ಸದನದಲ್ಲಿ ಕಾಂಗ್ರೆಸ್‌ ಸದಸ್ಯರಿಂದ ಕಿವಿ ಮೇಲೆ ಹೂ ಇಟ್ಟು ಪ್ರತಿಭಟನೆ

ಬೆಂಗಳೂರು

     ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬಜೆಟ್ ಮಂಡಿಸಲು ವಿಧಾನಸಭೆಗೆ ಬಂದ ಸಂದರ್ಭದಲ್ಲಿ ಪ್ರತಿಪಕ್ಷ ಕಾಂಗ್ರೆಸ್ ಸದಸ್ಯರು ಕಿವಿಗೆ ಹೂವಿಟ್ಟುಕೊಂಡು ಪ್ರತಿಭಟನೆ ನಡೆಸಿದ ಬೆಳವಣಿಗೆ ನಡೆಯಿತು.

    ಇಂದು ಬೆಳಿಗ್ಗೆ ಬಜೆಟ್ ಮಂಡಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಧಾನಸಭೆಗೆ ಬಂದಾಗ ತಾವಿಟ್ಟುಕೊಂಡಿದ್ದ ಕವರ್ ನಿಂದ ಹೂವುಗಳನ್ನು ತೆಗೆದುಕೊಂಡ ಕಾಂಗ್ರೆಸ್ ಸದಸ್ಯರು ಅದನ್ನು ಕಿವಿಯಲ್ಲಿಟ್ಟುಕೊಂಡರು.

    ಇದನ್ನು ನೋಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ,ಇದೇಕೆ ಎಂದು ಕೇಳಿದಾಗ ಪ್ರೆತಿಪಕ್ಷ ನಾಯಕ ಸಿದ್ದರಾಮಯ್ಯ,ಬಜೆಟ್ ಮೂಲಕ ನೀವು ಜನರ ಕಿವಿಗೆ ಹೂವು ಇಡಲು ಹೊರಟಿದ್ದೀರಿ .ಹೀಗಾಗಿ ನಾವೇ ಮುಂಚಿತವಾಗಿ ಹೂವಿಟ್ಟುಕೊಂಡಿದ್ದೇವೆ ಎಂದರು.

    ಇದು ಜಾರಿಗೊಳಿಸಲು ಸಾಧ್ಯವಾಗದ ಬಜೆಟ್.ಇದರಲ್ಲಿ ನೀವೇನು ಹೇಳಿದ್ದೀರೋ?ಅದು ಜಾರಿ ಆಗುವುದೇ ಇಲ್ಲ.ಎಲ್ಲಕ್ಕಿಂತ ಮುಖ್ಯವಾಗಿ ನೀವೇ ಮರಳಿ ಅಧಿಕಾರಕ್ಕೆ ಬರುವುದಿಲ್ಲ.ಹೀಗಾಗಿ ನಿಮಗಿಷ್ಟ ಬಂದಿದ್ದನ್ನೆಲ್ಲ ಸೇರಿಸಿಕೊಂಡು ಬಜೆಟ್ ಓದಲು ಬಂದಿದ್ದೀರಿ ಎಂದು ವ್ಯಂಗ್ಯವಾಡಿದರು.

    ಈ ಹಂತದಲ್ಲಿ ಆಡಳಿತ ಮತ್ತು ಪ್ರತಿಪಕ್ಷಗಳ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತಲ್ಲದೆ ,ಸರ್ಕಾರದ ವಿರುದ್ಧ ಪ್ರತಿಪಕ್ಷಗಳ ಸದಸ್ಯರು ಮತ್ತು ಕಾಂಗ್ರೆಸ್ ವಿರುದ್ಧ ಆಡಳಿತಾರೂಢ ಪಕ್ಷದ ಶಾಸಕರು ಪರಸ್ಪರ ಆರೋಪ ಮಾಡಿಕೊಂಡರು

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap