ಜ್ವಲಂತ ಸಮಸ್ಯೆಗಳಿಗೆ ಸಂವಿಧಾನದಿಂದ ಉತ್ತರ: ಗೃಹ ಸಚಿವ ಡಾ. ಜಿ.ಪರಮೇಶ್ವರ

ತುಮಕೂರು 

    ದೇಶದ ಸ್ವಾತಂತ್ರ್ಯ ಪೂರ್ವ ಮತ್ತು ಸ್ವಾತಂತ್ರ್ಯ ನಂತರದ ಆರಂಭದಲ್ಲಿ ಎದುರಿಸುತ್ತಿದ್ದ ಜ್ವಲಂತ ಸಮಸ್ಯೆಗಳಿಗೆ ಸಂವಿಧಾನದಿಂದ ಉತ್ತರ ಸಿಕ್ಕಿದೆ ಎಂದು ಗೃಹ ಸಚಿವ ಡಾ.‌ ಜಿ.ಪರಮೇಶ್ವರ ಅವರು ಹೇಳಿದರು.

     ಗಣರಾಜ್ಯೋತ್ಸವದ ಅಂಗವಾಗಿ ಸಿದ್ಧಾರ್ಥನಗರದ ಶ್ರೀ ಸಿದ್ಧಾರ್ಥ ಗ್ರಾಮಾಂತರ ಪ್ರೌಢಶಾಲೆಯಲ್ಲಿ ಧ್ವಜಾರೋಹಣ ನೆರವೇರಿಸಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಅವರು ಮಾತನಾಡಿದರು.

    ದೇಶದಲ್ಲಿ ಕ್ಷಾಮ, ಬಡತನ, ಅನಕ್ಷರತೆ, ನಿರುದ್ಯೋಗ ಸೇರಿದಂತೆ ಇನ್ನು ಅನೇಕ ಜ್ವಲಂತ ಸಮಸ್ಯೆಗಳನ್ನು ಎದುರಿಸಲಾಗುತ್ತಿತ್ತು. ಇಂತಹ ಅನೇಕ ಸವಾಲುಗಳಿಗೆ ಸಂವಿಧಾನ‌ದ ಮೂಲಕ ಪರಿಹಾರ ಕಂಡುಕೊಳ್ಳಲಾಯಿತು. ಆಹಾರ ಧಾನ್ಯಗಳಲ್ಲಿ ಸ್ವಾವಲಂಬನೆ ಕಂಡಿದ್ದೇವೆ. ಶೈಕ್ಷಣಿಕ‌ ಕ್ಷೇತ್ರ, ಕೃಷಿ ಕ್ಷೇತ್ರ, ಕೈಗಾರಿಕಾ ಕ್ಷೇತ್ರದಲ್ಲಿ ವೈಜ್ಞಾನಿಕವಾಗಿ ಪ್ರಗತಿ ಕಂಡಿದ್ದೇವೆ. ಇಂತಹ ಸುಸಂದರ್ಭದಲ್ಲಿ ದೇಶದ ಅಭಿವೃದ್ಧಿಗೆ ಶ್ರಮಿಸಿದ ಶಿಕ್ಷಕರು, ರೈತರು, ವಿಜ್ಞಾನಿಗಳನ್ನು ಗೌರವಿಸುವ ದಿನ ಎಂದರು.

    1947ರಲ್ಲಿ ಸ್ವಾತಂತ್ರ್ಯ ಬಂದಾಗ ದೇಶದಲ್ಲಿ ಆಡಳಿತ ವ್ಯವಸ್ಥೆ ಗಟ್ಟಿಯಾಗಿ ನಿಲ್ಲಬೇಕು. ಜ್ವಲಂತ ಸಮಸ್ಯೆಗಳಿಗೆ ಉತ್ತರ ಸಿಗಬೇಕು. ಉತ್ತಮ ಆಡಳಿತ ನೀಡಬೇಕು ಎನ್ನುವ ನಿಟ್ಟಿನಲ್ಲಿ ಸಂವಿಧಾನ ಅರ್ಪಿಸಿಕೊಳ್ಳಲಾಯಿತು. ಸಂವಿಧಾನದ ಆಶಯಗಳನ್ನು ಎತ್ತಿಹಿಡಿಯುವ ಕೆಲಸ ನಿರಂತರವಾಗಿ ನಡೆದಿದೆ ಎಂದು ಹೇಳಿದರು.

    ಮೊದಲ ಬಾರಿಗೆ ಸಿದ್ಧಾರ್ಥ ಗ್ರಾಮಾಂತರ ಶಾಲೆ ಸ್ಥಾಪಿಸಲಾಯಿತು. ಈ ಶಾಲೆಯು ನನ್ನನ್ನು‌ ಒಳಗೊಂಡಂತೆ ಸಾವಿರಾರು ವಿದ್ಯಾರ್ಥಿಗಳಿಗೆ ಭವಿಷ್ಯ ಕಟ್ಟಿಕೊಳ್ಳಲು ನೆರವಾಗಿದೆ. ಅನೇಕರು ಸಾರ್ವಜನಿಕ ಬದುಕಿನಲ್ಲಿ ದುಡಿಯುತ್ತಿದ್ದಾರೆ. ಕಿರೀಟದಂತಿರುವ ಮೆಡಿಕಲ್ ಕಾಲೇಜು, ತಾಂತ್ರಿಕ ಕಾಲೇಜು, ದಂತ ವೈದ್ಯಕೀಯ ಕಾಲೇಜುಗಳ ವಿದ್ಯಾರ್ಥಿಗಳು ಪ್ರಪಂಚದಾದ್ಯಂತ ರಾಯಭಾರಿಗಳಾಗಿ ಉನ್ನತ‌ಹುದ್ದೆಗಳನ್ನು‌ ಅಲಂಕರಿಸಿದ್ದಾರೆ ಎಂದು ತಿಳಿಸಿದರು.

    ಎಲ್ಲರ ಭವಿಷ್ಯ ಉಜ್ವಲವಾಗಲಿ. ಭವ್ಯಭಾರತದ ಅಭಿವೃದ್ಧಿಗೆ ನಿಮ್ಮ ಪಾಲು ಇರಲಿ. ನಿವೆಲ್ಲರು ಉಜ್ವಲ ಭವಿಷ್ಯ ಕಟ್ಟಿಕೊಳ್ಳುವಂತಾಗಲಿ. ಸಂವಿಧಾನದ ಮಹತ್ವವನ್ನು ಅರಿತುಕೊಂಡು ದೇಶಕ್ಕೆ‌ ಮಹತ್ತರ ಕೊಡುಗೆ ನೀಡಿ ಎಂದು ಹೇಳಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap