ಪರಿಷತ್ ಸದಸ್ಯರಾದ ಹಣಮಂತ ನಿರಾಣಿ, ಪಿ.ಎಚ್.ಪೂಜಾರಿ, ಮಾಜಿ ಪರಿಷತ್ತಿನ ಸದಸ್ಯ ಜಿ.ಎಸ್.ನ್ಯಾಮಗೌಡರ, ಅರುಣ ಶಾಹಾಪೂರ, ಶ್ರೀಕಾಂತ್ ಕುಲಕರ್ಣಿ ಇತರರು ಇದ್ದರು. ಕಾರ್ಯಕ್ರಮದಲ್ಲಿ ಸಾವಿರಾರು ಕಾರ್ಯಕರ್ತರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ